Advertisement
ಕುಕ್ಕೆ ಸುಬ್ರಹ್ಯಣ್ಯಕ್ಕೆ ಹೋಗಲು ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ.ಶಿ. ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಚನ್ನಪ ಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡ ವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಅವರು ಟಾಂಗ್ ನೀಡಿದರು.
ಕ್ಷೇತ್ರಕ್ಕೆ ಭೇಟಿ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು, “ನಾವು ಹಿಂದೂ ಧರ್ಮ ದವರು. ರಾಜ್ಯದಲ್ಲಿ ಎಲ್ಲ ಸಂಸ್ಕೃತಿ ಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಬಹಳ ದಿನಗಳಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಈಡೇರಿದೆ ಎಂದರು.
Related Articles
ಹೆಚ್ಚುವರಿ ಡಿಸಿಎಂ ಸ್ಥಾನಗಳ ಬೇಡಿಕೆ ಬಗ್ಗೆ ಉತ್ತರಿಸಿದ ಅವರು, ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರಿಗೆ ಬೇಡ ಎಂದು ಹೇಳಲು ಆಗುವುದೇ? ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಕ್ಷವು ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ ಎಂದರು.
Advertisement
ಮೈನಿಂಗ್ ಬಗ್ಗೆ ಗೊತ್ತಿಲ್ಲ“ನಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರಕಾರ ಅನುಮತಿ ನೀಡುತ್ತಿಲ್ಲ’ ಎಂಬ ಕುಮಾರ ಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ. ಅವರು “ಮೈನಿಂಗ್ ಬಗ್ಗೆ ಕುಮಾರಸ್ವಾಮಿ ಯವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಆ ಬಗ್ಗೆ ಏನೂ ಗೊತ್ತಿಲ್ಲ’ ಎಂದರು. ಅರಣ್ಯ ಸಮಸ್ಯೆ: ಕಾನೂನು ತಿದ್ದುಪಡಿ
ಸುಬ್ರಹ್ಮಣ್ಯ: ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ಕೊಡುವ, ಅವರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ. ಹಾಗಾಗಿ ಅರಣ್ಯ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮಂಗಳವಾರ ಅವರು ಪತ್ರಕರ್ತ ರೊಂದಿಗೆ ಮಾತನಾಡಿ, ಕೇಂದ್ರ ಮತ್ತು ನಮ್ಮ ಸರಕಾರ ಕೇವಲ ಪರಿಶಿಷ್ಟ ಪಂಗಡದವರಿಗೆ (ಎಸ್.ಟಿ.) ಒಂದು ಕಾನೂನು ಮಾಡಿದ್ದು ಅದರಲ್ಲಿ ಅವರಿಗೆ 25 ವರ್ಷದಿಂದ ಅರಣ್ಯದಲ್ಲಿ ಇರುವವರಿಗೆ ಜಮೀ ನು ಕೊಡಬಹುದೆಂಬ ಕಾನೂನು ಇದೆ. ಇದರಿಂದ ತಾರತಮ್ಯವಾಗಿದೆ ಎಂಬ ದೂರಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದು ಬೇರೆ ಜನಾಂಗದ ರೈತರಿಗೂ ರಕ್ಷಣೆ ಕೊಡಲು ಕಾನೂನು ತಿದ್ದುಪಡಿ ಮಾಡಿ ದಿಲ್ಲಿಗೆ ಕಳುಹಿಸಲಾಗುವುದು. ಅಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ನಂದಿನಿ ಹಾಲಿನ ಬೆಲೆ ಹೆಚ್ಚಳ
ಹುಲ್ಲಿನ ಬೆಲೆ, ದಿನಸಿ ಬೆಲೆಗಳು ಜಾಸ್ತಿಯಾಗಿದ್ದು, ರೈತರಿಗೂ ತೊಂದ ರೆಯಾಗಿತ್ತು. ನೀರಿನ ಬೆಲೆಯೂ ಜಾಸ್ತಿಯಾಗಿದೆ. ರೈತರಿಗೆ ಸಿಗುವ ಹಾಲಿನ ಬೆಲೆ ಕಡಿಮೆ ಯಾಗಿತ್ತು, ರೈತರ ಒತ್ತಾಯದ ಮೇಲೆ ಹಾಲಿನ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಹಾಲಿನ ಬೆಲೆ ಏರಿಕೆ ಪ್ರಶ್ನೆಗೆ ಉತ್ತರಿಸಿದರು. ಇನ್ನೊಮ್ಮೆ ಮಾತನಾಡೋಣ
ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಚರ್ಚೆಗೆ ಸಂಬಂಧಿಸಿದ ಪ್ರಶ್ನೆಗೆ, ಇನ್ನೊಮ್ಮೆ ಮಾತನಾಡೋಣ ಎಂದರು. 3-4 ಡಿಸಿಎಂ ಹುದ್ದೆ ಬೇಡಿಕೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಹಲವು ಬಾರಿ ಉತ್ತರಿಸಿದ್ದು ಈ ವಿಚಾರ ಇನ್ನೊಮ್ಮೆ ಮಾತನಾಡೋಣ ಎಂದರು. ನಾನು ಕುಟುಂಬ ಸಮೇತ ಕುಕ್ಕೆಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಎಲ್ಲರ ಶಾಂತಿ ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಮಳೆ ಕಡಿಮೆ ಆಗಿದ್ದು ನೀರಿನ ಸಮಸ್ಯೆ ಆಗಿದೆ. ಮಳೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು ಡಿಸಿಎಂ. ಶಕ್ತಿ ಯೋಜನೆಯಡಿ ಪ್ರಯಾಣಿ ಕರಿಗೆ ಪ್ರಯೋಜನವಾಗಿದೆ ಎಂದ ಅವರು ಕುಕ್ಕೆಯಲ್ಲಿ ಬಸ್ ಡಿಪೋ ಬೇಡಿಕೆ ಬಗ್ಗೆ ಗಮನಕ್ಕೆ ಬಂದಿಲ್ಲ. ಜನರು ಕೇಳಲಿ ಎಂದು ಉತ್ತರಿಸಿದ ಘಟನೆಯೂ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆ ಸಂಬಂಧ ಪ್ರಸ್ತಾವನೆ ಸರಕಾರದ ಮುಂದಿದೆ. ಕಾರ್ಯಕರ್ತರ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆದು, ಧಾರ್ಮಿಕವಾಗಿ ದೇವ ಸ್ಥಾನದ ಗೌರವ, ಘನತೆ ನೋಡಿ ಕೊಂಡು ಚರ್ಚಿಸಿ ಸರಕಾರಕ್ಕೆ ಅಂತಿಮ ನಿರ್ಧಾರ ತಿಳಿಸಲಾಗುವುದು ಎಂದರು. ಕುಕ್ಕೆಗೆ ಸುಸಜ್ಜಿತ ಆಸ್ಪತ್ರೆಗೆ ಪ್ರಯತ್ನ
ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಅಸ್ಪತ್ರೆ ಸಂಬಂಧಿಸಿದಂತೆ ಜಿಲ್ಲಾ ಉಸ್ತು ವಾರಿ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಚರ್ಚಿಸುತ್ತೇವೆ, ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದರು. ಬಿಜೆಪಿಯ ಪ್ರೀತಂ ಗೌಡ ಮೇಲೆ ವೀಡಿಯೋ ವೈರಲ್ ಸಂಬಂಧ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದರು.