Advertisement

ಗ್ರಾಹಕರ ಮನೆ ಬಾಗಿಲಿಗೆ ಡಿಸಿಸಿ ಬ್ಯಾಂಕ್‌ ಸೇವೆ

02:21 PM Oct 27, 2020 | Suhan S |

ಕೋಲಾರ: ದುರ್ಗಾಮಾತೆಯ ಪ್ರತಿರೂಪದಂತಿರುವ ನಗರದೇವತೆ ಕೋಲಾರಮ್ಮನ ಕೃಪೆಯಿಂದ ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್‌ನ್ನು ಜನಮಾನಸದಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಿ ಬಡ ಮಹಿಳೆಯರು, ರೈತರ ಆರ್ಥಿಕಾಭಿವೃದ್ಧಿಗೆ ನೆರವು ಒದಗಿಸಿದ ಸಂತೃಪ್ತಿ ಇದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಸೋಮವಾರ ಬ್ಯಾಂಕ್‌ನ ಆವರಣದಲ್ಲಿ ನಡೆದ ಆಯುಧಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿದ್ದೇನೆ ಎಂಬ ಅಹಂಇಲ್ಲ, ಆದರೆ ನನಗೆ ಸಿಕ್ಕಿರುವ ಅವಕಾಶದಲ್ಲಿ ದಿವಾಳಿಯಾಗಿ, ಬಡವರಿಗೆ ನೆರವಾಗುವ ಶಕ್ತಿಕಳೆದುಕೊಂಡಿದ್ದ ಬ್ಯಾಂಕ್‌ಗೆ ಶಕ್ತಿ ತುಂಬಿದ್ದೇನೆ ಎಂದರು.

ಪಾರದರ್ಶಕತೆ ಬಲಗೊಳಿಸಲು ಬ್ಯಾಂಕ್‌ ವ್ಯಾಪ್ತಿಯ 200 ಸೊಸೈಟಿಗಳ ಗಣಕೀಕರಣ, ಮೈಕ್ರೋ ಎಟಿಎಂ ಮೂಲಕ ಮಹಿಳೆಯರು, ರೈತರಮನೆಬಾಗಿಲಿಗೆ ಬ್ಯಾಂಕಿಂಗ್‌ ಸೇವೆ ಒದಗಿಸಿದ್ದೇವೆ.ಆಡಳಿತ ಮಂಡಳಿ ಶ್ರಮ, ಸಿಬ್ಬಂದಿಯ ಕರ್ತವ್ಯನಿಷ್ಠೆ, ಎರಡೂ ಜಿಲ್ಲೆಗಳ ಶಾಸಕರು, ವಿಧಾನಪರಿಷತ್‌ ಸದಸ್ಯರೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಪ್ರೀತಿ, ವಿಶ್ವಾಸ, ನಬಾರ್ಡ್‌, ಅಪೆಕ್ಸ್‌ ಬ್ಯಾಂಕ್‌ ಸಹಕಾರದಿಂದಾಗಿ ದ್ವೇಷ ರಾಜಕಾರಣ ಮೆಟ್ಟಿನಿಂತು ಬ್ಯಾಂಕ್‌ ಬಡವರ,ಮಹಿಳೆಯರ ಬ್ಯಾಂಕಾಗಿ ಉಳಿದಿದೆ ಎಂದು ತಿಳಿಸಿದರು.

ದಿವಾಳಿಯಾದಾಗ ಮಾತನಾಡಲಿಲ್ಲ: ಬ್ಯಾಂಕ್‌ ದಿವಾಳಿಯಿಂದಾಗಿ ಬಡ್ಡಿಮನ್ನಾ, ಕಡಿಮೆ ಬಡ್ಡಿ ಸಾಲ, ಸಾಲಮನ್ನಾದಂತಹ ಸೌಲಭ್ಯಗಳಿಂದ ಜಿಲ್ಲೆಯ ಜನತೆ ವಂಚಿತರಾಗಿದ್ದ ಸಂದರ್ಭದಲ್ಲಿ ಯಾರೂ ಬ್ಯಾಂಕ್‌ ಬಗ್ಗೆ ಮಾತನಾಡಲೇ ಇಲ್ಲ, ಬ್ಯಾಂಕ್‌ ಉಳಿಸುವ ಪ್ರಯತ್ನವೂ ಮಾಡಲಿಲ್ಲ. ಆದರೆ ಇದೀಗ ನಮ್ಮ ಆಡಳಿತ ಮಂಡಳಿ ನಡೆಸಿದ ಪ್ರಾಮಾಣಿಕ ಪ್ರಯತ್ನದಿಂದ ಬ್ಯಾಂಕ್‌ ಉಳಿದಿದೆ. ಸಾಲ ಮನ್ನಾ ಯೋಜನೆಗಳಿಂದ ಬ್ಯಾಂಕ್‌ ಗ್ರಾಹಕ ರೈತರಿಗೆ 330 ಕೋಟಿ ರೂ. ಲಾಭವಾಗಿದೆ ಎಂದು ತಿಳಿಸಿದರು.

44 ಕೋಟಿ ನಷ್ಟದಲ್ಲಿದ್ದ ಬ್ಯಾಂಕ್‌ ಕಥೆ ಮುಗಿಯಿತು, ಬೆಂಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್‌ಜತೆ ವಿಲೀನ ಕೂಗು ಎಲ್ಲೆಡೆ ಮಾರ್ಧನಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಎಂಬುದು ಉಳಿದಿದೆ ಎಂದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗಿರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿ, ಸಹಕಾರಿ ಯೂನಿಯನ್‌ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಮುಖಂಡರಾದ ಶ್ರೀನಿವಾಸ್‌, ಬ್ಯಾಂಕ್‌ನ ಅಧಿಕಾರಿಗಳಾದ ಖಲೀಮುಲ್ಲಾ, ನಾಗೇಶ್‌, ಹುಸೇನ್‌ಸಾಬ್‌ ದೊಡ್ಡಮನಿ, ಪದ್ಮಮ್ಮ, ತಿಮ್ಮಯ್ಯ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next