ಚಾಮರಾಜನಗರ: ಕುಂತೂರಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ, ಯಳಂದೂರು ತಾಲೂಕಿನ ಅಂಬಳೆ, ತಾಲೂಕಿನ ವಿವಿಧ ಆಲೆಮನೆಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭೇಟಿ ನೀಡಿ ಪರಿಶೀಲಿಸಿದರು.
ಕಬ್ಬು ಕಟಾವಿಗೆ ಬಂದಿರುವ ಈ ಸಂದರ್ಭದಲ್ಲಿ ರೈತರ ಹಿತದೃಷ್ಟಿಯಿಂದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆರಂಭಿಸಲು ಷರತ್ತುಬದಟಛಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾ ನೆಯ ಪ್ರತಿ ವಿಭಾಗಕ್ಕೆ ಭೇಟಿ ನೀಡಿ ಕಾರ್ಮಿಕರ ನಿಯೋ ಜನೆ, ಕಾರ್ಖಾನೆ ಕಾರ್ಯಾವಧಿ ಬಗ್ಗೆ ಮಾಹಿತಿ ಪಡೆದರು.
ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಮುಂಜಾಗ್ರತಾ ಕ್ರಮಗಳಾದ ಸೋಪು, ಸ್ಯಾನಿಟೈಸರ್, ಸುರಕ್ಷತಾ ಸಾಧನಗಳನ್ನು ವೀಕ್ಷಿಸಿದರು. ಕಾರ್ಮಿಕರಿಗೆ ಪ್ರತಿದಿನ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಬೇಕು. ಅಗತ್ಯವಿರುವವರಿಗೆ ಆರೋಗ್ಯ ತಪಾಸಣೆ ಮಾಡ ಬೇಕು. ಕಾರ್ಮಿಕರ ಸುರಕ್ಷತೆಗೆ ಗರಿಷ್ಠ ಪ್ರಮಾಣದಲ್ಲಿ ಆದ್ಯತೆ ನೀಡಬೇಕು. ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ತಾಲೂಕಿನ ಕಾಗಲವಾಡಿ ಹಾಗೂ ಯಳಂದೂರು ತಾಲೂಕಿನ ಅಂಬಳೆಯ ಕೆಲ ಆಲೆಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಆಲೆಮನೆ ಕಾರ್ಮಿಕರ ಸಮಸ್ಯೆ ಗಳನ್ನು ಆಲಿಸಿದರು. ಆಲೆಮನೆಗಳಲ್ಲಿ ಬೆಲ್ಲ ತಯಾರಿಕೆ, ಲಭಿಸುತ್ತಿರುವ ಮಾರುಕಟ್ಟೆ, ಬಂಡವಾಳಕ್ಕೆ ಸರಿಯಾದ ಪ್ರತಿಫಲ, ಲಾಭ ಹೇಗೆ ಸಿಗುತ್ತಿದೆ ಎಂಬ ಬಗ್ಗೆ ಆಲೆಮನೆ ನಿರ್ವಹಿಸುತ್ತಿರುವ ರೈತರು, ಮಾಲೀಕರಿಂದ ಜಿಲ್ಲಾಧಿ ಕಾರಿ ಮಾಹಿತಿ ಪಡೆದರು.
ಕುಂತೂರು ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ, ಉಪ ವಿಭಾಗಾಧಿಕಾರಿ ನಿಖೀತಾ ತಹಶೀಲ್ದಾರ ರಾದ ಮಹೇಶ್, ಕುನಾಲ್, ಆಹಾರ ಇಲಾಖೆ ಉಪ ನಿರ್ದೇಶಕ ಆರ್.ರಾಚಪ್ಪ ಇತರೆ ಅಧಿಕಾರಿಗಳು ಹಾಜರಿದ್ದರು.