Advertisement

ಆ್ಯಂಟಿಜನ್‌ ಪರೀಕ್ಷಾ ಸ್ಥಳಕ್ಕೆ ಡಿಸಿ ಭೇಟಿ

01:47 PM Aug 03, 2020 | Suhan S |

ಯಾದಗಿರಿ: ನಗರದ ಲಾಡಿಜ್‌ ಗಲ್ಲಿಯಲ್ಲಿ ರವಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ. ಕೂರ್ಮ ರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್‌ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಿಗೆ, 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗುರುತಿಸಿದ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಿ, ಫಲಿತಾಂಶ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪೌರಾಯುಕ್ತ ಬಕ್ಕಪ್ಪ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. 298 ನೆಗೆಟಿವ್‌, 9 ಪಾಸಿಟಿವ್‌ ದೃಢ: ಯಾದಗಿರಿ ತಾಲೂಕಿನ ಯಾದಗಿರಿ ನಗರದ ಲಾಡಿಜ್‌ ಗಲ್ಲಿಯಲ್ಲಿ ಒಟ್ಟು 85 ಪರೀಕ್ಷೆ ನಡೆಸಲಾಗಿ, ಅದರಲ್ಲಿ 83 ಆರ್‌ ಟಿಪಿಸಿಆರ್‌ ಹಾಗೂ 2 ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಗಳಾಗಿದ್ದು, ಅವೆಲ್ಲವುಗಳ ಫಲಿತಾಂಶ ನೆಗೆಟಿವ್‌ ಆಗಿದೆ. ಮುಸ್ಲಿಂಪುರದಲ್ಲಿ ಒಟ್ಟು 33 ಜನರ ಮಾದರಿ ಪರೀಕ್ಷೆ ನಡೆಸಲಾಗಿ, 29 ಆರ್‌ಟಿಪಿಸಿಆರ್‌ ಹಾಗೂ 4 ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಗಳಾಗಿವೆ. ಅವುಗಳ ಫಲಿತಾಂಶಗಳು ನೆಗೆಟಿವ್‌ ಆಗಿವೆ.

ಮೂಕಾಂಬಿಕಾ ಶಾಲಾ ಪ್ರದೇಶದ ವ್ಯಾಪ್ತಿಯಲ್ಲಿ 75 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 64 ಆರ್‌ಟಿಪಿಸಿಆರ್‌ ಹಾಗೂ 11 ರ್ಯಾಪಿಡ್‌ ಆಂಟಿಜನ್‌ ಪರೀಕ್ಷೆ ನಡೆಸಲಾಗಿದೆ. 74 ನೆಗೆಟಿವ್‌ ಫಲಿತಾಂಶ ಪ್ರಕಟವಾಗಿ, ಒಂದು ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ. ಗುರುಮಠಕಲ್‌ ತಾಲೂಕಿನ ಗಡಿ ಮೊಹಲ್ಲಾದಲ್ಲಿ ಒಟ್ಟು 45 ಜನರಿಗೆ ಪರೀಕ್ಷೆ ನಡೆಸಲಾಗಿದ್ದು ಎಲ್ಲವೂ ನೆಗೆಟಿವ್‌ ವರದಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next