Advertisement
ಬಬಲಾದ ಗ್ರಾಮದ ಹತ್ತಿರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ತ್ಯಾಜ್ಯ ನಿರ್ವಹಣಾ ಘಟಕ ಪರಿಶೀಲಿಸಿದ ಅವರು, ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಸ್ಪತ್ಛ ಭಾರತ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ತಿಳಿಸಿದರು. ಕಸದಿಂದ ಗೊಬ್ಬರ ತಯಾರಿಕೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸಿ ಸಿಮೆಂಟ್ ಕಂಪನಿಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ಹಲವಾರು ದಿನಗಳಿಂದ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸಲು ಹಾಗೂ ತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲ (ಕಾರ್ಮಿಕರನ್ನು) ನಿಯೋಜಿಸಿಕೊಂಡು ತುರ್ತಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು. ಈ ವೇಳೆ ನಗರಸಭೆ ಪೌರಾಯುಕ್ತ ಬಕ್ಕಪ್ಪ ಹೊಸಮನಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಗೌಡ, ಪರಿಸರ ಇಂಜಿನಿಯರ್ ಸಂಗಮೇಶ, ಕಿರಿಯ ಇಂಜಿನಿಯರ್ ಲಿಂಗಾರೆಡ್ಡಿ ಇತರರು ಇದ್ದರು.
Related Articles
Advertisement
ಕಂದಾಯ ಇಲಾಖೆ ಗ್ರಾಮ ಸೇವಕರಿಂದ ತಹಶೀಲ್ದಾರ್ ವರೆಗೆ ಮಧ್ಯವರ್ತಿ ಸೃಷ್ಟಿ ಮಾಡಿ ರೈತರ ಶೋಷಣೆ ನಡೆಯುತ್ತಿದೆ ಎಂದು ದೂರಿದ್ದಾರೆ. ಭೂಮಾಪನ ಇಲಾಖೆಯಲ್ಲಿ ಲಂಚವಿಲ್ಲದೇ ಕೆಲಸಗಳು ಆಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಯೋಜನೆಗಳು ನೇರವಾಗಿ ರೈತರು, ಬಡವರಿಗೆ ತಲುಪುವಂತೆ ಮಾಡಿ ಕ್ರಮವಹಿಸಲು ಆಗ್ರಹಿಸಿದ್ದಾರೆ. ರಾಜ್ಯ ಕಾರ್ಯಕಾರಣಿ ಸದಸ್ಯ ಜಿ. ಚನ್ನಾರೆಡ್ಡಿ ಗೌಡ ಮನವಿ ಸಲ್ಲಿಸಿದರು.
ಈ ವೇಳೆ ವೆಂಕೋಬಾ ಕಟ್ಟಿಮನಿ, ಮಹಾದೇವರಡ್ಡಿ, ಮರಿಲಿಂಗಪ್ಪ ತಡಿಬಿಡಿ, ಹಣಮಂತ್ರಾಯ ಗುರುಸಣಿಗಿ ಸೇರಿದಂತೆ ಹಲವು ರೈತರು ಇದ್ದರು.