ಗಂಗಾವತಿ: ಸರಕಾರದ ಒಡೆತನದಲ್ಲಿರುವ ದೇವಾಲಯ ಸ್ಮಾರಕಗಳ ನ ಖಾಸಗಿ ವ್ಯಕ್ತಿಗಳು ಜೀರ್ಣೋದ್ಧಾರ ಮಾಡಲು ಅವಕಾಶವಿದ್ದು ಪುರಾತತ್ವ ಇಲಾಖೆಯ ನಿಯಮಾನುಸಾರ ಪಂಪಾ ಸರೋವರದಲ್ಲಿ ಜೀರ್ಣೋದ್ಧಾರ ಕಾರ್ಯವಾಗಿಲ್ಲ. ಆದ್ದರಿಂದ ಕೆಲವು ಸಮಸ್ಯೆಗಳು ಎದುರಾಗಿದ್ದು ಕೂಡಲೇ ಜೀರ್ಣೋದ್ಧಾರ ಕಾರ್ಯ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಸುರಲ್ಕರ್ ವಿಕಾಸ್ ಕಿಶೋರ್ ಕಾಮಗಾರಿ ಮಾಡುವವರಿಗೆ ಸೂಚನೆ ನೀಡಿದರು .
ಅವರು ಬುಧವಾರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪಂಪಸರೋವರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು .
ಪುರಾತತ್ವ ಇಲಾಖೆಯ ಪರವಾನಿಗೆಯೊಂದಿಗೆ ಪಂಪಾಸರೋವರದ ಜೀರ್ಣೋದ್ಧಾರ ಮತ್ತು ಮುಖ ಮಂಟಪದ ಅಭಿವೃದ್ಧಿ ಕಾರ್ಯವನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ ಮಾಡಲು ಪರವಾನಗಿ ನೀಡಲಾಗಿತ್ತು . ಆದರೆ ಇಲ್ಲಿ ಕಾಮಗಾರಿ ನಿರ್ವಹಿಸುವವರು ಅಧಿಕಾರಿಗಳ ಗಮನಕ್ಕೆ ತರದೆ ಗರ್ಭಗುಡಿಯ ಅಗೆದು ಮೂರ್ತಿ ಮತ್ತು ಶ್ರೀ ಚಕ್ರವನ್ನು ಸ್ಥಳಾಂತರ ಮಾಡಿರುವ ಬಗ್ಗೆ ವಿವಾದ ಸೃಷ್ಟಿಯಾಗಿದೆ ಆದ್ದರಿಂದ ತಹಸಿಲ್ದಾರ್ ಮಟ್ಟದ ಅಧಿಕಾರಿಗಳು ಇಲ್ಲಿ ನಡೆದ ಘಟನೆಯ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ: ಕಾಂಗ್ರೆಸ್ ಪ್ರೇರಿತ ಈ ಟೂಲ್ ಕಿಟ್ ಗೆ ಬಗ್ಗಬೇಕಿಲ್ಲ: ಬಿಜೆಪಿ ಹೈಕಮಾಂಡ್
ಕಾಮಗಾರಿ ನಡೆಯುವಾಗ ಪುರಾತತ್ವ ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲ್ಲೂಕ ಮಟ್ಟದ ಕಂದಾಯ ಅಧಿಕಾರಿಗಳು ಯಾಕೆ ಉಪಸ್ಥಿತರಿರಲಿಲ್ಲ ಎಂಬ ಬಗ್ಗೆ ಸುದೀರ್ಘ ವರದಿಯನ್ನು ಪಡೆದು ಪರಿಶೀಲಿಸಿದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ .ಕಳೆದ ಮೇ 25 ರಂದು ಪಂಪಾಸರೋವರದ ಜಯಲಕ್ಷ್ಮಿ ದೇಗುಲದ ಮೂರ್ತಿ ಮತ್ತು ಶ್ರೀ ಚಕ್ರವನ್ನು ಅಕ್ರಮವಾಗಿ ಬೇರೆಡೆ ಸ್ಥಳಾಂತರಿಸಿದ ವಿವಾದ ಉಂಟಾಗಿತ್ತು.ಸಂಬಂಧಪಟ್ಟ ಪುರಾತತ್ವ ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲ್ಲೂಕಾ ಆ ದೇಶದ ಅಧಿಕಾರದ ವೈಫಲ್ಯ ಎದ್ದು ಕಾಣುತ್ತದೆ ವರದಿಯನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಅಲ್ಲಿವರೆಗೂ ಜೀರ್ಣೋದ್ಧಾರ ಕಾಮಗಾರಿ ಮಾಡುವವರು ಕೂಡಲೇ ಕಾಮಗಾರಿ ಸ್ಥಗಿತ ಮಾಡಬೇಕೆಂದರು.
ಪಂಪಾಸರೋವರದ ಜಯಲಕ್ಷ್ಮಿ ದೇವಾಲಯ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ವಿಫಲವಾಗಿರುವುದರಿಂದ ಮೂರ್ತಿಯ ಪ್ರತಿಷ್ಠಾಪನೆ ಶ್ರೀಚಕ್ರದ ಪ್ರಸ್ತಾವನೆಯು ಸರ್ಕಾರದ ಪ್ರೋಟ ಕಾಲ್ ಪ್ರಕಾರ ಮಾಡಲಾಗುತ್ತದೆ ಈ ಕುರಿತು ಮೇಲಾಧಿಕಾರಿಗಳ ಸಂಪರ್ಕದೊಂದಿಗೆ ಕಾರ್ಯ ಮಾಡಲಾಗುತ್ತದೆ .ಅಲ್ಲಿಯವರೆಗೂ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಯು ನಾಗರಾಜ ಸೇರಿದಂತೆ ತಾಲೂಕ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಇದ್ದರು.