Advertisement
ಹೆಬ್ರಿ ತಾಲೂಕು ಘೋಷಣೆಗೊಂಡು ಸುಮಾರು ಎರಡು ವರ್ಷಗಳಾಗುತ್ತಾ ಬಂದರೂ ಇನ್ನೂ ಪೂರ್ಣ ಪ್ರಮಾಣದ ತಾಲೂಕು ಕಾರ್ಯಾರಂಭವಾಗದ ಕುರಿತು, ಜನರ ಪ್ರಮುಖ ಬೇಡಿಕೆಯಾದ ಆಧಾರ್, ಅಟಲ್ ಜೀ ಸೇವಾ ಕೇಂದ್ರ ಮೊದಲಾದ ತುರ್ತು ಕಚೇರಿಗಳ ಕೆಲಸ ಆರಂಭವಾಗದ ಬಗ್ಗೆ ಹೆಬ್ರಿ ತಹಶೀಲ್ದಾರ್ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ ತುರ್ತು ಸೇವೆಗಳ ಕಚೇರಿಯನ್ನು ಶೀಘ್ರ ಆರಂಭಿಸಲಿದ್ದು ತಾಲೂಕಿನ ವಿವಿಧ ಇಲಾಖೆಗಳನ್ನು ಕೂಡಲೇ ತರುವಂತೆ ಪ್ರಯತ್ನಿಸಲಾಗುವುದು ಎಂದರು. ತಹಶೀಲ್ದಾರ್‌ಗೆ ಮೆಚ್ಚುಗೆ
ಸಕಾಲ ಸೇವೆಗಳ ಆಧಿನಿಯಮದಡಿ ನಿಗದಿತ ಕಾಲಮಿತಿಯಲ್ಲಿ ರಾಜ್ಯದ ನಾಗರಿಕರಿಗೆ ಸೇವೆ ಒದಗಿಸಿ ತಮ್ಮ ಕರ್ತವ್ಯಪ್ರಜ್ಞೆಯಿಂದ ಕೆಲಸ ನಿರ್ವಹಿಸಿ ಪ್ರಮುಖ ಪಾತ್ರ ವಹಿಸಿದ್ದ ಹೆಬ್ರಿ ತಾಲೂಕು ತಹಶೀಲ್ದಾರ್ ಮಹೇಶ್ಚಂದ್ರ ಅವರ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್,ಹೆಬ್ರಿ ಗ್ರಾ.ಪಂ.ಅಧ್ಯಕ್ಷ ಎಚ್.ಕೆ. ಸುಧಾಕರ್ ಮೊದಲಾದವರಿದ್ದರು.