ಹನೂರು: ಗ್ರಾಮಸ್ಥರು ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ನಿವಾರಿಸಲು ಗ್ರಾಮ ವಾಸ್ತವ್ಯಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಜಿ.ಎಚ್ .ನಾಗರಾಜು ತಿಳಿಸಿದರು.
ತಾಲೂಕಿನ ಭೈರನತ್ತ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆವತಿಯಿಂದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
99 ದೂರುಗಳು ಸಲ್ಲಿಕೆ: ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಪೌತಿ ಖಾತೆ, ಪಹಣಿ ತಿದ್ದುಪಡಿ, ಪಿಂಚಣಿ ಸವಲತ್ತು, ಸಾಗುವಳಿ ಚೀಟಿ, ದಾರಿ ಸಮಸ್ಯೆಗೆ ಸಂಬಂಧಿಸಿದಂತೆ 49 ದೂರುಗಳು ಸಲ್ಲಿಕೆಯಾದವು. ಪಂಚಾಯತ್‌ರಾಜ್ ಇಲಾಖೆಯ ರಸ್ತೆ, ಚರಂಡಿ, ಇ-ಸ್ವತ್ತು, ಮನೆ ನಿರ್ಮಾಣಕ ಸ್ಕೆ ಂಬಂಧಿಸಿದಂತೆ 37 ದೂರು ಗಳು ಸಲ್ಲಿಕೆಯಾದವು. ಇನ್ನುಳಿದಂತೆ ಅಂಗನ ವಾಡಿ ಕಟ್ಟಡ, ಸೆಸ್ಕ್, ಸಣ್ಣ ಕೈಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಒಟ್ಟು 99 ದೂರುಗಳು ಸಲ್ಲಿಕೆಯಾವು. ಬಳಿಕ ಅಧಿಕಾರಿಗಳ ತಂಡ ಗ್ರಾಮಗಳಿಗೆ ನಾಗನತ್ತ, ಮಣಗಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಚೆಂಗವಾಡಿ- ಭೈರನತ್ತ- ನಾಗನತ್ತ- ತೋಮೊಯರ್ ಪಾಳ್ಯ ರಸ್ತೆಯ ಅವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿದ ಪಿಡಬ್ಲ್ಯೂಡಿ ಜೆಇ ರಮೇಶ್ ಕುಮಾರ್ ಮತ್ತು ಚಿನ್ನಣ್ಣ, ಸಮಸ್ಯೆ ಬಗ್ಗೆ ಈಗಾಗಲೇ ಶಾಸಕರು ಮತ್ತು ಇಲಾಖಾಯಿಂದ ಸರ್ಕಾರಕ್ಕೆ ಪತ್ರ ಬರೆದಿದ್ದು ಹಂತಹಂತವಾಗಿ ಅನುದಾನ ಬಿಡುಗಡೆಗೊಳಿಸಿ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದರು. ಬಳಿಕ ನಾಗನತ್ತ ಗ್ರಾಮದಲ್ಲಿ ವಿದ್ಯಾರ್ಥಿಗಳ ಶಾಲಾ ಕೊಠಡಿ ಅಭಾವದ ಸಮಸ್ಯೆ ಪ್ರಸ್ತಾಪಿಸಿ ಶಾಲಾ ಕಟ್ಟಡಕ್ಕೆ ನೀಡಿರುವ ಜಮೀನು ವಿವಾದಾತ್ಮಕ ಜಮೀನಾಗಿದ್ದು 2 ಬಾರಿ ಅನುದಾನ ಮಂಜೂರಾಗಿ ವಾಪಸ್ಸಾಗಿದೆ. ಇದೀಗ 3ನೇ ಬಾರಿ ಅನುದಾನ ನೀಡಲಾಗಿದ್ದು ಕೊಠಡಿ ನಿರ್ಮಾಣ ಮಾಡಲು ಸಾಧ್ಯ ವಾಗುತ್ತಿಲ್ಲ. ಹೀಗಾಗಿ 3ನೇ ಬಾರಿಯೂ ಅನುದಾನ ವಾಪಸ್ಸಾಗುವ ಮುನ್ನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಬಿಇಒ ಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ರಘುವೀರ್, ವೈದ್ಯಾಧಿಕಾರಿ ಡಾ| ಪ್ರಕಾಶ್, ರಾಜಸ್ವ ನಿರೀಕ್ಷಕ, ಮಾದೇಶ್, ಸೆಸ್ಕ್ ಎಇಇ ಶಂಕರ್, ಗ್ರಾಮ ಲೆಕ್ಕಿಗಾರದ ಶೇಷಣ್ಣ, ವಿಷ್ಣು, ಪುನೀತ್ ಇತರರಿದ್ದರು.