Advertisement

ಇ-ಆಫೀಸ್ ಗೆ ಡಿಸಿ ಚಾಲನೆ

01:58 PM Oct 02, 2019 | Suhan S |

ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಮಂಗಳವಾರ ಬೆಳಿಗ್ಗೆ ಜಿಲ್ಲಾಡಳಿತ ಕಚೇರಿಯಲ್ಲಿ ಇ-ಆಫೀಸ್ ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇ-  ಆಫೀಸ್ ನಿಂದ ಕಡತಗಳ ವಿಲೇವಾರಿಗೆ ವೇಗ ಮತ್ತು ನಿಖರತೆ ಸಿಗಲಿದೆ. ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಸೆಪ್ಟೆಂಬರ್‌ 30 ರೊಳಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಇ- ಆಫೀಸ್ ನಲ್ಲಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಸಿದ್ಧತೆ ಮಾಡಿಕೊಳ್ಳಬೇಕು. ಅಕ್ಟೋಬರ್‌ 1ರಿಂದ ಇ-ಆಫೀಸ್ ನಲ್ಲಿ ಕಡತಗಳ ವಿಲೇವಾರಿ ಆಗಬೇಕು ಎಂದು ಸೂಚಿಸಿದನ್ವಯ ಅಕ್ಟೋಬರ್‌ 1 ರಿಂದಲೇ ಚಾಲನೆ ನೀಡಲಾಗಿದೆ ಎಂದರು.

ಈ- ಆಫೀಸ್ ನಿಂದಾಗಿ ಕಡತಗಳ ವಿಲೇವಾರಿಯಲ್ಲಿನ ವಿಳಂಬ ತಪ್ಪಿ ವೇಗ ದೊರೆಯಲಿದೆಯಲ್ಲದೆ, ಕಡತವು ಯಾವ ಸಿಬ್ಬಂದಿ ಬಳಿ ಇದೆ, ಅದರ ಸ್ಥಿತಿ ಏನಿದೆ ಎಂಬ ಮಾಹಿತಿ ತಕ್ಷಣಕ್ಕೆ ದೊರಕಿ ಸಾರ್ವಜನಿಕರು ಕಚೇರಿ ಅಲೆದಾಡುವುದು ತಪ್ಪಲಿದೆ ಎಂದರು. ಇ-ಆಫೀಸ್ ಯಶಸ್ವಿಯಾಗಲು ಕಾರಣಕರ್ತರಾದ ಎನ್‌.ಐ.ಸಿ.ಯ ಉದಯಕುಮಾರ್‌, ರಮೇಶ್‌ ಹಾಗೂ ಸಿಬ್ಬಂದಿಗೆ ಯಶಸ್ವಿ ಕಾರ್ಯನಿರ್ವಹಣೆಗೆ ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.

ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಚುನಾವಣಾ ತಹಶೀಲ್ದಾರ್‌ ಪ್ರಸಾದ್‌, ಶಿರಸ್ತೇದಾರರಾದ ಜಿ.ಸಿ.ಕುಮಾರ್‌, ರಾಮಸ್ವಾಮಿ.ಎಚ್‌, ವಸಂತಕುಮಾರಿ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next