Advertisement

ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಡಿಸಿ ಸೂಚನೆ

05:17 PM Oct 16, 2020 | Suhan S |

ಯಾದಗಿರಿ: ಬ್ರಿಜ್‌ ಕಮ್‌ ಬ್ಯಾರೇಜ್‌ಗೆ ನೋಡಲ್‌ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ವರದಿ ನೀಡುವಂತೆ ಜಿಲ್ಲಾಧಿ ಕಾರಿ ಡಾ| ರಾಗಪ್ರಿಯಾ ಸೂಚಿಸಿದರು.

Advertisement

ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮನೆ ಹಾನಿ, ಜೀವಹಾನಿ, ಕೃಷಿ, ತೋಟಗಾರಿಕೆ,ಲೋಕೋಪಯೋಗಿ ಇಲಾಖೆ ಹಾಗೂಪಂಚಾಯತರಾಜ್‌ ಇಂಜಿನೀಯರಿಂಗ್‌ ವಿಭಾಗದಕಾಮಗಾರಿಗಳಿಗೆ ಹಾನಿ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರೀಮಳೆಯಿಂದಾದ ಹಾನಿ ಹಾಗೂ ನಿರ್ವಹಣೆಗೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿಭಾರೀ ಮಳೆಯಾದ ಹಿನ್ನೆಲೆಯಲ್ಲಿ ಅಂದಾಜು 2163.82 ಹೆಕ್ಟೇರ್‌ ಹಾಗೂ ಪ್ರವಾಹದಿಂದಅಂದಾಜು 307 ಹೆಕ್ಟೇರ್‌ ಸೇರಿ ಒಟ್ಟು 2470.82ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಅಕ್ಟೋಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಒಟ್ಟು 609 ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ ಯಾದಗಿರಿತಾಲೂಕಿನಲ್ಲಿ 237, ಶಹಾಪುರ ತಾಲ್ಲೂಕಿನಲ್ಲಿ 27, ಗುರುಮಠಕಲ್‌ನಲ್ಲಿ23, ವಡಗೇರಾದಲ್ಲಿ 44, ಹುಣಸಗಿಯಲ್ಲಿ253 ಮನೆಗಳಿಗೆ ಹಾನಿಯಾಗಿದೆ. ಸುರಪುರತಾಲೂಕಿನಲ್ಲಿ 25 ಕುರಿಗಳು ಸಾವನಪ್ಪಿವೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ ಮಾಹಿತಿ ನೀಡಿದರು.

ಗುರುಸಣಗಿ ಬ್ರಿಜ್‌ ಕಮ್‌ ಬ್ಯಾರೆಜ್‌ನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಮೀರಿ ಬ್ಯಾರೇಜ್‌ನ ಹಿನ್ನೀರು ಹೆಚ್ಚಾಗಿ ನಾಯ್ಕಲ್‌ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಅಲ್ಲದೆಸುತ್ತಮುತ್ತಲಿನ ಕೃಷಿ ಭೂಮಿ ಮುಳುಗಡೆಯಾಗಿಬೆಳೆ ಹಾನಿಯಾಗಿರುವ ಕುರಿತು ಕೃಷಿ ಅಧಿಕಾರಿಗಳುಅತಿ ಶೀಘ್ರದಲ್ಲೇ ಮಾಹಿತಿ ನೀಡಬೇಕು ಎಂದರು.ಸನ್ನತಿ ಬ್ರಿಜ್‌ ಕಮ್‌ ಬ್ಯಾರೇಜ್‌ ಭರ್ತಿಯಾಗಿದ್ದು, ಹುರಸಗುಂಡಗಿ ಗ್ರಾಮದ ನೀರು ನುಗ್ಗಿದ

ಮನೆಗಳ ಕುಟುಂಬಗಳನ್ನು ಸ್ಥಳಾಂತರಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾದಂತೆ ಬ್ಯಾರೇಜ್‌ನ ಹಿನ್ನೀರು ಪ್ರದೇಶವು ಜಲಾವೃತವಾಗಿ ಮುಳುಗಡೆಯಾಗುವ ಸಂಭವವಿದೆ. ಹೀಗಾಗಿ ಇಂಜಿನೀಯರರು ಪರಿಸ್ಥಿತಿ ಅರಿತು ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯಲು ಕ್ರಮ ವಹಿಸುವಂತೆ ಸೂಚಿಸಿದರು. ಕೃಷ್ಣಾ ನದಿಗೆ ಸುಮಾರು 2.5ಲಕ್ಷ ಕ್ಯೂಸೇಕ್‌ ನೀರು ಹರಿದು ಬಂದರೆ ಕೊಳ್ಳೂರು ಬ್ರಿಜ್‌ ಮುಳುಗಡೆಯಾಗುತ್ತದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ತಿಳಿಸಿದರು.

Advertisement

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಮಾಹಿತಿ ಇದ್ದು, ಅಂತಹ ಮನೆಗಳ ಜನರಿಗೆ ಗಂಜಿ ಕೇಂದ್ರ ಹಾಗೂ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿ, ಪರಿಹಾರ ಧನವನ್ನು ತ್ವರಿತವಾಗಿ ಬಿಡುಗಡೆ

ಮಾಡುವಂತೆ ಅ ಧಿಕಾರಿಗಳಿಗೆ ಸೂಚಿಸಿದರು. ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆಗಳುಹಾಗೂ ಸೇತುವೆಗಳಿಗೆ ಹಾನಿಯಾಗಿದೆ. ಅವುಗಳ ದುರಸ್ತಿಗೆ ಶೀಘ್ರ ಕ್ರಮ ವಹಿಸಬೇಕು. ಹಾನಿಯ ಅಂದಾಜು ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಲೋಕೋಪಯೋಗಿ ಹಾಗೂ ಪಂಚಾಯತ್‌ ರಾಜ್‌ ಇಂಜಿನೀಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next