ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಲಾಕ್ ಡೌನ್ ಪರಿಣಮ ವಾರ್ಷಿಕ ಹೂವು, ಹಣ್ಣು ಮತ್ತು ತರಕಾರಿ ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಪರಿಹಾರ ನೀಡಿಕೆಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಹಿಂದೆ ಕೈಗೊಂಡ ಸಮೀಕ್ಷೆಯನ್ನು ಆಧರಿಸಿ ಕೋವಿಡ್ ಪರಿಹಾರಕ್ಕೆ ಪರಿಗಣನೆ ಮಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತೋಟಗಾರಿಕೆ ಅ ಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋವಿಡ್ ಎರಡನೇ ಅಲೆಯ ಜನತಾ ಕರ್ಫ್ಯೂ ಹಿನ್ನೆಲೆ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಧನದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ತೋಟಗಾರಿಕೆಯ ಕೋವಿಡ್ ಹಾನಿ ಪರಿಹಾರಕ್ಕಾಗಿ ಬೆಳೆಗಳಿಗೆ 2021-22ನೇ ಸಾಲಿನ ಬೇಸಿಗೆ ಬೆಳೆ ಸಮೀಕ್ಷೆ, ಬಹು ವಾರ್ಷಿಕ ಬೆಳೆಗಳಿಗೆ 2020-21ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆಧರಿಸಿ ಲಾಕ್‌ಡೌನ್ ಅವ ಧಿಯಲ್ಲಿ ತೀವ್ರ ಹಾನಿಗೊಳಗಾಗಿದೆ. ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಮಾತ್ರ ಪರಿಹಾರ ಧನಕ್ಕೆ ಪರಿಗಣಿಸಬೇಕು ಎಂದು ಸೂಚಿಸಿದರು. ತೋಟಗಾರಿಕೆಯ ಎಲ್ಲ ವಾರ್ಷಿಕ ಮತ್ತು ಬಹು ವಾರ್ಷಿಕ ಹೂ ಬೆಳೆಗಳು ಆಯ್ಕೆಯಾಗಿವೆ.
ಆದರೆ ಹಣ್ಣುಗಳಗೆ ಬಂದರೆ ಮಾವು, ಸಪೋಟ, ಅಂಜೂರ್, ಕಲ್ಲಂಗಡಿ, ಕಬೂìಜ, ದಾಳಿಂಬೆ, ಪೇರಲ, ನಿಂಬೆ, ಮೋಸಂಬಿ, ಅನಾನಸ್, ಪಪ್ಪಾಯ, ಬಾಳೆ ಮಾತ್ರ ಆಯ್ಕೆಯಾಗಿವೆ. ತರಕಾರಿಗಳಲ್ಲಿ ಈರುಳ್ಳಿ, ಟೊಮೊಟೋ, ಹಸಿ ಮೆಣಸಿಕಾಯಿ, ಸೌತೆಕಾಯಿ, ಬದನೆ, ಹೂಕೋಸು, ಎಲೆಕೋಸು, ಬೆಂಡೆ, ಸಿಹಿಕುಂಬಳ, ಬೂದುಗುಂಬಳ, ಹಿರೇಕಾಯಿ, ಹಾಗಲ, ಸೋರೆಕಾಯಿ, ಗಜ್ಜರಿ, ಸಿಹಿಗೆಣಸು, ಬೀನ್ಸ್, ಚವಳೆ, ದಪ್ಪ ಮೆಣಸಿನಕಾಯಿ, ಬೀಟ್ ರೂಟ್, ನುಗ್ಗೆ, ನವಿಲುಕೋಸು, ತೊಂಡೆಕಾಯಿ, ಮೂಲಂಗಿ ಸೊಪ್ಪು ಜಾತಿಯ ಬೆಳೆಗಳಿಗೆ ಆಯ್ಕೆಯಾಗಿವೆ ಎಂದು ಅ ಧಿಕಾರಿಗಳು ವಿವರ ನೀಡಿದರು.
ಆರ್ಥಿಕ ನೆರವಿನ ಹಸಿರು ನಲ್ಲಿ ಪ್ರೋಸೆಸ್ ಮಾಡಿ, ಡಿಬಿಟಿ ಪೋರ್ಟಲ್ ಮೂಲಕ ಕೆ-2ನಲ್ಲಿ ಫಲಾನುಭವಿಗಳಿಗೆ ನೇರವಾಗಿ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು. ಸರ್ಕಾರದ ಮಾರ್ಗಸೂಚಿಯ ಕೋವಿಡ್ ಬೆಳೆ ಪರಿಹಾರ ಸಮೀಕ್ಷೆ ನಡೆಸಬೇಕು ಎಂದು ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾ ಧಿಕಾರಿಗಳು, ತಾಲೂಕವಾರು ತಹಶೀಲ್ದಾರ್ ರ ಜತೆ ಚರ್ಚಿಸಿ ಕಾಲ ಕಾಲಕ್ಕೆ ಜಿಲ್ಲಾ ಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು. ಬರುವ ದಿನಗಳಲ್ಲಿ ದಿನಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಜಿಲ್ಲಾಮಟ್ಟದ ಸಮಿತಿಯಲ್ಲಿ ಚರ್ಚಿಸಿ ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ವಿಜಯಪುರ ತೋಟಗಾರಿಕೆ ಬೆಳೆಗಳಿಗೆ ಹೆಸರಾದ ಜಿಲ್ಲೆ. ಹೀಗಾಗಿ ಮಾರ್ಗಸೂಚಿಯ ಪ್ರಕಾರ ಕೋವಿಡ್ ಪರಿಹಾರ ಸಮೀಕ್ಷೆ ಹಾಗೂ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು. ತೋಟಗಾರಿಕೆ ಉಪ ನಿರ್ದೇಶಕ ಎಸ್.ಎಂ. ಬರಗೀಮಠ ಸಭೆಗೆ ಜಿಲ್ಲೆಯ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ನೀಡಿ, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರು ಜನತಾ ಕರ್ಫ್ಯೂ ಅವಧಿಯಲ್ಲಿ ಬೆಳೆದ ಬೆಳೆಗಳು ಮಾರಾಟವಾಗದ ಹಿನ್ನೆಲೆ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರವು ತಾತ್ಕಾಲಿಕ ಪರಿಹಾರ ನೀಡುತ್ತಿದ್ದು, ಭವಿಷ್ಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲು ಪರಿಹಾರ ಘೋಷಿಸಿದೆ ಎಂದರು. ಕಾರ್ಯಕ್ರಮದಡಿ ಪ್ರತಿ ಫಲಾನುಭವಿಗಳಿಗೆ ಗರಿಷ್ಟ ಒಂದು ಹೆಕ್ಟೇರ್ ಪ್ರದೇಶಕ್ಕೆ 10 ಸಾವಿರ ರೂ ಮತ್ತು ಕನಿಷ್ಟ 2 ಸಾವಿರ ರೂ.ಗೆ ಮಿತಿಗೊಳಿಸಲಾಗಿದೆ.
ಸದರಿ ಅರ್ಹತೆಯಲ್ಲಿ ಆಯ್ಕೆಯಾಗುವ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಇ-ಆಡಳಿತದಿಂದ ಬೆಳೆ ಸಮೀಕ್ಷೆ ಅನುಗುಣವಾಗಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬರುವ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ಪರಿಗಣಿಸುವುದಾಗಿ ವಿವರ ನೀಡಿದರು. ಸಭೆಯಲ್ಲಿ ವಿವಿಧ ತಾಲೂಕುಗಳ ತಹಶೀಲ್ದಾರ್ ರಾದ ನಿಡಗುಂದಿಯ ಶಿವಲಿಂಗಪ್ರಭು ವಾಲಿ, ಬಬಲೇಶ್ವರದ ಎಂ.ಎಸ್. ಅರಕೇರಿ, ತಿಕೋಟಾದ ಎಂ.ಎಸ್. ಮ್ಯಾಗೇರಿ ಸೇರಿದಂತೆ ತೋಟಗಾರಿಕೆ ಅ ಧಿಕಾರಿಗಳು ಪಾಲ್ಗೊಂಡಿದ್ದರು.