Advertisement

ವರ್ಷದೊಳಗೆ ಎಲ್ಲ ಹಳ್ಳಿಗಳ ಭೇಟಿ

02:03 PM Mar 09, 2021 | Team Udayavani |

ಧಾರವಾಡ: ಜಿಲ್ಲೆಯಲ್ಲಿ 388 ಗ್ರಾಮಗಳಿವೆ. ಒಂದು ವರ್ಷದ ಅವಧಿಯಲ್ಲಿ ಬಹುತೇಕ ಗ್ರಾಮಗಳಿಗೆ ಭೇಟಿ ನೀಡಿ ಅದಾಲತ್‌ ಹಾಗೂ ಜನಸಂಪರ್ಕ ಸಭೆ ನಡೆಸುವ ಗುರಿ ಹೊಂದಲಾಗಿದೆ.

Advertisement

ಪ್ರತಿ ವಾರದ ಒಂದು ದಿನ ಒಂದು ತಾಲೂಕಿನ ಏಳು ಗ್ರಾಮಗಳಲ್ಲಿ ಪಿಂಚಣಿ, ಕಂದಾಯ ಅದಾಲತ್‌ ಮತ್ತುಜನಸಂಪರ್ಕ ಸಭೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

ದಡ್ಡಿಕಮಲಾಪುರದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪಿಂಚಣಿ, ಕಂದಾಯ ಅದಾಲತ್‌ ಹಾಗೂ ಜನಸಂಪರ್ಕ ಸಭೆ ನಂತರ ಅವರು ಮಾತನಾಡಿದರು. ಯಾವುದೇ ಅ ಧಿಕಾರಿ ಸಾರ್ವಜನಿಕರಿಂದ ಪಡೆದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿಮಾಡಬೇಕು. ಸಕಾರಣವಿಲ್ಲದೇ ಅರ್ಜಿ ವಿಲೇವಾರಿಯಲ್ಲಿ ವಿಳಂಬ ಕಂಡುಬಂದರೆ ಸಂಬಂಧಿಸಿದ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಎಸಿ ಡಾ|ಗೋಪಾಲಕೃಷ್ಣ ಬಿ., ಜಿಲ್ಲಾಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್‌ ಎ.ಪಿ., ತಹಶೀಲ್ದಾರ್‌ ಸಂತೋಷ ಬಿರಾದಾರ, ಪ್ರೊಬೆಷನರಿಎಸಿ ಡಾ| ನಯನಾ ಎನ್‌., ಪ್ರೊಬೆಷನರಿ ತಹಶೀಲ್ದಾರ್‌ ಬಸವರಾಜ ತೇನಹಳ್ಳಿ,ಸಹಾಯಕ ನಿರ್ದೇಶಕಿ ತನ್ವೀನ್‌ ಡಾಂಗೆ, ತಾಲೂಕಾ ಸರ್ವೇಯರ್‌ ರಾಜಶೇಖರ್‌ ದೇಸಾಯಿ, ಮಂಡಿಹಾಳ ಗ್ರಾಪಂ ಅಧ್ಯಕ್ಷ ಕರಿಯಪ್ಪ ಚಿನ್ನಟ್ಟಿ ಇದ್ದರು.

ರಸ್ತೆ ಸಮಸ್ಯೆಗೆ ಪರಿಹಾರ :

Advertisement

ಕಲಕೇರಿಯಿಂದ ಹುಣಸಿತುಮರಿ ರಸ್ತೆ ನಿರ್ಮಾಣಕ್ಕೆ ಸಂಬಂ ಧಿಸಿದ ಸಮಸ್ಯೆಯನ್ನುಸ್ಥಳದಲ್ಲಿಯೇ ಪರಿಹರಿಸಿ ಸುಮಾರು4.60 ಕೋಟಿ ವೆಚ್ಚದ ಕಾಮಗಾರಿಗೆಅನುಮತಿ ನೀಡಲಾಗಿದೆ. ಮುರಕಟ್ಟಿ ಗ್ರಾಮದಲ್ಲಿರುವ ಸಣ್ಣ ನೀರಾವರಿಇಲಾಖೆಯ ಕೆರೆ ಒತ್ತುವರಿ ತೆರವು ಹಾಗೂ ಅಳತೆಗೆ ಸಂಬಂಧಿಸಿ ಬಹುದಿನಗಳಿಂದಇದ್ದ ಬೇಡಿಕೆಯಂತೆ ಸ್ಥಳ ಪರಿಶೀಲನೆಮಾಡಿ ಮಂಗಳವಾರದಿಂದಲೇಕೆರೆ ಸಮೀಕ್ಷೆ ಮಾಡಿ ಗಡಿ ಗುರುತು ಹಾಕುವಂತೆ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದರು.

ರಾಜ್ಯಸರ್ಕಾರವು ಕಂದಾಯ ಸೇವೆಯಲ್ಲಿ ನೀಡುವ ವಿವಿಧ ರೀತಿಯ ಸೌಲಭ್ಯ ಮತ್ತು ಸೇವೆಗಳನ್ನು ಭೂಮಿ ಯೋಜನೆಯಡಿ ಪ್ರತಿ ತಿಂಗಳು ರ್‍ಯಾಂಕಿಂಗ್‌ ಮಾಡುತ್ತದೆ. ಫೆಬ್ರವರಿ ತಿಂಗಳಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದೆ. –ನಿತೇಶ ಪಾಟೀಲ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next