Advertisement

ಡಿ.ಎಂ.ಸಮುದ್ರದ ಬಳಿ ಚೆಂಗಡಿ ಗ್ರಾಮ ಪುನರ್ವಸತಿ

02:43 PM Mar 26, 2021 | Team Udayavani |

ಚಾಮರಾಜನಗರ: ಹನೂರು ತಾಲೂಕಿನ ಚೆಂಗಡಿ ಗ್ರಾಮವನ್ನು ತಾಲೂಕಿನ ಡಿ.ಎಂ.ಸಮುದ್ರದ ಬಳಿ ಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ಗುರುತಿಸಲಾಗಿರುವ ಜಾಗಕ್ಕೆ ಸ್ಥಳಾಂತರ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡುವ ಪ್ರಕ್ರಿಯೆಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚೆಂಗಡಿ ಗ್ರಾಮ ಪುನರ್ವಸತಿ ಕಾರ್ಯ ಪ್ರಗತಿ ಸಂಬಂಧ ಗುರುವಾರ ನಡೆದ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶೀಲನೆ: ಸಭೆಯ ಆರಂಭದಲ್ಲಿ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರ ಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಏಡುಕೊಂಡಲು ಅವರು ಚೆಂಗಡಿ ಗ್ರಾಮ ಸ್ಥಳಾಂತರಿಸಿ ಪುನರ್ವಸತಿಗಾಗಿ ಗುರುತಿಸಲಾಗಿದ್ದ ಚಿಕ್ಕಲ್ಲೂರು ಭಾಗದ ಇಕ್ಕಡಹಳ್ಳಿಯಲ್ಲಿ ಅಗತ್ಯವಿರುವ ಪ್ರಮಾಣದ ಭೂಮಿ ಲಭ್ಯವಾಗಿಲ್ಲ. ಹೀಗಾಗಿ ಹನೂರು ತಾಲೂಕಿನ ಡಿ.ಎಂ.ಸಮುದ್ರದಬಳಿ 450 ಎಕರೆಯಷ್ಟು ಭೂಮಿ ಲಭ್ಯವಿರುವುದನ್ನು ಗುರುತಿಸಲಾಗಿದೆ. ಇಲ್ಲಿಯೇ ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕಲ್ಪಿಸಲು ಅವಕಾಶವಿದ್ದು ಎಲ್ಲಾಪರಿಶೀಲನೆ ನಡೆಸಲಾಗಿದೆ ಎಂದರು.

ವಿವರ ಕಳುಹಿಸಿ: ಪೂರ್ಣ ಮಾಹಿತಿ ಪಡೆದು ಕೊಂಡಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರುಮಾತನಾಡಿ, ಡಿ.ಎಂ.ಸಮುದ್ರದ ಬಳಿ ಗುರುತಿಸಲಾಗಿರುವ ಜಾಗದಲ್ಲಿ ಜನವಸತಿ ತಾಣವನ್ನಾಗಿಪರಿವರ್ತಿಸಲು ಪೂರ್ಣ ಪ್ರಮಾಣದ ಕಾರ್ಯವಾಗಬೇಕಿದೆ. ಸ್ಥಳಾಂತರಗೊಳ್ಳುವ ಜನರಿಗೆ ಕೃಷಿ,ಕುಡಿವ ನೀರು, ಇನ್ನಿತರ ಅವಶ್ಯಕ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ಈ ಮೊದಲು ಭೂಮಿ ಲಭ್ಯತೆ ಕುರಿತ ವಿವರವನ್ನು ಸರ್ಕಾರಕ್ಕೆಕಳುಹಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದರು. ಚೆಂಗಡಿ ಗ್ರಾಮ ಸ್ಥಳಾಂತರಿಸಿ ಪುನರ್ವಸತಿಕಲ್ಪಿಸಬೇಕಿರುವ ಹಿನ್ನೆಲೆಯಲ್ಲಿ ಗ್ರಾಮದಕುಟುಂಬಗಳಿಗೆ ಅವಶ್ಯವಿರುವ ಜಮೀನು ಲಭ್ಯತೆ, ಪರಿಹಾರ ನೀಡಬೇಕಾದ ಕ್ರಮ, ಒದಗಿಸಬೇಕಿರುವಪ್ಯಾಕೇಜ್‌ ಸೇರಿದಂತೆ ಫ‌ಲಾನುಭವಿಗಳ ಪಟ್ಟಿಯನ್ನುತಯಾರಿಸಬೇಕಿದೆ. ಇದಕ್ಕಾಗಿ ಕೈಗೊಳ್ಳಲಾಗಿರುವ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸ ಬೇಕೆಂದು ಡೀಸಿ ತಿಳಿಸಿದರು.

ನಿರ್ದೇಶನ: ಆರ್‌ಟಿಸಿ ತಿದ್ದುಪಡಿ, ಪೌತಿಖಾತೆ, ಆರ್‌ಟಿಸಿ ಗಣಕೀಕರಣದಂತಹ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ನ್ಯೂನತೆ ಇದ್ದಲ್ಲಿ ಸರಿಪಡಿಸಿಕಳುಹಿಸಿಕೊಡಬೇಕು. ಮನೆಗಳ ಸಮೀಕ್ಷೆಯನ್ನುಪೂರ್ಣ ಪ್ರಮಾಣದಲ್ಲಿ ಮಾಡಬೇಕು. ಭೂಮಾಪನಇಲಾಖೆ ಸರ್ವೇ ಪೂರ್ಣಗೊಳಿಸಬೇಕು ಎಂದು ಡೀಸಿ ನಿರ್ದೇಶನ ನೀಡಿದರು.

Advertisement

ಕೃಷಿ, ತೋಟಗಾರಿಕೆ ಇಲಾಖೆಗಳು ಬೆಳೆಗಳ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು. ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಇತರೆ ನೆರವು ನೀಡಬೇಕು. ಪ್ರಸ್ತುತ ಚೆಂಗಡಿ ಗ್ರಾಮ ಸ್ಥಳಾಂತರಗೊಳ್ಳಲಿರುವ ಹಿನ್ನೆಲೆಯಲ್ಲಿ ಯಾವುದೇ ಜಮೀನು ಕ್ರಯಕ್ಕೆ ಅವಕಾಶವಿಲ್ಲ. ಹೊಸದಾಗಿ ಕಂದಾಯ ವ್ಯವಹಾರ, ಆಹಾರ ಇಲಾಖೆ ಪಡಿತರಚೀಟಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ. ಆರ್‌. ರವಿ ತಿಳಿಸಿದರು.

ಉಪವಿಭಾಗಾಧಿಕಾರಿ ಡಾ.ಗಿರೀಶ್‌ ದಿಲೀಪ್‌ ಬದೋಲೆ, ಕಾವೇರಿ ವನ್ಯಜೀವಿಧಾಮದ ಅರಣ್ಯ ಅಧಿಕಾರಿ ರಮೇಶ್‌, ಜಂಟಿ ಕೃಷಿನಿರ್ದೇಶಕಿ ಚಂದ್ರಕಲಾ, ತೋಟಗಾರಿಕೆ ಇಲಾಖೆಉಪನಿರ್ದೇಶಕ ಶಿವಪ್ರಸಾದ್‌, ಪಶುಪಾಲನೆ ಇಲಾಖೆಉಪನಿರ್ದೇಶಕ ವೀರಭದ್ರಯ್ಯ, ತಹಶೀಲ್ದಾರ್‌ ನಾಗರಾಜು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next