Advertisement
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳಕೊರತೆಯಾಗದಂತೆ ಯೋಜಿಸಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ನಿರ್ದೇಶನ ನೀಡಿದರು.
Related Articles
Advertisement
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು ಮತಗಟ್ಟೆಗಳ ದುರಸ್ತಿ ಕಾರ್ಯವನ್ನು ಮಾಡಿಸ ಬೇಕು. ಜೊತೆಗೆ ಮತಗಟ್ಟೆಗಳಲ್ಲಿ ಅಂತರ್ಜಾಲ ಸೌಲಭ್ಯ ಸೇರಿ ಇತರೆ ಮೂಲ ಸೌಕರ್ಯ ಒದಗಿಸು ವಂತೆ ಆಯಾಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.
ಇದರ ಜೊತೆಗೆ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಿಸುವುದು, ಆರೋಗ್ಯ ಇಲಾಖೆಯ ಸಹಕಾರ ದೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನು ಸರಿಸುವುದು ಹಾಗೂ ಮತದಾರರಿಗೆ ಸೂಕ್ತ ಪ್ರಚಾರ ನೀಡುವುದು ಜಿಪಂ ಸಿಇಒ ಜವಾಬ್ದಾರಿ ಆಗಿರುತ್ತದೆ ಎಂದು ಆಯುಕ್ತರು ತಿಳಿಸಿದರು.
ಸಭೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹೊನ್ನಾಂಬ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ, ಜಿಪಂ ಸಿಇಒ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಚುನಾವಣಾ ತಹಶೀಲ್ದಾರ್ ಎಚ್.ಟಿ.ಪದ್ಮನಾಭಶಾಸ್ತ್ರೀ, ಮತ್ತಿತರರು ಹಾಜರಿದ್ದರು.
ಬಂದೋಬಸ್ತ್ ವ್ಯವಸ್ಥೆಮಾಡಿಕೊಳ್ಳಿ : ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಚುನಾವಣೆ ಸಂದರ್ಭದಲ್ಲಿಕಾನೂನು ಸುವ್ಯವಸ್ಥೆಕಾಪಾಡಿಕೊಳ್ಳಲು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅವುಗಳಿಗೆ ಅಗತ್ಯ ಬಂದೋಬಸ್ತ್ಕಲ್ಪಿಸಬೇಕು. ಚುನಾವಣೆ ಸಂದರ್ಭದಲ್ಲಿ ಹಣ, ಸಾಮಗ್ರಿಗಳು ಹಾಗೂ ಅಕ್ರಮ ಮದ್ಯ ವಿತರಣೆಯಾಗದಂತೆ ಅಬಕಾರಿ ಇಲಾಖೆಯ ಸಹಯೊಗದೊಂದಿಗೆ ಅಗತ್ಯ ನಿಯಂತ್ರಣಾಕ್ರಮಗಳನ್ನುಕೈಗೊಳ್ಳಬೇಕು ಎಂದು ಚುನಾವಣಾ ಆಯೋಗದ ಆಯುಕ್ತರು ಹೇಳಿದರು. ಚುನಾವಣೆಗೆ ಅಗತ್ಯ ಅನುದಾನವನ್ನು ಒದಗಿಸಲಾಗುತ್ತಿದ್ದು, ಅದನ್ನು ಮಿತವಾಗಿ ನಿಯೋಗ ಮಾಡಿ, ನಿಯೋಗ ಮಾಡಿದ ಅನುದಾನದ ವಿವರವನ್ನುಕಡ್ಡಾಯವಾಗಿ ಆಯೋಗಕ್ಕೆ ನಿಗದಿತ ಸಮಯದೊಳಗೆ ನೀಡಬೇಕು. ಚುನಾವಣೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಯಾವುದೇ ಅಧಿಕಾರಿ ರಜೆ ಅಥವಾಕೇಂದ್ರ ಸ್ಥಾನ ಬಿಟ್ಟು ಹೋಗುವ ಹಾಗಿಲ್ಲ ಎಂದು ತಿಳಿಸಿದರು.