Advertisement

ವದಂತಿಗಳಿಗೆ ಕಿವಿಗೊಡಬೇಡಿ,ಕೋವಿಡ್ ವ್ಯಾಕ್ಸಿನ್ ಅತ್ಯಂತ ಸುರಕ್ಷಿತ :  ಜಿಲ್ಲಾಧಿಕಾರಿ

07:24 PM Feb 12, 2021 | Team Udayavani |

ಕಾರವಾರ : ಇಂದು ಕ್ರಿಮ್ಸ ಕಾರವಾರಕ್ಕೆ ಭೇಟಿ ನೀಡಿ ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್,‌ ತಾವು ಕೂಡಾ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ   ಯಾವುದೇ ವದಂತಿಗಳಿಗೆ ಕಿವಿಗೊಡದೆ ವ್ಯಾಕ್ಸಿನ್ ಪಡೆಯಿರಿ ಎಂದು ಕರೆ ನೀಡಿದರು.‌

Advertisement

ಎಲ್ಲಾ ಮೂಂಚೂಣಿಯ ಕೋವಿಡ್  ವಾರಿಯರ್ಸಗಳು ಕೋವಿಡ್  ಲಸಿಕೆಯನ್ನು ಸ್ವಯಂ ಪ್ರೇರೇಪಿತರಾಗಿ ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಕೆಲ ಸಣ್ಣ ಪುಟ್ಟ ಸಾಮಾನ್ಯ ಅಡ್ಡ ಪರಿಣಾಮಗಳು ಕೆಲವರಲ್ಲಿ ಕಂಡು ಬಂದರೂ ಸಹ ಇದರಲ್ಲಿ ಯಾವುದೇ ಅಪಾಯವಿಲ್ಲ ಎಂದರು. ಲಸಿಕೆ ಪಡೆದುಕೊಳ್ಳಲು ಬಂದಿದ್ದ ಸಿಬ್ಬಂದಿಗಳಿಗೆ ಅವರು ಧೈರ್ಯ ತುಂಬಿದರು.

ಜಿಲ್ಲಾಧಿಕಾರಿಗಳ ಜೊತೆಗೆ , ಜಿಲ್ಲಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳು ಕೂಡಾ ಲಸಿಕೆ ಪಡೆದುಕೊಂಡರು.  ಇದೇ ಸಂದರ್ಭದಲ್ಲಿ ಕ್ರಿಮ್ಸ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕ್ರಿಮ್ಸನ ಬಹುತೇಕ ವೈದ್ಯರು ಹಾಜರಿದ್ದರು.

ಇದನ್ನು ಓದಿ :ಉಳಿದ ಶಾಲಾ ತರಗತಿ ಆರಂಭ ಕುರಿತು ಫೆ. 16ರಂದು ಸಭೆ : ಸಚಿವ ಸುರೇಶ್ ಕುಮಾರ್

ಜಿಲ್ಲಾಧಿಕಾರಿಗಳು ಲಸಿಕೆ ಪಡೆದುಕೊಳ್ಳವದನ್ನು ನೋಡಿ ಪ್ರೇರೇಪಿತರಾದ ಕ್ರಿಮ್ಸನ ನಿರ್ದೇಶಕರಾದ ಡಾ.ಗಜಾನನ ನಾಯಕ , ಈ ಹಿಂದೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡಾ ಲಸಿಕೆಯನ್ನು ಸ್ಥಳದಲ್ಲಿ ಪಡೆದುಕೊಂಡಿರುವದು ವಿಶೇಷವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next