Advertisement

ಮಣಿಪಾಲ: ಅಪಾಯದಲ್ಲಿ ಬಹುಮಹಡಿ ಕಟ್ಟಡ, ಜಿಲ್ಲಾಧಿಕಾರಿಯಿಂದ ಪರಿಶೀಲನೆ

03:54 PM Sep 22, 2020 | keerthan |

ಉಡುಪಿ: ಕುಸಿಯುವ ಭೀತಿ ಎದುರಿಸುತ್ತಿರುವ ಮಣಿಪಾಲದ ಕುಂಡೇಲು ಕಾಡು ಗುಡ್ಡದಲ್ಲಿರುವ ಬಹುಮಹಡಿ ಕಟ್ಟಡದ ಬಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಂದ ಮಾಹಿತಿ ಪಡೆದರು. ಕಟ್ಟಡದ ಭದ್ರತೆ ಮತ್ತು ಕಾಗದ ಪತ್ರಗಳನ್ನು ಪರಿಶೀಲಿಸಿ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಹೇಳಿದರು.

ಎರಡು ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಸೋಮವಾರ ಮಣಿಪಾಲದ ಪ್ರೀಮಿಯರ್‌ ಎನ್‌ಕ್ಲೇವ್‌ ಕಟ್ಟಡದ ರಕ್ಷಣಾ ತಡೆಗೋಡೆ ಕುಸಿದಿದ್ದು, ಸುರಕ್ಷೆಯ  ಹಿನ್ನೆಲೆಯಲ್ಲಿ ಕಟ್ಟಡ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ!

Advertisement

ಉಡುಪಿ- ಮಣಿಪಾಲದ ಮಾರ್ಗವಾಗಿ ಸಿಗುವ (ಹಿಂದಿನ ಕುಂಡೇಲುಕಾಡಿನ ಗುಡ್ಡ) ಸಿಂಡಿಕೇಟ್‌ ಸರ್ಕಲ್‌ನಲ್ಲಿ 2004-2005ರಲ್ಲಿ ನಿರ್ಮಾಣಗೊಂಡ ಬಹುಮಹಡಿ ಕಟ್ಟಡ ಇದಾಗಿದೆ. ಸೆ. 20ರಂದು ಸಂಜೆ 6 ಗಂಟೆಯ ಹೊತ್ತಿಗೆ ರಕ್ಷಣಾ ತಡೆಗೋಡೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿತ್ತು. ಸೆ. 21ರ ಸಂಜೆ 5 ಗಂಟೆಯ ವೇಳೆಗೆ ಭಾರೀ ಪ್ರಮಾಣದಲ್ಲಿ ಕಟ್ಟಡದ ರಕ್ಷಣಾ ತಡೆಗೋಡೆಯ ಮಣ್ಣು ಕುಸಿತವಾಗಿದೆ. ಜತೆಗೆ ಕೆಳಗಿನ ಗುಡ್ಡವು ಮೋರಿ ಸಹಿತ ಜರಿದಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯಾಡಳಿತ ಹಾಗೂ ಪೊಲೀಸರು ಕಟ್ಟಡ ಮುಂಭಾಗದ ಉಡುಪಿ- ಮಣಿಪಾಲದ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next