Advertisement

ಪಶ್ಚಿಮ ಬಂಗಾಳ :  ರೋಡ್ ಶೋ ಗೆ ಇಳಿಯಲಿದ್ದಾರೆ ಮಮತಾ..?

10:25 AM Mar 14, 2021 | Team Udayavani |

ನವ ದೆಹಲಿ : ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಹೋಗುವ ಸಂದರ್ಭದಲ್ಲಿ ಗಾಯಗೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನಾಲ್ಕು ದಿನಗಳಾದ ಬಳಿಕ ಮತ್ತೆ ಇಂದು(ಆದಿತ್ಯವಾರ, ಮಾ.14) ಚುನಾವಣ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿಯನ್ನು ಪಕ್ಷ ತಿಳಿಸಿದೆ.

Advertisement

66 ವರ್ಷದ ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ಬೃಹತ್ ರೋಡ್ ಶೋ ನ ನೇತೃತ್ವವನ್ನು ವೀಲ್ ಚೇರ್ ಮೇಲೆ ಕುಳಿತುಕೊಂಡೇ ವಹಿಸಲಿದ್ದಾರೆ. ಹಾಗೂ ಹಜ್ಹ್ರಾ ದಲ್ಲಿ ಕೊನೆಗೊಳ್ಳುವ ರೋಡ್ ಶೋ ವನ್ನು ಉದ್ದೇಶಿಸಿ ಮಮತಾ ಮಾತನಾಡಲಿದ್ದಾರೆ ಎಂಬ ಮಾಹಿತಿ ದೊರಕಿದೆ.

ಓದಿ : ವೆಜ್‌ ಪಿಜ್ಜಾ ಬದಲು ನಾನ್‌-ವೆಜ್‌ ಪಿಜ್ಜಾ: 1 ಕೋಟಿ ರೂ. ಪರಿಹಾರಕ್ಕೆ ಮೊರೆ!

ಕಳೆದ ಗುರುವಾರ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಿಂದ ವೀಡಿಯೋ ಸಂದೇಶದಲ್ಲಿ ನಾಲ್ಕೈದು ಮಂದಿ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಿದ ನಂತರ, ಬ್ಯಾನರ್ಜಿ ತನ್ನ ಕಾರಿನ ಸುತ್ತಲು ಜನ ಸಮೂಹವೂ ತನ್ನನ್ನು ನೂಕಿದ ಕಾರಣದಿಂದಾಗಿ ಗಾಯವಾಗಿದೆ ಎಂದು ಹೇಳಿದ್ದರು.

ಚುನಾವಣಾ ಆಯೊಗಕ್ಕೆ ಸಲ್ಲಿಸಿದ ಪತ್ರದಲ್ಲಿ ತೃಣಮೂಲ ಕಾಂಗ್ರೆಸ್, ಇದು ಪಕ್ಷದ ವಿರುದ್ಧ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ನಡೆಸಿದ ಯೋಜಿತ ಪಿತೂರಿ ಎಂದು ಆರೋಪಿಸಿತ್ತು. ಇದು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ಕಾರಣವಾಗಿತ್ತು.

Advertisement

ಇನ್ನು, ಪ್ರತಿ ಪಕ್ಷ ಬಿಜೆಪಿ, ಇದು ಮಮತಾ ಅಧಿಕಾರ ಕಳೆದುಕೊಳ್ಳುವ ಭಯದಿಂದ ಜನರಿಂದ ಸಹನಾಭೂತಿ ಪಡೆಯಲು ನಡೆಸುತ್ತಿರುವ ಬೃಹನ್ನಾಟಕ ಎಂದು ಆರೋಪಿಸುತ್ತಿದೆ.

ಮಮತಾ ಬ್ಯಾನರ್ಜಿ ಅವರ ಎಡಗಾಲು ಮತ್ತು ಬೆರಳುಗಳಿಗೆ ತೀವ್ರವಾಗಿ ಮೂಳೆಗಲಿಗೆ ಪೆಟ್ಟಾಗಿದೆ. ಮುಂದೋಳು ಹಾಗೂ ಕುತ್ತಿಗೆ ಪೆಟ್ಟಾಗಿದೆ ಎಂದು ಆರಂಭಿಕ ವೈಧ್ಯಕೀಯ ವರದಿ ತಿಳಿಸಿತ್ತು. ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಓದಿ : ಇಂದು 2ನೇ ಟಿ20:  ಸೋಲೇ ಭಾರತದ ಗೆಲುವಿಗೆ ಸೋಪಾನವಾಗಲಿ

Advertisement

Udayavani is now on Telegram. Click here to join our channel and stay updated with the latest news.

Next