Advertisement

ಗೋರಖ್ ಪುರ ಆಯ್ತು, ಈಗ ಫಾರೂಕಾಬಾದ್ ಸರದಿ; 49 ಮಕ್ಕಳ ಸಾವು

11:55 AM Sep 04, 2017 | Team Udayavani |

ಫರೂಕಾಬಾದ್: ಗೋರಖ್ ಪುರದ ಬಾಬಾ ರಾಘವ್ ದಾಸ್(ಬಿಆರ್ ಡಿ) ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಕೊರತೆಯಿಂದ 290 ಮಕ್ಕಳು ಅಸುನೀಗಿದ್ದ ಘಟನೆ ಬೆನ್ನಲ್ಲೇ ಇದೀಗ ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಮತ್ತೊಂದು ದುರಂತ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ದೇಶವನ್ನೇ ತಲ್ಲಣಗೊಳಿಸಿದ್ದ ಗೋರಖ್ ಪುರ ಸರ್ಕಾರಿ ಆಸ್ಪತ್ರೆಯ ದುರಂತದ ರೀತಿಯಲ್ಲಿಯೇ ಫಾರೂಕಾಬಾದ್ ನ ರಾಮ್ ಮನೋಹರ್ ಲೋಹಿಯಾ ರಾಜ್ ಕಿಯಾ ಚಿಕಿತ್ಸಾಲಯದಲ್ಲಿ ಆಮ್ಲಜನಕ ಕೊರತೆಯಿಂದಾಗಿ  ಒಂದು ತಿಂಗಳಿನಲ್ಲಿ ಸುಮಾರು 49 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ಜುಲೈ 21 ಹಾಗೂ ಆಗಸ್ಟ್ 20ರ ನಡುವೆ ಮಕ್ಕಳು ಸಾವನ್ನಪ್ಪಿರುವ ಘಟನೆ ಬಗ್ಗೆ ತನಿಖೆ ನಡೆಸುವಂತೆ  ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಅವರು ಆದೇಶ ನೀಡಿದ್ದಾರೆ.  ಆಮ್ಲಜನಕ ಕೊರತೆಯಿಂದ ಹಾಗೂ ವೈದ್ಯರ ನಿರ್ಲಕ್ಷ್ಯತನದಿಂದ ಮಕ್ಕಳು ಸಾವನ್ನಪ್ಪಿರುವುದಾಗಿ ಡಿಸಿ ಅವರು ವರದಿಯಲ್ಲಿ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ(ಸಿಎಂಓ) ಹಾಗೂ ಆಸ್ಪತ್ರೆಯ ವೈದ್ಯರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next