Advertisement
ಹಾಗಂತ ಅವರು ಸಿಡಿಗಳನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಬೇಡಿ. ಅದಾಗಿದ್ದು ಕೊನೆಗೆ. ಅದಕ್ಕೂ ಮುನ್ನಅವರೆಲ್ಲರೂ ಲೈವ್ ಕಾರ್ಯಕ್ರಮ ಕೊಟ್ಟರು. ಲೈವ್ ಆರ್ಕೆಸ್ಟ್ರಾ ಮತ್ತು ಚಿತ್ರತಂಡದವರ ಮಾತುಗಳು ಮುಗಿಯುತ್ತಿದ್ದಂತೆ ಹಾಡುಗಳು ಬಿಡುಗಡೆಯಾದವು.
ಹಾಡುಗಳ ಬಿಡುಗಡೆಗೆ ಕಾದಿದ್ದರು. ಅದೇ ಕಾರಣಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಾಲಿಡಲ್ಲಿಕ್ಕಾಗದಷ್ಟು ಜನ
ತುಂಬಿದ್ದರು. ಅವರೆಲ್ಲರೂ ಮಾತಾಡುವ ಮುನ್ನ ಅನನ್ಯ ಭಟ್, ಪಂಡಿತ್ ಪರಮೇಶ್ವರ ಹೆಗಡೆ, ಅನೂಪ್ ಸೀಳಿನ್ ಮುಂತಾದವರು ಚಿತ್ರದ ಹಾಡುಗಳನ್ನು ಹಾಡಿದರು. ಮೊದಲಿಗೆ ಮಾತಾಡಿದ್ದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ಮೊದಲಿಂದಲೂ ಕಂಟೆಂಟ್ ಇರುವ ಸಿನಿಮಾಗಳು ಸಿಗುತ್ತಿರುವುದರಿಂದ, ಅನೂಪ್ ಖುಷಿಪಟ್ಟರು.
Related Articles
Advertisement
ರೋಹಿತ್ ಪದಕಿ ಆರಂಭದಲ್ಲಿ ಗೆಲುವಾಗಿಯೇ ಮಾತು ಪ್ರಾರಂಭಿಸಿದರು. ತಮ್ಮ ಟಾರ್ಚರ್ ತಡೆದುಕೊಂಡ ಇಡೀ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದರು. ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕೆ ಕಾರಣ ಅನೂಪ್ ಸೀಳಿನ್ ಎಂದು ಹೇಳುವಷ್ಟರಲ್ಲೇ ಅವರ ಸಂಯಮದ ಕಟ್ಟೆ ಒಡೆದಿತ್ತು. ತುಂಬಾನೇ ಎಮೋಷನಲ್ ಆದ ರೋಹಿತ್ ಅಳುತ್ತಲೇ ಮಾತಾಡಿದರು. ಸ್ವಲ್ಪ ಸುಧಾರಿಸಿಕೊಂಡ ಅವರು ಚಿತ್ರದ ಬಗ್ಗೆ ಮಾತಾಡಿದರು. “ಇಲ್ಲಿ ನಾಲ್ಕು ಕಥೆಗಳನ್ನು ಹೇಳುವುದಕ್ಕೆ ಹೊರಟಿದ್ದೀನಿ. ಇದು ಎಲ್ಲರ ಜೀವನದಲ್ಲೂ ಅಥವಾ ಎಲ್ಲರ ಸುತ್ತ ನಡೆಯ ಬಹುದಾಗಿರುತ್ತವೆ. ಚಿತ್ರ ಚೆನ್ನಾಗಿದೆ ಎನ್ನುವುದಕ್ಕಿಂತ, ಕುತೂಹಲಕ್ಕೆ ನೋಡಿ. ಹಾಡುಗಳಾದರೆ ಶೇರ್ ಮಾಡಿ. ಇಂತಹ ಚಿತ್ರ ಗೆದ್ದರೆ ಹೊಸಬರು ಬೆಳೆಯುತ್ತಾರೆ’ ಎಂದು ಹೇಳಿ, ಸಮಾರಂಭ ಮುಗಿಸಿದರು.