Advertisement
ಈಗ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಹೋಗುತ್ತಿದ್ದಾರೆ. ನಾವು ಚಿಕ್ಕವರಿದ್ದಾಗ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳನ್ನು ತೆಗೆಯುತ್ತಿರಲಿಲ್ಲ. ಏಕೆಂದರೆ ಉಪ್ಪು ನೀರಿನ ಮರಳನ್ನು ಬಳಕೆ ಮಾಡಿದ್ದಲ್ಲಿ ಆ ಕಟ್ಟಡಕ್ಕೆ ಬಾಳಿಕೆ ಕಡಿಮೆ. ಈಗ ಇವರ ಭ್ರಷ್ಟಾಚಾರದಿಂದ ಎಲ್ಲ ಮರಳನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡುತ್ತಿದ್ದಾರೆ. ಇದರ ಪರಿಣಾಮವನ್ನು ಮುಂದೆ ನಾವೇ ಅನುಭವಿಸಬೇಕು ಎಂದರು.
ದೇಶದಲ್ಲಿ ರಾಮಮಂದಿರ ವಿವಾದ, ಶಬರಿಮಲೆ ವಿವಾದಗಳ ನಡುವೆ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸುವ ಹಂತಕ್ಕೆ ಕೇಂದ್ರ ಸರಕಾರ ಹೋಗಿದೆ. ಸುಪ್ರೀಂ ಕೋರ್ಟ್‌ನ ಯಾವುದೇ ಆದೇಶಗಳೂ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಶಂಕರ್ ಹೇಳಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಶೇಖರ್ ಬಂಗೇರ, ಸುರೇಶ್ ಕಲ್ಲಾಗರ, ಕವಿರಾಜ್ ಉಪಸ್ಥಿತರಿದ್ದರು.