Advertisement

3ನೇ ದಿನಕ್ಕೆ ಕಾಲಿಟ್ಟ ದಿಲ್ಲಿಯ ಏಮ್ಸ್‌ ರೆಸಿಡೆಂಟ್‌ ವೈದ್ಯರ ಮುಷ್ಕರ

12:14 PM Apr 28, 2018 | Team Udayavani |

ಹೊಸದಿಲ್ಲಿ : ಸಿಬಂದಿಗಳು ಮತ್ತು ರೋಗಿಗಳ ಮುಂದೆಯೇ  ತಮ್ಮ ಸಹೋದ್ಯೋಗಿಗೆ ಕಪಾಳ ಮೋಕ್ಷ ಮಾಡಿದ್ದ ಹಿರಿಯ ವೈದ್ಯರೋರ್ವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಇಲ್ಲಿನ ಏಮ್ಸ್‌ ಆಸ್ಪತ್ರೆಯ ರೆಸಿಡೆಂಟ್‌ ವೈದ್ಯರು ನಡೆಸುತ್ತಿರುವ ಮುಷ್ಕರ ಇಂದು 3ನೇ ದಿನ ತಲುಪಿದೆ.

Advertisement

ಪರಿಣಾವಾಗಿ ದಿನನಿತ್ಯ ನಡೆಯಬೇಕಿರುವ ಶಸ್ತ್ರ ಚಿಕಿತ್ಸೆಗಳು ರದ್ದಾಗಿವೆ; ಹೊರ ರೋಗಿಗಳ ವಿಭಾಗ ತೀವ್ರವಾಗಿ ಬಾಧಿತವಾಗಿದೆ; ಒಪಿಡಿ ಗೆಂದು ಬಂದ ರೋಗಿಗಳು ಮನೆಗೆ ವಾಪಸಾಗುತ್ತಿದ್ದಾರೆ ಎಂದು ವರದಿಯಾಗಿದೆ. 

ಕೇವಲ ಎಮರ್ಜೆನ್ಸಿ ಮತ್ತು ಐಸಿಯು ಸೇವೆಗಳು ಮಾತ್ರವೇ ಕೆಲಸ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next