Advertisement

Pakistan: ಪಾಕ್‌ ಗುಪ್ತಚರ ಸಂಸ್ಥೆಗೆ ದಾವೂದ್‌ ಸಾರಥ್ಯ?

10:52 PM Oct 01, 2023 | Team Udayavani |

ಇಸ್ಲಾಮಾಬಾದ್‌: ಭೂಗತ ಲೋಕದ ಪಾತಕಿ ದಾವೂದ್‌ ಇಬ್ರಾಹಿಂನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹೆಚ್ಚುವರಿ ಮಹಾ ನಿರ್ದೇಶಕನನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಹಲವಾರು ವರ್ಷಗಳಿಂದ ಪಾಕ್‌ ಪರವಾಗಿ ದಾವೂದ್‌ ಬೇಹುಗಾರಿಕೆ ಮಾಡಿ  ದ್ದಕ್ಕೆ ಪ್ರತಿಫ‌ಲ ವಾಗಿ ಆತನಿಗೆ ಈ ಹುದ್ದೆ ನೀಡಲಾಗಿದೆ ಎಂಬು ದಾಗಿಯೂ ತಿಳಿದು ಬಂದಿದೆ.
1993 ಮಾರ್ಚ್‌ 12ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದ್ದ ದಾವೂದ್‌ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರನೆಂದು ಘೋಷಿಸಿದ್ದು, ಭಾರತೀಯ ತನಿಖಾ ಸಂಸ್ಥೆಗಳು ಕೂಡ ಆತನನ್ನು ಹುಡುಕುತ್ತಿವೆ. ಈ ನಡುವೆಯೇ ಆತ ಪಾಕ್‌ ಬೇಹುಗಾರಿಕೆ ಸಂಸ್ಥೆಗೆ ಮಹಾನಿರ್ದೇಶ ಕನಾಗಿರುವ ಸುದ್ದಿ ವ್ಯಾಪಿಸಿದೆ.

Advertisement

ಉಗ್ರ ಹಫೀಜ್‌ ಆಪ್ತ ಹತ್ಯೆ
26/11ರ ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್‌ ಸಯೀದ್‌ನ ಆಪ್ತ ಮುಫ್ತಿ ಖೈಸರ್‌ ಫಾರೂಕ್‌ ಎಂಬಾತನನ್ನು ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಗೈಯ್ಯಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಸಾಮನಾಬಾದ್‌ ಬಳಿಯ ಧಾರ್ಮಿಕ ಸಂಸ್ಥೆಯೊಂದರ ಸಮೀಪ ಗುಂಡಿಟ್ಟು ಖೈಸರ್‌ನನ್ನು ಹತ್ಯೆಗೈದಿದ್ದು, ಘಟನೆಯಲ್ಲಿ 10 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next