Advertisement

ಭಾರತಕ್ಕೆ ಮರಳಲು ದಾವೂದ್‌ ಕೇಂದ್ರದ ಜತೆ ಮಾತುಕತೆ ?

04:33 PM Sep 21, 2017 | Team Udayavani |

ಮುಂಬಯಿ : “ದಾವೂದ್‌ ಇಬ್ರಾಹಿಂ ಭಾರತಕ್ಕೆ ಮರಳಲು ಬಯಸಿದ್ದಾನೆ ಮತ್ತು ಈ ನಿಟ್ಟಿನಲ್ಲಿ ಆತ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾನೆ; ದಾವೂದ್‌ ಭಾರತಕ್ಕೆ ಮರಳುವ ರಾಜಕೀಯ ಲಾಭವನ್ನು ಕೇಂದ್ರ ಸರಕಾರ ಬಾಚಿಕೊಳ್ಳಲಿದೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ಮುಖ್ಯಸ್ಥ ರಾಜ ಠಾಕ್ರೇ ಹೇಳಿದ್ದಾರೆ. 

Advertisement

ತಮ್ಮ ಅಧಿಕೃತ ಫೇಸ್‌ ಬುಕ್‌ ಪೇಜ್‌ ಬಿಡುಗಡೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ರಾಜ್‌ ಠಾಕ್ರೆ “ದಾವೂದ್‌ ಈಗ ದೈಹಿಕವಾಗಿ ವಿಕಲಾಂಗನಾಗಿದ್ದಾನೆ. ಆದ ಕಾರಣ ಆತ ಭಾರತಕ್ಕೆ ಮರಳಲು ಉತ್ಸುಕನಾಗಿದ್ದಾನೆ ಮತ್ತು ಆ ಬಗ್ಗೆ ಕೇಂದ್ರ ಸರಕಾರದೊಂದಿಗೆ ಚೌಕಾಶಿ ನಡೆಸುತ್ತಿದ್ದಾನೆ. ಮುಂದಿನ ಮಹಾಚುನಾವಣೆಗೆ ಕೊಂಚ ಮುನ್ನ ಸರಕಾರ ದಾವೂದ್‌ನನ್ನು ಭಾರತಕ್ಕೆ ತರಲಿದೆ ಮತು ಅದರ ಪೂರ್ತಿ ರಾಜಕೀಯ ಲಾಭವನ್ನು ಪಡೆಯುವ ಹುನ್ನಾರ ಹೊಂದಿದೆ. ನಾನೇನೂ ಜೋಕ್‌ ಮಾಡುತ್ತಿಲ್ಲ; ಆದರೆ ಇದು ನಿಜ ಮತ್ತು ಸದ್ಯದಲ್ಲೇ ಅದು ನಿಜವೆಂದು ನಿಮಗೂ ಗೊತ್ತಾಗಲಿದೆ’ ಎಂದು ಹೇಳಿದರು. 

“ದಾವೂದ್‌ ದೇಶಕ್ಕೆ ಮರಳಲು ಸಿದ್ಧನಾದಾಗ ನರೇಂದ್ರ ಮೋದಿ ಸರಕಾರ ಆ ಬಗ್ಗೆ ತಮಟೆ ಬಾರಿಸಲಿದೆ; ಬಿಜೆಪಿಯ ಪಾಲಿಗೆ ಅದೊಂದು ಭಾರೀ ಲಾಭದಾಯಕ ರಾಜಕೀಯ ನಡೆ ಆಗಲಿದೆ’ ಎಂದು ಠಾಕ್ರೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next