Advertisement

ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡಿದ್ದ ಡೇವಿಡ್ ವೀಸ್ ಈ ಬಾರಿ ನಮೀಬಿಯಾ ತಂಡದ ಪರ ಕಣಕ್ಕೆ

02:52 PM Sep 11, 2021 | Team Udayavani |

ದುಬೈ: ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡಿದ್ದ ಆಲ್ ರೌಂಡರ್ ಡೇವಿಡ್ ವೀಸ್ ಈ ಬಾರಿ ನಮೀಬಿಯಾ ತಂಡದ ಪರ ಟಿ20 ಕ್ರಿಕೆಟ್ ವಿಶ್ವಕಪ್ ನಲ್ಲಿ ಆಡಲಿದ್ದಾರೆ.

Advertisement

ಡೇವಿಡ್ ವೀಸ್ 2013ರಿಂದ 2016ರವರೆಗೆ ದಕ್ಷಿಣ ಆಫ್ರಿಕಾ ಪರ ಆಡಿದ್ದಾರೆ. 2013ರಲ್ಲಿ ಲಂಕಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವೀಸ್  2016ರಲ್ಲಿ ಲಂಕಾ ವಿರುದ್ಧವೇ ಹರಿಣಗಳ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.

ಇದನ್ನೂ ಓದಿ:ನೀರಜ್ ಚೋಪ್ರಾ ಕನಸು ನನಸಾಯ್ತು: ತಂದೆ ತಾಯಿಯೊಂದಿಗೆ ವಿಮಾನ ಪ್ರಯಾಣ ಮಾಡಿದ ಚಿನ್ನದ ಹುಡುಗ

2016ರ ಟಿ20 ವಿಶ್ವಕಪ್ ನಲ್ಲಿ ಡೇವಿಡ್ ವೀಸ್ ದಕ್ಷಿಣ ಆಫ್ರಿಕಾ ಪರವಾಗಿಯೇ ಆಡಿದ್ದರು. ಸದ್ಯ ನಮೀಬಿಯಾ ತಂಡ ಸೇರಿರುವ ವೀಸ್ ಈ ಬಾರಿ ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ.

ನಮೀಬಿಯಾ ತಂಡ: ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಸ್ಟೀಫನ್ ಬಾರ್ಡ್, ಕಾರ್ಲ್ ಬಿರ್ಕೆನ್‌ಸ್ಟಾಕ್, ಮಿಚೌ ಡು ಪ್ರೀಜ್, ಜಾನ್ ಫ್ರೈಲಿಂಕ್, ಜೇನ್ ಗ್ರೀನ್, ನಿಕೋಲ್ ಲೋಫಿ-ಈಟನ್, ಬರ್ನಾರ್ಡ್ ಸ್ಕಾಲ್ಟ್ಜ್, ಬೆನ್ ಶಿಕೊಂಗೊ, ಜೆಜೆ ಸ್ಮಿತ್, ರುಬೆನ್ ಟ್ರಂಪೆಲ್ಮನ್, ಮೈಕೆಲ್ ವ್ಯಾನ್ ಲಿಂಗನ್, ಡೇವಿಡ್ ವೈಸ್, ಕ್ರೇಗ್ ವಿಲಿಯಮ್ಸ್, ಪಿಕ್ಕಿ ಯಾ ಫ್ರಾನ್ಸ್.

Advertisement
Advertisement

Udayavani is now on Telegram. Click here to join our channel and stay updated with the latest news.

Next