ಹೈದರಾಬಾದ್: ಈ ಋತುವಿನ ಐಪಿಎಲ್ ಗೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಾಯಕತ್ವದಲ್ಲಿ ಬದಲಾವಣೆ ಮಾಡಿಕೊಂಡಿದೆ. ಕಳೆದ ವರ್ಷ ನಾಯಕನಾಗಿದ್ದ ಕೇನ್ ವಿಲಿಯಮ್ಸನ್ ಬದಲಿಗೆ ಡೇವಿಡ್ ವಾರ್ನರ್ ಈ ವರ್ಷ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ.
ಮತ್ತೆ ನಾಯಕತ್ವ ಹೊರುತ್ತಿರುವ ಬಗ್ಗೆ ಡೇವಿಡ್ ವಾರ್ನರ್ ಮಾತನಾಡುತ್ತಿರುವ ವಿಡಿಯೋವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.
ಡೇವಿಡ್ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಹೈದರಾಬಾದ್ ತಂಡ ಟ್ರೋಫಿ ಜಯಿಸಿತ್ತು. 2018ರಲ್ಲಿ ಸ್ಯಾಂಡ್ ಪೇಪರ್ ಗೇಟ್ ಪ್ರಕರಣದಿಂದಾಗಿ ಐಪಿಎಲ್ ನಿಂದ ಐಪಿಎಲ್ ಆಡಿರಲಿಲ್ಲ. ಈ ವೇಳೆ ಕೇನ್ ವಿಲಿಯಮ್ಸನ್ ತಂಡದ ಚುಕ್ಕಾಣಿ ಹಿಡಿದಿದ್ದರು. 2019ರಲ್ಲಿ ವಾರ್ನರ್ ಮರಳಿದ್ದರೂ ನಾಯಕತ್ವದ ಜವಾಬ್ದಾರಿ ಕೇನ್ ಗೆ ವಹಿಸಲಾಗಿತ್ತು.
2020ರ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯಿಂದ ಸಂತಸವಾಗಿದೆ. ಮತ್ತೆ ನಾಯಕತ್ವದ ಜವಾಬ್ದಾರಿ ವಹಿಸಿದ ಕಾರಣಕ್ಕೆ ಆಭಾರಿಯಾಗಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ.
ಮಾರ್ಚ್ 29ರಂದು 2020ರ ಐಪಿಎಲ್ ಆರಂಭವಾಗಲಿದೆ. ಎಪ್ರಿಲ್ 1ರಂದು ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.