ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಮಧ್ಯೆ ಆತಿಥೇಯ ಆಸೀಸ್ ಗೆ ವಿಕೆಟ್ ಕೀಪರ್ ಸಮಸ್ಯೆ ಎದುರಾಗಿದೆ.
ಆಸೀಸ್ ಬ್ಯಾಕಪ್ ಕೀಪರ್ ಜೋಶ್ ಇಂಗ್ಲಿಸ್ ಅವರು ಇತ್ತೀಚಿಗೆ ಗಾಲ್ಫ್ ಕೋರ್ಸ್ ನಲ್ಲಿ ಗಾಯಗೊಂಡಿದ್ದರು. ಹೀಗಾಗಿ ಅವರು ಕೂಟದಿಂದಲೇ ಹೊರಬಿದ್ದಿದ್ದಾರೆ. ಸದ್ಯ ಆಸೀಸ್ ತಂಡದಲ್ಲಿ ಮ್ಯಾಥ್ಯೂ ವೇಡ್ ಅವರೊಬ್ಬರೆ ವಿಕೆಟ್ ಕೀಪರ್ ಆಗಿ ಉಳಿದಿದ್ದಾರೆ. ಒಂದು ವೇಳೆ ವೇಡ್ ಗಾಯಗೊಂಡರೆ ಏನು ಎಂಬ ಸಮಸ್ಯೆ ಕಾಡಿದೆ.
ಈ ಬಗ್ಗೆ ಮಾತನಾಡಿದ ಆಸೀಸ್ ನಾಯಕ ಆ್ಯರೋನ್ ಫಿಂಚ್, ‘ಒಂದು ವೇಳೆ ಮ್ಯಾಥ್ಯೂ ವೇಡ್ ಗಾಯಗೊಂಡರೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರಲಿದ್ದಾರೆ. ಅವರು ನಿನ್ನೆ ಸ್ವಲ್ಪ ಕೀಪಿಂಗ್ ಪ್ರಾಕ್ಟೀಸ್ ಮಾಡಿದ್ದಾರೆ. ನಾನೂ ಮಾಡಬಹುದು. ಆದರೆ ಮೊದಲ ಬಾರಿಗೆ ನಾಯಕತ್ವದ ಜೊತೆ ವಿಕೆಟ್ ಕೀಪಿಂಗ್ ಕಷ್ಟವಾಗಬಹುದು. ವೇಗಿ ಮಿಚೆಲ್ ಸ್ಟಾರ್ಕ್ ಕೂಡಾ ಕೀಪರ್ ಆಗಬಹುದು ಎಂದುಹೇಳಿದ್ದಾರೆ.
ಇದನ್ನೂ ಓದಿ:ಚಿತ್ರ ವಿಮರ್ಶೆ: ಪಾತಕಲೋಕದ ನೆತ್ತರ ಚಿತ್ರಣ ‘ಹೆಡ್ ಬುಷ್’
ಬಹುಶಃ ವಿಕೆಟ್ ಕೀಪಿಂಗ್ ಮಾಡಲು ನನಗೆ ಸದ್ಯ ವಯಸ್ಸಾಯಿತು. ನನ್ನ ಕಾಲ ಗಂಟಿಗೆ ಈಗ ಪ್ರಾಯವಾಗಿದೆ ಎಂದು 35 ವರ್ಷದ ಫಿಂಚ್ ಹೇಳಿದರು.