ಮುಂಬೈ: ಮುಂದಿನ ಐಪಿಎಲ್ ನ ಮೆಗಾ ಹರಾಜಿಗೆ ಬಿಸಿಸಿಐ ಸಿದ್ದತೆ ನಡೆಸುತ್ತಿದೆ. ಮುಂದಿನ ಆವೃತ್ತಿಗೆ ಎರಡು ಹೊಸ ತಂಡಗಳು ಈಗಾಗಲೇ ಅಂತಿಮವಾಗಿದ್ದು, ಹತ್ತು ತಂಡಗಳೊಂದಿಗೆ ಮುಂದಿನ ಐಪಿಎಲ್ ನಡೆಯಲಿದೆ.
ಹಾಲಿ ತಂಡಗಳು ಈಗಾಗಲೇ ತಮ್ಮ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ನೀಡಿದೆ. ಹೊಸ ಎರಡು ತಂಡಗಳಿಗೆ ಸದ್ಯ ತಂಡಗಳಿಂದ ಬಿಡುಗಡೆಯಾಗಿರುವ ಆಟಗಾರರಲ್ಲಿ ತಲಾ ಮೂವರನ್ನು ಹರಾಜಿಗೂ ಮೊದಲೇ ಖರೀದಿಸುವ ಅವಕಾಶವಿದೆ.
ಕೆ.ಎಲ್.ರಾಹುಲ್, ಡೇವಿಡ್ ವಾರ್ನರ್, ರಶೀದ್ ಖಾನ್, ಸುರೇಶ್ ರೈನಾ, ಯುಜಿ ಚಾಹಲ್ ಮುಂತಾದ ಸ್ಟಾರ್ ಆಟಗಾರರು ಈ ಸಾಲಿನಲ್ಲಿದ್ದಾರೆ. ಈ ಆಟಗಾರರಿಗೆ ಹೊಸ ಫ್ರಾಂಚೈಸಿಗಳು ಆರಂಭದಲ್ಲೇ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ಕುಮಾರಣ್ಣೋರು ಇನ್ನೊಂದಪಾ ಸಿಎಂ ಆದ್ರೆ ವಿಜಯೇಂದ್ರಣ್ಣೋರು ಡಿಸಿಎಂ ಆಯ್ತಾರಂತೆ ಹೌದಾ ಹುಲಿಯಾ..
Related Articles
ಆದರೆ ಈ ನಡುವೆ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರು ಹರಾಜಿನಲ್ಲೇ ಪಾಲ್ಗೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು, ಇತ್ತೀಚೆಗೆ, ಐಪಿಎಲ್ ಗೆ ಸಂಬಂಧಿಸಿದಂತೆ “ವಾರ್ನರ್ ಬ್ರೋ ಐಪಿಎಲ್ ಬಗ್ಗೆ ಎನು ವಿಚಾರ” ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವಾರ್ನರ್ “ ಬಹುಶಃ ಹರಾಜು” ಎಂದಿದ್ದಾರೆ.
ಡೇವಿಡ್ ವಾರ್ನರ್ ಅವರು ಹಲವು ವರ್ಷಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಹೈದರಾಬಾದ್ ಫ್ರಾಂಚೈಸಿಯು ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ ರನ್ನು ಮಾತ್ರ ಉಳಿಸಿಕೊಂಡಿದೆ.