Advertisement

ಡೇವಿಡ್‌ ವಾರ್ನರ್‌ ವೈಫ‌ಲ್ಯ: 8 ಸಲ ಹತ್ತರೊಳಗೆ ಔಟ್‌!

11:48 PM Sep 13, 2019 | sudhir |

ಲಂಡನ್‌: ಆಸ್ಟ್ರೇಲಿಯದ ಖ್ಯಾತ ಆರಂಭಕಾರ ಡೇವಿಡ್‌ ವಾರ್ನರ್‌ ಮತ್ತೂಮ್ಮೆ ಕಳಪೆ ಆಟದಿಂದ ಸುದ್ದಿಯಾಗಿದ್ದಾರೆ. ಓವಲ್‌ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 5 ರನ್ನಿಗೆ ಔಟಾಗಿದ್ದಾರೆ. ಹೀಗೆ ಒಂದೇ ಆ್ಯಶಸ್‌ ಸರಣಿಯಲ್ಲಿ ಅತೀ ಹೆಚ್ಚು 8 ಸಲ 10 ರನ್ನಿಳೊಳಗೆ ಔಟಾಗಿ ಅವಮಾನಕರ ದಾಖಲೆ ಬರೆದಿದ್ದಾರೆ.

Advertisement

ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 294 ರನ್ನಿಗೆ ಆಲೌಟಾಗಿದ್ದು, ಜವಾಬು ನೀಡು ತ್ತಿರುವ ಆಸ್ಟ್ರೇಲಿಯ ಸ್ಟೀವನ್‌ ಸ್ಮಿತ್‌ ಸಾಹಸದಿಂದ ತನ್ನ ಮೊದಲ ಇನ್ನಿಂಗ್ಸ್‌ ನಲ್ಲಿ 8 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿದೆ. ಸ್ಮಿತ್‌ 80 ರನ್‌ ಬಾರಿಸಿದರು (145 ಎಸೆತ, 9 ಬೌಂಡರಿ, 1 ಸಿಕ್ಸರ್‌).

ಜೋಫ‌Å ಆರ್ಚರ್‌ ಅವರ ಘಾತಕ ಆರಂಭಿಕ ಸ್ಪೆಲ್‌ಗೆ ತತ್ತರಿಸಿದ ಆಸೀಸ್‌, 14 ರನ್‌ ಆಗುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತ್ತು. ಮಾರ್ಕಸ್‌ ಹ್ಯಾರಿಸ್‌ ಕೇವಲ 3 ರನ್‌ ಮಾಡಿ ನಿರ್ಗಮಿಸಿದರು. 3ನೇ ವಿಕೆಟಿಗೆ ಜತೆಗೂಡಿದ ಲಬುಶೇನ್‌ (48) ಮತ್ತು ಸ್ಮಿತ್‌ 69 ರನ್‌ ಪೇರಿಸಿ ತಂಡವನ್ನು ಮೇಲೆತ್ತಿದರು. ಲಬುಶೇನ್‌ ಬಳಿಕ ಮ್ಯಾಥ್ಯೂ ವೇಡ್‌ 19 ರನ್‌ ಮಾಡಿ ವಾಪಸಾದರು.

ಆಸ್ಟ್ರೇಲಿಯದ ಬೌಲಿಂಗ್‌ ಆಕ್ರಮಣದಲ್ಲಿ ಮಿಂಚಿದ ಮಿಚೆಲ್‌ ಮಾರ್ಷ್‌ 46 ರನ್ನಿತ್ತು 5 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮಿನ್ಸ್‌ 3, ಹ್ಯಾಝಲ್‌ವುಡ್‌ 2 ವಿಕೆಟ್‌ ಉರುಳಿಸಿದರು. ಇಂಗ್ಲೆಂಡ್‌ ಬ್ಯಾಟಿಂಗ್‌ ಸರದಿಯಲ್ಲಿ ಜಾಸ್‌ ಬಟ್ಲರ್‌ (70), ಜೋ ರೂಟ್‌ (57) ಅವರಿಂದ ಅರ್ಧ ಶತಕ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next