Advertisement

ಮಗಳೊಂದಿಗೆ ‘ಪುಷ್ಪ’ ಚಿತ್ರದ ಮತ್ತೊಂದು ರೀಲ್ ಮಾಡಿದ ಡೇವಿಡ್ ವಾರ್ನರ್: ವಿಡಿಯೋ

09:12 AM Jan 30, 2022 | Team Udayavani |

ಸಿಡ್ನಿ: ಸದಾ ಒಂದಿಲ್ಲೊಂದು ವಿಡಿಯೋ ಮಾಡುತ್ತಾ, ಇನ್ಸ್ಟಾಗ್ರಾಮ್ ನಲ್ಲಿ ಹಿರಿಬಿಡುವ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಇದೀಗ ಮತ್ತೊಂದು ವಿಡಿಯೀ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ರ ಬ್ಲಾಕ್ ಬಸ್ಟರ್ ಚಿತ್ರ ‘ಪುಷ್ಪ’ ಚಿತ್ರದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

Advertisement

ಭಾರತೀಯ ಚಿತ್ರಗಳ ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳ ಅಭಿಮಾನಿಯಾಗಿರುವ ವಾರ್ನರ್ ಸದಾ ರೀಲ್ಸ್ ಮಾಡುತ್ತಿರುತ್ತಾರೆ. ಈಗಾಗಲೇ ಪುಷ್ಪ ಚಿತ್ರದ ಎರಡು ರೀಲ್ ಮಾಡಿದ್ದು, ಇದೀಗ ಮಗಳೊಂದಿಗೆ ಮತ್ತೊಂದು ರೀಲ್ ಮಾಡಿದ್ದಾರೆ.

ಇದನ್ನೂ ಓದಿ:ಸಹಮತ ಇಲ್ಲದ ದೈಹಿಕ ಸಂಪರ್ಕ ಅತ್ಯಾಚಾರ ಎಂದು ಪರಿಗಣಿಸಿದರೆ ಕಷ್ಟ

“ಪುಷ್ಪ ಹೆಸರು ಕೇಳಿ ಫ್ಲವರ್ ಅಂದುಕೊಂಡಿಯಾ.., ಫೈರ್ ನಾನು” ಎಂಬ ಫೇಮಸ್ ಡೈಲಾಗನ್ನು ವಾರ್ನರ್ ರೀಲ್ ಮಾಡಿದ್ದಾರೆ. ಮಗಳು ಇಂಡಿ ಕೂಡಾ ವಾರ್ನರ್ ಜೊತೆ ಸೇರಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದ ವಾರ್ನರ್ ಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಸದ್ಯ ಹೈದರಾಬಾದ್ ತಂಡವನ್ನು ವಾರ್ನರ್ ತೊರೆದಿದ್ದು ಹೊಸ ತಂಡದ ಹುಡುಕಾಟದಲ್ಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next