Advertisement

ವಿಶ್ವಕಪ್ ಗೆಲುವಿನ ಸಂತಸದಲ್ಲೇ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್

08:43 AM Nov 15, 2021 | Team Udayavani |

ದುಬೈ: ಒಂದು ತಿಂಗಳ ಕಾಲ ನಡೆದ ಟಿ20 ವಿಶ್ವಕಪ್ ಗೆ ಭಾನುವಾರ ತೆರೆ ಬಿದ್ದಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದ ಫೈನಲ್ ಮುಖಾಮುಖಿಯಲ್ಲಿ ಆಸೀಸ್ ತಂಡ ಗೆದ್ದ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತು.

Advertisement

ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ ಭಾನುವಾರ ಟಿ20 ವಿಶ್ವಕಪ್‌ನಲ್ಲಿ ತಮ್ಮ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾರ್ನರ್ ಈ ಸಾಧನೆ ಮಾಡಿದರು.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ ಆತಿಥ್ಯ ಅಮೆರಿಕಕ್ಕೆ?

ನ್ಯೂಜಿಲೆಂಡ್ ವಿರುದ್ಧ 53 ರನ್‌ಗಳ ಇನ್ನಿಂಗ್ಸ್ ಆಡಿದ ವಾರ್ನರ್ ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಒಟ್ಟು 289 ರನ್‌ ಗಳಿಸಿದ ಸಾಧನೆ ಮಾಡಿದರು. ಈ ಹಿಂದೆ 2007ರ ಟಿ20 ವಿಶ್ವಕಪ್ ನಲ್ಲಿ ಮ್ಯಾಥ್ಯೂ ಹೇಡನ್ 265 ರನ್ ಗಳಿಸಿದ್ದರು. ವಾರ್ನರ್ ಈ ದಾಖಲೆಯನ್ನು ಮುರಿದರು.

ಕೂಟಕ್ಕೂ ಮೊದಲು ಕಳಪೆ ಫಾರ್ಮ್ ನಲ್ಲಿದ್ದ ವಾರ್ನರ್ ಪ್ರಮುಖ ಹಂತದಲ್ಲಿ ತಮ್ಮ ನಿಜವಾದ ಪ್ರದರ್ಶನ ತೋರಿದರು. ಫೈನಲ್ ನಲ್ಲೂ ಆಸೀಸ್ ಗೆ ಉತ್ತಮ ಆರಂಭ ಒದಗಿಸಿದ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next