Advertisement

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

12:11 PM May 21, 2024 | Team Udayavani |

ದಾವಣಗೆರೆ: ಮರ ಬಿದ್ದು ಕಾರು ಜಖಂಗೊಂಡ ಘಟನೆ ಮೇ.21ರ ಮಂಗಳವಾರ ಬೆಳಗ್ಗೆ ಕೆ.ಆರ್.‌ ರಸ್ತೆಯಲ್ಲಿ ಸಂಭವಿಸಿದೆ.

Advertisement

ಅದೃಷ್ಟವಶಾತ್ ಕಾರಿನ ಚಾಲಕ ಹರಪನಹಳ್ಳಿ ತಾಲೂಕಿನ ಕವಲಹಳ್ಳಿ ಗ್ರಾಮದ ಜನಾರ್ದನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದವವರು.

ದಾವಣಗೆರೆಯಿಂದ ಕವಲಹಳ್ಳಿಗೆ ತೆರಳುತ್ತಿದ್ದಾಗ ಅಶೋಕ ಚಿತ್ರಮಂದಿರ ಹಿಂಭಾಗದಲ್ಲಿ ಮರದ ಬೃಹತ್ ಕೊಂಬೆ ಕಾರಿನ ಮೇಲೆ ಬಿದ್ದಿದೆ.‌ ಕ್ಷಣಾರ್ಧದಲ್ಲಿ ವಿದ್ಯುತ್ ಕಂಬವೂ ಕಾರಿನ ಮೇಲೆ ಬಿದ್ದಿದೆ. ಆದರೆ, ಯಾವುದೇ ಅಪಾಯವಾಗಿಲ್ಲ.

ದಾವಣಗೆರೆಯಲ್ಲಿ ಗೊಬ್ಬರದ ಅಂಗಡಿ ಇದೆ. ಎಂದಿನಂತೆ ಕವಲಹಳ್ಳಿಗೆ ಹೋಗುತ್ತಿದ್ದೆ. ನನ್ನ ಮುಂದೆ ಹೋಗುತ್ತಿದ್ದ ವಾಹನದ ಮೇಲೆ ಸಣ್ಣ ಅರೆ ಬಿತ್ತು. ‌ನೋಡ ನೋಡುತ್ತಿದ್ದಂತೆಯೇ ಮರದ ದೊಡ್ಡ ಕೊಂಬೆ, ವಿದ್ಯುತ್ ಕಂಬ ಬಿದ್ದವು. ದೇವರು ದೊಡ್ಡವನು ಏನೂ ಅಪಾಯ ಆಗಲಿಲ್ಲ ಎಂದು ಚಾಲಕ ಜನಾರ್ದನ್ ತಿಳಿಸಿದರು.

ಮರ ಬಿದ್ದ ಪರಿಣಾಮ ಸಂಚಾರಕ್ಕೆ ವ್ಯತ್ಯಯ ಆಗಿತ್ತು. ‌ನಗರಪಾಲಿಕೆ, ಪೊಲೀಸ್ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next