Advertisement

ದಸರಾ ಧರ್ಮ ಸಮ್ಮೇಳನಕ್ಕೆ ಸಜ್ಜು

11:17 AM Sep 29, 2019 | Naveen |

ದಾವಣಗೆರೆ: ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ 10 ದಿನಗಳ ನಡೆಯಲಿರುವ 28ನೇ ದಸರಾ ದರ್ಬಾರ್‌ಗೆ ದೇವನಗರಿ ಸಜ್ಜುಗೊಂಡಿದೆ.

Advertisement

ಇಂದಿನಿಂದ ಅ.2ರವರೆಗೆ ಶ್ರೀರಂಭಾಪುರಿ ಪೀಠದ ಜಗದ್ಗುರು ಶ್ರೀಪ್ರಸನ್ನ ರೇಣುಕ ಡಾ|
ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಡೆಯಲಿರುವ ದಸರಾ ದರ್ಬಾರ್‌ಗೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ನಗರದ ಪಿಬಿ ಜರುಗಲಿರುವ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ಮಹೋತ್ಸವ ಕಣ್ತುಂಬಿಕೊಳ್ಳುವ ಸುಯೋಗ ಈ ಬಾರಿ ದಾವಣಗೆರೆ ನಗರದ ನಾಗರಿಕರಿಗೆ ಒದಗಿ ಬಂದಿದೆ. ಶ್ರೀಜಗದ್ಗುರು ರೇಣುಕಾಚಾರ್ಯರು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಭದ್ರಾ ನದಿ ತಟದಲ್ಲಿ  ರಂಭಾಪುರಿ ಪೀಠ ಸ್ಥಾಪಿಸಿ, ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ತತ್ವ ಸಿದ್ಧಾಂತ ಬೋಧಿಸಿ, ಉದ್ಧರಿಸಿದ ಇತಿಹಾಸವಿದೆ. ನೂರಿಪ್ಪತ್ತು ಪರಮಾಚಾರ್ಯರು ಶ್ರೀ ಪೀಠ ಆರೋಹಣಗೈದು ಜನಮನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ.

ಶ್ರೀಪೀಠದ ಲಿಂಗೈಕ್ಯ ಜಗದ್ಗುರುಗಳಾದ ವೀರಗಂಗಾಧರ ಶಿವಾಚಾರ್ಯರು ಶಕ್ತಿ ಆರಾಧನೆ ದಸರಾ ನಾಡಹಬ್ಬಕ್ಕೆ ಮೆರುಗು ತಂದುಕೊಟ್ಟ ಕೀರ್ತಿಗೆ ಪಾತ್ರರಾದವರು.

1986ರಲ್ಲಿ ಶ್ರೀ ರಂಭಾಪುರಿ ಪೀಠದ ಜಗದ್ಗುರು ಶ್ರೀಪ್ರಸನ್ನ ರೇಣುಕ ವೀರ ರುದ್ರಮುನಿದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದಾವಣಗೆರೆಯಲ್ಲಿ ಶರನ್ನವರಾತ್ರಿ ಜರುಗಿದ್ದು ಅವಿಸ್ಮರಣೀಯ. ಮಧ್ಯ ಕರ್ನಾಟಕದ ವಾಣಿಜ್ಯ ಹಾಗೂ ಶೈಕ್ಷಣಿಕ ನಗರಿ ದಾವಣಗೆರೆಯಲ್ಲಿ ಈ ಬಾರಿ ಶರನ್ನವರಾತ್ರಿ ಮಹೋತ್ಸವಕ್ಕೆ ಹೈಸ್ಕೂಲ್‌ ಮೈದಾನದಲ್ಲಿ 145+240 ಅಡಿ ಅಳತೆಯ ವಿಸ್ತಾರದಲ್ಲಿ ಮಾನವ ಧರ್ಮ ಮಂಟಪ ಸಿದ್ಧಗೊಂಡಿದೆ. ಸಭಾಂಗಣದಲ್ಲಿ 8 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. 30+60 ಅಳತೆಯ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಮಳೆಯಿಂದ ರಕ್ಷಣೆಗೆ ತಗಡಿನ ಹೊದಿಕೆ ಹಾಕಲಾಗಿದೆ. 10 ದಿನಗಳ ಕಾಲ ನಡೆಯಲಿರುವ ಸಂಭ್ರಮದಲ್ಲಿ ನಾಡಿನ ಶಿವಾಚಾರ್ಯರು, ಸಾಹಿತಿಗಳು, ಚಿಂತಕರು, ಕಲಾವಿದರು, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯದ ಸಚಿವರು, ರಾಜಕಾರಣಿಗಳು, ವಿದ್ವಾಂಸರು ಭಾಗಿಯಾಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next