Advertisement

ದಾವಣಗೆರೆ ಜಿಲ್ಲೆಗೆ ಮೂರು ಲ್ಯಾಬ್‌

11:13 AM May 10, 2020 | Team Udayavani |

ದಾವಣಗೆರೆ: ನಗರದ ಹೊರವಲಯದಲ್ಲಿರುವ ಎಸ್‌ಎಸ್‌ ಆಸ್ಪತ್ರೆಯಲ್ಲಿನ ಪಿಸಿಆರ್‌ ಲ್ಯಾಬ್‌ನಲ್ಲಿ ಶನಿವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಕೋವಿಡ್ ವೈರಸ್‌ ಪರೀಕ್ಷಾ ಲ್ಯಾಬ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್‌ ಲ್ಯಾಬ್‌ ಅನಿವಾರ್ಯತೆ ಬಗ್ಗೆ ಎಲ್ಲ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಭೆ ನಡೆಸಿ, ಸರ್ಕಾರದ ವ್ಯವಸ್ಥೆ ಜೊತೆಗೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್‌ ಲ್ಯಾಬ್‌ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದೆ.

Advertisement

ಈ ನಿಟ್ಟಿನಲ್ಲಿ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಅವರ ಕಾಲೇಜಿನಲ್ಲಿ ಕೋವಿಡ್‌ ಪರೀಕ್ಷೆಗೆ ಲ್ಯಾಬ್‌ ಸಜ್ಜುಗೊಳಿಸಿದ್ದಾರೆ ಎಂದರು. ಲ್ಯಾಬ್‌ ಪ್ರಾರಂಭಿಸಿದ್ದಕ್ಕಾಗಿ ಅವರಿಗೂ ಹಾಗೂ ಸಂಸ್ಥೆಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುವೆ. ದಾವಣಗೆರೆ ಜನತೆ ಇನ್ನು ಸ್ವಲ್ಪ ಸಮಾಧಾನದಿಂದ ಇರಬಹುದಾಗಿದೆ. ಹೆಚ್ಚುವರಿ ಪರೀಕ್ಷೆಗೆ ಇದರಿಂದ ಸಾಧ್ಯವಾಗಲಿದೆ. ದಾವಣಗೆರೆಜಿಲ್ಲೆಯಲ್ಲಿ ಇನ್ನೂ 2 ಲ್ಯಾಬ್‌ ಆರಂಭವಾಗಲಿವೆ.

ಭಾನುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಆರ್‌ ಎನ್‌ಟಿಸಿಪಿ ಮಷೀನ್‌ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಾರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ಉದ್ಘಾಟಿಸಲಿದ್ದಾರೆ. ಜತೆಗೆ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಕೂಡ ಇನ್ನೊಂದು ಲ್ಯಾಬ್‌ ತೆರೆಯಲಾಗುತ್ತಿದ್ದು, ಒಟ್ಟು ಮೂರು ಲ್ಯಾಬ್‌ ಜಿಲ್ಲೆಗೆ ಒದಗಿದಂತಾಗುತ್ತದೆ ಎಂದರು.

ಸಚಿವ ಬಿ.ಎ. ಬಸವರಾಜ್‌, ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಶಾಮನೂರು ಶಿವಶಂಕರಪ್ಪ, ಮಾಡಾಳ್‌ ವಿರೂಪಾಕ್ಷಪ್ಪ, ಮೇಯರ್‌ ಅಜಯಕುಮಾರ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next