Advertisement

ಎರಡೂವರೆ ತಿಂಗಳು ಹಸುಗೂಸಿಗೆ ಸೋಂಕು

09:32 PM Jun 02, 2020 | Sriram |

ದಾವಣಗೆರೆ: ಆನೆಕೊಂಡದ ಎರಡೂವರೆ ತಿಂಗಳು ಹಸುಗೂಸು, ಪೊಲೀಸ್‌ ಕಾನ್ಸ್‌ಟೇಬಲ್‌ ಒಳಗೊಂಡಂತೆ ಏಳು ಜನರಲ್ಲಿ ಮಹಾಮಾರಿ ಕೋವಿಡ್-19 ವಕ್ಕರಿಸಿದೆ.

Advertisement

ರೋಗಿ ನಂಬರ್‌ 2819ರ ಸಂಪರ್ಕದಿಂದ ಬಾಲಕಿಯ ತಾಯಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಈಗ ತಾಯಿ(ರೋಗಿ ನಂಬರ್‌3640) ಸಂಪರ್ಕದಿಂದ ಎರಡೂವರೆ ತಿಂಗಳ ಹೆಣ್ಣು ಮಗವಿಗೂ (3638) ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

ದಾವಣಗೆರೆ ಬಡಾವಣಾ ಪೊಲೀಸ್‌ ಠಾಣೆಯ 40 ವರ್ಷದ ಕಾನ್ಸ್‌ಟೇಬಲ್‌(ರೋಗಿ ನಂಬರ್‌ 3637) ಸೋಂಕು ಕಾಣಿಸಿಕೊಂಡಿದೆ. ಹೆಲ್ತ್‌ ಬುಲೆಟಿನ್‌ ಮಾಹಿತಿಯಂತೆ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.

35 ವರ್ಷದ ವಯೋಮಾನದ ವ್ಯಕ್ತಿ(ರೋಗಿ ನಂಬರ್‌ 3635)ಗೆ ರೋಗಿ ನಂಬರ್‌ 1808 ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದಿಂದ ಹಿಂತಿರುಗಿದ್ದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ನಂಬರ್‌ 2560ರ ಸಂಪರ್ಕದಿಂದ 14 ವರ್ಷದ ಬಾಲಕಿಗೆ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್‌ 623ರ ಸಂಪರ್ಕದಿಂದ 65 ವರ್ಷದ ಮಹಿಳೆ(ರೋಗಿ ನಂಬರ್‌ 3657) ಕೋವಿಡ್-19 ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 163 ಪ್ರಕರಣಗಳು ವರದಿಯಾಗಿದ್ದು, 121 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.4 ಜನರು ಮರಣ ಹೊಂದಿದ್ದಾರೆ. ಒಟ್ಟು 38 ಸಕ್ರಿಯ ಪ್ರಕರಣಗಳಿವೆ. ನಿನ್ನೆ 276 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 772 ನೆಗೆಟಿವ್‌ ಎಂದು ವರದಿ ಬಂದಿದೆ. ಈವರೆಗೆ ಒಟ್ಟು 8,982 ಜನರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 8261 ನೆಗೆಟಿವ್‌ ಎಂದು ವರದಿ ಬಂದಿದೆ. ಇನ್ನೂ 558 ಮಾದರಿಗಳ ವರದಿ ಬರಬೇಕಾಗಿದೆ.

Advertisement

16 ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಪ್ರತಿ ದಿನ ಜ್ವರ, ಐಎಲ್‌ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್‌ ಝೋನ್‌ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ತೀವ್ರ ಉಸಿರಾಟದ ತೊಂದರೆಗೆ(ಸಾರಿ)ಸಂಬಂಧಿ ಸಿದಂತೆ ಈವರೆಗೆ 335 ಪರೀಕ್ಷೆ ನಡೆಸಲಾಗಿದ್ದು 3 ಪಾಸಿಟಿವ್‌ ಬಂದಿದ್ದು, 6ರ ಫಲಿತಾಂಶ ನಿರೀಕ್ಷೆಯಲ್ಲಿದೆ. ಶೀತ ಕೆಮ್ಮು ಜ್ವರ (ಐಎಲ್‌ಐ)ಕ್ಕೆ ಸಂಬಂಧಿಸಿದಂತೆ 634 ಪರೀಕ್ಷೆ ನಡೆಸಲಾಗಿದ್ದು, 605 ನೆಗೆಟಿವ್‌ ಎಂದು ವರದಿ ಬಂದಿದ್ದು, 7 ಪಾಸಿಟಿವ್‌ ವರದಿ ಬಂದಿದೆ ಮತ್ತು 22 ಜನರ ಪರೀಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next