ದಾವಣಗೆರೆ: ಕೊರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್ ಆಗಿ ಆರ್ಥಿಕ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೆರವಾಗುವ ದೃಷ್ಠಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಗೆ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ 7,31,001
ರೂಪಾಯಿ ಪರಿಹಾರ ನೀಡಲಾಯಿತು.
ಬುಧವಾರ ಒಕ್ಕೂಟದ ಗೌರವ ಅಧ್ಯಕ್ಷರೂ ಆಗಿರುವ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಮೂಲಕ ಮೂಲಕ ಸಹಕಾರ ಸಂಘಗಳ ಉಪನಿಬಂಧಕ ಬಿ.ಜಯ ಪ್ರಕಾಶ್‌ಗೆ ಚೆಕ್ ಹಸ್ತಾಂತರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಕಾರ್ಯದರ್ಶಿ ಎನ್.ಎಂ.ಜೆ.ಬಿ. ಮುರುಗೇಶ್, ಸದಸ್ಯರಾದ ಎಸ್.ಎಸ್. ಮಲ್ಲಿಕಾರ್ಜುನ್, ಬಿ.ಸಿ. ಉಮಾಪತಿ, ಎಸ್. ಕೆ. ವೀರಣ್ಣ, ದೇವರಮನಿ ಶಿವಕುಮಾರ್, ಕಂಚಿಕೇರಿ ಮಹೇಶ್, ಮತ್ತಿಹಳ್ಳಿ ವೀರಣ್ಣ, ಕಿರುವಾಡಿ ಸೋಮಶೇಖರ್, ಕುರ್ಕಿ ಕುಬೇರಪ್ಪ, ರಮಣ್‌ಲಾಲ್, ಜಯಕುಮಾರ್, ಓಂಕಾರಪ್ಪ, ಸಿ. ಚಂದ್ರಶೇಖರ್, ಆರ್.ಜಿ. ಶ್ರೀನಿವಾಸ ಮೂರ್ತಿ, ಡಿ.ವಿ.ಆರಾಧ್ಯಮಠ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮತ್ತಿತರರಿದ್ದರು. ದಾವಣಗೆರೆ ಅರ್ಬನ್ ಕೋ- ಆಪ್‌ರೇಟಿವ್ ಬ್ಯಾಂಕ್-1.70 ಲಕ್ಷ, ಬಾಪೂಜಿ ಬ್ಯಾಂಕ್ -1.50 ಲಕ್ಷ, ದಾವಣಗೆರೆ-ಹರಿಹರ ಅರ್ಬನ್ ಕೋ ಆಪ್‌ರೇಟಿವ್ ಬ್ಯಾಂಕ್-1.50 ಲಕ್ಷ, ಶಿವ ಕೋ- ಆಪ್‌ರೇಟಿವ್ ಬ್ಯಾಂಕ್-1. 10 ಲಕ್ಷ ಕನ್ನಿಕಾ ಪರಮೇಶ್ವರಿ ಕೋ- ಆಪ್‌ರೇಟಿವ್ ಬ್ಯಾಂಕ್-1. 01 ಲಕ್ಷ ಅಂಭಾಭವಾನಿ ಕೋ-
ಆಪ್‌ರೇಟಿವ್ ಬ್ಯಾಂಕ್ 25 ಸಾವಿರ, ಸಿಟಿ ಕೋ- ಆಪ್‌ರೇಟಿವ್ ಬ್ಯಾಂಕ್- 15 ಸಾವಿರ ಮುರುಘರಾಜೇಂದ್ರ ಕೋ- ಆಪ್‌ರೇಟಿವ್ ಬ್ಯಾಂಕ್-10 ಸಾವಿರ ರೂಪಾಯಿ ದೇಣಿಗೆ ನೀಡಿವೆ.