Advertisement
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಡಿ. 19 ರಿಂದ ನಡೆಯುವ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಮಹಾಸಭಾದ ಅಧಿವೇಶನದಲ್ಲಿನ ಅನೇಕ ವಿಚಾರಧಾರೆಗಳು ಸಮಾಜಕ್ಕೆ ದಿಕ್ಸೂಚಿ ಮತ್ತು ಅಮೂಲ್ಯವಾಗಿರುವುದರಿಂದ ತಾವು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಹಾಸಭಾದ ಅಧಿವೇಶನವನ್ನು ಮುಂದೂಡಬೇಕು ಎಂಬುದಾಗಿ ಸಮಾಜದ ಅನೇಕ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತ ಪಡಿಸಿರುವುದರಿಂದ ಮುಂದೂಡಲಾಗಿದೆ ಎಂದರು.
ಮುಂದಿನ ೨೦೨೩ರ ಫೆ. 11 ರಿಂದ 13 ರ ವರೆಗೆ ಅದೇ ಎಂಬಿಎ ಕಾಲೇಜು ಮೈದಾನದಲ್ಲಿ ಇನ್ನೂ ಹೆಚ್ಚಿನ ಹುರುಪು, ವೈಭವದಿಂದ 23ನೇ ಅಧಿವೇಶನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್. ಗಣೇಶ್, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ಕಾರ್ಯದರ್ಶಿ ರೇಣುಕ ಪ್ರಸನ್ನ, ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಶುಭ ಐನಳ್ಳಿ, ನಿರ್ಮಲಾ ಸುಭಾಷ್, ಬಿ.ಜಿ. ರಮೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.