Advertisement
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖೀಲ್‌ಕೊಂಡಜ್ಜಿ ಮಾತನಾಡಿ, ಗೃಹ ಸಚಿವ ಅರಗ ಜ್ಞಾನೇಂದ್ರ, ದಾವಣಗೆರೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಅವರಿಗೆ ರಾಜ್ಯ, ದೇಶದ ದೈನಂದಿನ ಘಟನೆಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದ ಮೇಲೆ ಸಂಸದರು ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದು ಎಷ್ಟು ಸೂಕ್ತ, ದಾವಣಗೆರೆ ಸಂಸದರು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದರೆ ನಾನು ಪತ್ರಿಕೆಯನ್ನು ನೋಡುವುದಿಲ್ಲ ಎಂದು ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದರು.
Related Articles
Advertisement
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಎಚ್. ಜೆ. ಮೊಹಿದ್ದಿನ್ ಮಾತನಾಡಿ, ದೇಶದಲ್ಲಿ ತಮಗೆ ಬೇಕಾದ ವಿಷಯಗಳ ಬಗ್ಗೆ ಕಾನೂನು ತಿದ್ದುಪಡಿ ಮಾಡುತ್ತಿರುವ ಸರ್ಕಾರ, ಅತ್ಯಾಚಾರದ ಬಗ್ಗೆ ಮಾತ್ರ ಮೃದು ಧೋರಣೆ ತೋರುತ್ತಿರುವುದು ವಿಷಾದನೀಯ ಎಂದು ದೂರಿದರು.
ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್, ವಿನಯ್ ಜೋಗಪ್ಪನವರ್, ಇಮ್ರಾನ್ ಖಾನ್, ವಾಜಿದ್, ಇರ್ಫಾನ್, ಓ.ಜಿ. ಕಿರಣ್, ಐಜ್ ಅಹಮದ್, ಜಫರುಲ್ಲ, ನದೀಮ್, ನವೀನ್ ನಾಲವಾಡಿ, ಜಬೀವುಲ್ಲಾ, ಖ್ವಾಜಾ, ಮೈನುದ್ದಿನ್, ಮೊಹಮದ್ ಬಾಷಾ, ತಿಪ್ಪೇಶ್, ಬಿಲಾಲ್,ವಿನೋದ್, ಸಂತೋಷ್ ಇತರರು ಇದ್ದರು.