Advertisement

ಎಸ್ಸೆಸ್ಸೆಲಿ ಫ‌ಲಿತಾಂಶದಲ್ಲಿ  ಜಿಲ್ಲೆಯನ್ನು  ಮೊದಲ ಸ್ಥಾನಕ್ಕೆ ತನ್ನಿ

10:07 AM Feb 20, 2019 | Team Udayavani |

ದಾವಣಗೆರೆ: ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆಯನ್ನು ಫಲಿತಾಂಶದಲ್ಲಿ ನಂಬರ್‌ ಒನ್‌ ಶ್ರೇಣಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿ ಎಂದು ಅವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

Advertisement

ನಗರದ ಹದಡಿ ರಸ್ತೆಯ ಅಮೃತ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ತಾಲ್ಲೂಕು ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪರೀಕ್ಷೆ ಒಂದು ಹಬ್ಬ ಬನ್ನಿ ಸಂಭ್ರಮಿಸೋಣ ಹಾಗೂ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಯ ಮತ್ತು ಶ್ರಮಕ್ಕೆ ವಿದ್ಯಾರ್ಥಿಗಳು ಮೊದಲ ಆದ್ಯತೆ ನೀಡಬೇಕು. ಈಗಾಗಲೇ ಪರೀಕ್ಷಾ ಸಮೀಪಿಸುತ್ತಿರುವುದರಿಂದ ಅನಗತ್ಯವಾಗಿ ಸಮಯ ವ್ಯರ್ಥ ಮಾಡದೇ, ಸತತ ಪರಿಶ್ರಮದ ಮೂಲಕ ತಾವಂದುಕೊಂಡ ಗುರಿ ತಲುಪಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಯನ್ನು ಅಗ್ರಸ್ಥಾನನಲ್ಲಿ ಬರುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗುರುಕಾರುಣ್ಯದಲ್ಲಿ ವಿದ್ಯಾರ್ಥಿಗಳು ಗುರಿ ಮುಟ್ಟಬೇಕು. ತಾವೆಲ್ಲರೂ ಈಗಾಗಲೇ ಪರೀಕ್ಷಾ ಪೂರ್ವಭಾವಿಯಾಗಿ ಪಠ್ಯ ವಿಷಯವನ್ನು ತಿಳಿದುಕೊಂಡಿದೀªರಿ. ಇದರ ಜೊತೆಗೆ ಪರೀಕ್ಷೆ ಎದುರಿಸುವ ಸುಲಭ ಮಾರ್ಗಗಳನ್ನು ತಿಳಿಯಲು ಅನುಭವಿ ಮಾರ್ಗದರ್ಶಕರು, ಹಿರಿಯರ ಸಲಹೆ ಅಗತ್ಯ. ಹಾಗಾಗಿ ಗುರು, ಹಿರಿಯರ ಬುದ್ಧಿ ಮಾತುಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಮಾರ್ಗ ಕಂಡುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ದಿನಪೂರ್ತಿ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಗಲೆಲ್ಲಾ ಧಣಿದ ದೇಹಕ್ಕೆ ನಿದ್ರೆ ಕೂಡ ಅವಶ್ಯಕ. ಹಾಗಾಗಿ ರಾತ್ರಿ 10ಕ್ಕೆ ಮಲಗುವ ಮೂಲಕ ಪ್ರತಿದಿನ ಬೆಳಿಗ್ಗೆ 4ರಿಂದ 7 ಗಂಟೆಯವರೆಗೆ ಉಷಾ ಕಾಲದಲ್ಲಿ ಓದುವ ಪ್ರಯತ್ನ ಮಾಡಬೇಕು. ಏಕೆಂದರೆ ಈ ಸಮಯದಲ್ಲಿ ಓದಿದ ವಿಷಯಗಳು ಹೆಚ್ಚು ನೆನೆಪಿನಲ್ಲಿ ಉಳಿಯುತ್ತವೆ ಎಂದು ಕೆಲವು ಉಪಯುಕ್ತ ಸಲಹೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ, ಧೈರ್ಯ, ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಆಯೋಜಿಸಿರುವುದು ನಿಜಕ್ಕೂ ಸ್ವಾಗತಾರ್ಹ. ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಇಂತಹ ಉಪನ್ಯಾಸದ ಮೂಲಕ ಪರೀಕ್ಷೆಯನ್ನು ಕಷ್ಟ ಎಂದುಕೊಳ್ಳುವ ಕೀಳರಿಮೆ ಬಿಟ್ಟು ಹಬ್ಬದಂತೆ ಆಚರಿಸಬೇಕು. ಆಗ ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸಬಹುದು ಎಂದು ತಿಳಿಸಿದರು. ಪರೀಕ್ಷೆಯ ಮಾರ್ಗದರ್ಶನ ಮತ್ತು ಜೀವನೋಪಾಯಕ್ರಮ ಕುರಿತು ಎಜುಶ್ರೈನ್‌ ಫೌಂಡರ್‌ ಡೈರೆಕ್ಟರ್‌ ಕಿರಣ್‌ಕುಮಾರ್‌ ಸಿದ್ದೆ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳ ನಿರ್ಣಯಗಳನ್ನು ಬುದ್ದಿವಂತಿಕೆಯಿಂದ ತೆಗೆದುಕೊಳ್ಳಬೇಕು. ಬುದ್ದಿ ಮತ್ತು ಮನಸ್ಸಿನ ಮಾತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರಿಗೂ ಬುದ್ದಿ ಇರುತ್ತದೆ. ಆದರೆ, ಕಾಲಕ್ರಮೇಣ ಬೆಳೆಯುತ್ತಾ ಮನಸ್ಸು ಬದಲಾಗುತ್ತಿರುತ್ತದೆ. ಹಾಗಾಗಿ ಮನಸ್ಸಿನ ಮಾತಿಗೆ ಹೆಚ್ಚು ಒತ್ತು ನೀಡದೇ ಬುದ್ದಿಯ ಮಾತು ಕೇಳುವ ಕಡೆ ಲಕ್ಷ್ಯ ವಹಿಸಬೇಕು. ಆಗ ಜೀವನದಲ್ಲಿ ಏಳ್ಗೆ ಸಾಧಿಸಬಹುದು ಎಂದರು.

Advertisement

ಕಾರ್ಯಾಗಾರದಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕಿನ 24 ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಇ.ಎಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಪಿ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಡಯಟ್‌ ಪ್ರಾಂಶುಪಾಲ ಎಚ್‌.ಕೆ. ಲಿಂಗರಾಜ್‌, ಅಶೋಕ್‌ಕುಮಾರ್‌, ಉಪನಿರ್ದೇಶಕರ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ನಿರಂಜನಮೂರ್ತಿ, ಸೋಮಶೇಖರಗೌಡ, ಜಿ.ಎ. ಪಂಚಾಕ್ಷರಪ್ಪ, ಮುರುಗೇಂದ್ರಯ್ಯ ಉಪಸ್ಥಿತರಿದ್ದರು.

ಟಿವಿ, ಮೊಬೈಲ್‌ ಆಕರ್ಷಣೆ ಬಿಟ್ಟು, ಪರಿಶ್ರಮದಿಂದ ಓದಿ. ತಾವು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳುವ ಜೊತೆಗೆ ತಮ್ಮ ಸ್ವ-ಸಾಮರ್ಥ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ವಿದ್ಯಾರ್ಥಿ ಹಂತದಲ್ಲಿ ಶ್ರದ್ಧೆಯಿಂದ ನಿರಂತರ ಪರಿಶ್ರಮ ಪಟ್ಟು ಓದಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು  ಎಂದು ಉಪನ್ಯಾಸಕ ಕಿರಣ್‌ ಕುಮಾರ್‌ ಸಿದ್ದೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next