Advertisement

100ಕ್ಕೂ ಅಧಿಕ ಮನೆಗಳ ಹಸ್ತಾಂತರ ಶೀಘ್ರ

03:05 PM Feb 27, 2021 | Team Udayavani |

ದಾವಣಗೆರೆ: ಮುಂದಿನ ತಿಂಗಳಲ್ಲಿ ಜಿಲ್ಲೆಯ ಪೊಲೀಸರಿಗೆ 100ಕ್ಕಿಂತಲೂ ಹೆಚ್ಚಿನ ಮನೆಗಳನ್ನು ಹಸ್ತಾಂತರಿಸಲಾಗುವುದು. 2025ರ ವೇಳೆಗೆ ಇನ್ನಷ್ಟು ಮನೆಗಳನ್ನು ಕಟ್ಟಿಸಿಕೊಡುವುದಾಗಿ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದರು.

Advertisement

ಶುಕ್ರವಾರ ಜಿಲ್ಲಾ ರಕ್ಷಣಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು  ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಪೊಲೀಸರಿಗೆ ಮನೆಯ ಸೌಲಭ್ಯದ ಕೊರತೆ ವಿಷಯ ಚರ್ಚೆಗೆ ಬಂದಿತು. ಮುಂದಿನ ತಿಂಗಳಲ್ಲಿ 100 ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದರು. ಪೊಲೀಸ್‌ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಇನ್ಸ್‌ಪೆಕ್ಟರ್‌ ಮಟ್ಟದ ಪರಿಶೀಲನಾ ಸಭೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಎಲ್ಲರೂ ಉತ್ತಮ ಕೆಲಸ ಮಾಡಿದ್ದಾರೆ. ಕಾನ್ಸ್‌ಟೇಬಲ್‌ಗ‌ಳಿಂದ ಹಿಡಿದು ಐಜಿ ಮಟ್ಟದವರೆಗೆ ಎಲ್ಲರೂ ಕಷ್ಟದಿಂದ ಕೆಲಸ ಮಾಡಿದ್ದಾರೆ. ಕೋವಿಡ್‌ ಸಮಯದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಪೊಲೀಸರ ಬೇಡಿಕೆಗಳು, ತನಿಖೆ, ತುರ್ತು ಸಂದರ್ಭದಲ್ಲಿ ಜನರಿಗೆ ಯಾವ ರೀತಿ ಸ್ಪಂದಿಸಬೇಕು. ಯಾವ ರೀತಿ ಕೆಲಸ ಮಾಡಬೇಕು, ಬೀಟ್‌ ಸಿಸ್ಟ್‌ಂ ಸುಧಾರಣೆ ಬಗ್ಗೆ ಚರ್ಚೆಯಾಯಿತು. ಬೇರೆ ಬೇರೆ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ಆಗಿವೆ ಎಂದು ತಿಳಿಸಿದರು. ಮಾರಿಷಸ್‌ನಲ್ಲಿ 20 ವರ್ಷಗಳ ಹಿಂದೆ ಇದ್ದಾಗ ಅಲ್ಲಿಯ ವ್ಯವಸ್ಥೆಯೇ ಬೇರೆ. ನಮ್ಮ ದೇಶದಲ್ಲಿ ಪೊಲೀಸ್‌ ಸಿಸ್ಟಂ ಬೇರೆ. ಪೊಲೀಸ್‌ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು. ನಮ್ಮ ಸಮಸ್ಯೆಗಳು ದೊಡ್ಡದಿದ್ದು, ಎಷ್ಟು ಜನ ಪೊಲೀಸ್‌ ಕೊಟ್ಟರೂ ಸುಧಾರಣೆಯಾಗುತ್ತಿಲ್ಲ. ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next