Advertisement

ಬಿಸಿಲ ಧಗೆ : ಹಣ್ಣು-ಪಾನೀಯದ ಮೊರೆ ಹೋದ ಜನ

08:10 PM Mar 11, 2021 | Team Udayavani |

ಹೊನ್ನಾಳಿ : ಬೇಸಿಗೆ ಆರಂಭವಾಗುತ್ತಿದ್ದಂತೆ ಕಲ್ಲಂಗಡಿ, ಕರಬೂಜ, ಪಪ್ಪಾಯಿ, ಅನಾನಸ್‌, ದ್ರಾಕ್ಷಿ ಸೇರಿದಂತೆ ಹಣ್ಣುಗಳ ವ್ಯಾಪಾರ ಪಟ್ಟಣದಲ್ಲಿ ಜೋರಾಗಿ ನಡೆದಿದೆ.

Advertisement

ಮಾರ್ಚ್‌ ಮೊದಲ ವಾರದಲ್ಲಿಯೇ ಸೂರ್ಯ ತನ್ನ ತಾಪವನ್ನು ಭೂಮಿಯಡೆಗೆ ವ್ಯಾಪಕವಾಗಿ ಬಿಟ್ಟು ಬಿಸಿಲಿನ ಹೊಡೆತಕ್ಕೆ ಜೀವ ಸಂಕುಲ ಪರಿತಪಿಸುವಂತಾಗಿದೆ.  ಈಗಾಗಲೇ 35-36 ಡಿಗ್ರಿ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪ ಕಡಿಮೆ ಮಡಿಕೊಳ್ಳಲು ಜನರು ಹಣ್ಣು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.ಪಟ್ಟಣದ ಟಿಬಿ ವೃತ್ತದ ರಸ್ತೆ ಅಕ್ಕಪಕ್ಕ, ತುಂಗಭದ್ರಾ ನದಿ ಸೇತುವೆ ರಸ್ತೆಯ ಎರಡೂ ಬದಿ, ಸಂಗೊಳ್ಳಿ ರಾಯಣ್ಣ ವೃತ್ತ, ನ್ಯಾಮತಿ ರಸ್ತೆ ಇಕ್ಕೆಲಗಳಲ್ಲಿ, ಸಂಪಿಗೆರಸ್ತೆ, ತುಮ್ಮಿನಕಟ್ಟೆ ರಸ್ತೆ ಇಕ್ಕೆಲಗಳಲ್ಲಿ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ರಾಶಿ ಹಾಕಿಕೊಂಡು ಹಣ್ಣುಗಳ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.

ಎಲಾ ಹಣ್ಣುಗಳನ್ನು ಕೆಜಿ ರೂಪದಲ್ಲಿಯೇ ವ್ಯಾಪಾರಿಗಳು ವ್ಯಾಪಾರ ಮಾಡುವುದರಿಂದ ಒಂದು ಕೆಜಿ ಕಲ್ಲಂಗಡಿಗೆ ರೂ.20, ಕರಬೂಜ ರೂ.40 ಮಾರಾಟವಾಗುತ್ತಿವೆ. ದೊಡ್ಡ ಗಾತ್ರದ ಕಲ್ಲಂಗಡಿ ಸುಮಾರು 10 ಕೆಜಿ ತೂಗಿದರೆ ಅದರ ಒಟ್ಟು ಬೆಲೆ ರೂ.200 ಹೀಗೆ ಗಾತ್ರದೊಂದಿಗೆ ತೂಕ ಹೆಚ್ಚಾಗಿ ಬೆಲೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ.

ಹೀಗೆ ಗಾತ್ರಕ್ಕುನುಗುಣವಾಗಿ ಬೆಲೆಯನ್ನು ವ್ಯಾಪಾರಿಗಳು ನಿರ್ಧರಿಸುತ್ತಾರೆ. ಗ್ರಾಹಕರು ಕೆಲ ಸಂದರ್ಭದಲ್ಲಿ ಚೌಕಾಸಿ ಮಾಡಿ ಹಣ್ಣುಗಳನ್ನು ಕೊಂಡುಕೊಳ್ಳುತ್ತಾರೆ. ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದು ಹಣ್ಣುಗಳ ವ್ಯಾಪಾರ ಚೆನ್ನಾಗಿದೆ. ದಿನಕ್ಕೆ ರೂ.6ರಿಂದ ರೂ.8 ಸಾವಿರಗಳವ್ಯಾಪಾರವಾಗುತ್ತದೆ ಎಂದು ಹಣ್ಣಿನ ವ್ಯಾಪಾರಿ ಮುಸ್ತಫ ಹೇಳುತ್ತಾರೆ.ಕಲ್ಲಂಗಡಿ ಹಣ್ಣುಗಳನ್ನು ಪಕ್ಕದ ತಾಲೂಕು ರಟ್ಟಿಹಳ್ಳಿ ಹಾಗೂ ತಮಿಳುನಾಡಿನಿಂದ ತರಿಸುತ್ತೇವೆ. ಕಲ್ಲಂಗಡಿ, ಕರಬೂಜ, ಪೊಪ್ಪಾಯಿ, ಅನಾನಸ್‌, ಬಾಳೆಹಣ್ಣುಗಳ ಮಿಶ್ರಣ ಮಾಡಿ ಫ್ರೂಟ್‌ ಸಲಾಡ್‌ ಮಾಡಿ ಗ್ರಾಹಕರಿಗೆ ಕೊಡುತ್ತೇವೆ. ಒಂದು ಪ್ಲೇಟ್‌ ಫ್ರೂಟ್‌ ಸಲಾಡ್‌ಗೆ ರೂ.20 ತೆಗೆದುಕೊಳ್ಳುತ್ತೇವೆ. ಈ ದರ ವ್ಯಾಪಾರಿಯಿಂದ ವ್ಯಾಪಾರಿಗೆ ಬದಲಾಗುತ್ತದೆ ಎಂದು ಹಣ್ಣುಗಳ ವ್ಯಾಪಾರಿಗಳು ಹೇಳುತ್ತಾರೆ.

ಶಿವರಾತ್ರಿ-ವ್ಯಾಪಾರ ಜೋರು : ಶಿವರಾತ್ರಿ ಬಂದಿರುವುದರಿಂದ ಹಣ್ಣುಗಳ ವ್ಯಾಪಾರಕ್ಕೆ ಮತ್ತಷ್ಟು ಕಳೆಕಟ್ಟಿದೆ. ಹಬಕ್ಕೆ ಕಲ್ಲಂಗಡಿ, ದ್ರಾಕ್ಷಿ, ಸಪೋಟ, ಕಿತ್ತಳೆ, ಮೊಸಂಬಿ ಸೇರಿದಂತೆ ಇತರ ಹಣ್ಣುಗಳು ಬೇಕೇ ಬೇಕು. ಇದರಿಂದ ಗ್ರಾಹಕರು ಸ್ಥಳದಲ್ಲಿಯೇ ಹಣ್ಣುಗಳನ್ನು ಸೇವನೆ ಮಾಡಿ ಹಬ್ಬಕ್ಕೆ ಕೊಂಡುಕೊಂಡು ಹೋಗುತ್ತಾರೆ. ವಾರದಸಂತೆ ಹಿನ್ನೆಲೆಯಲ್ಲಿ ಪೇಟೆ ಜನರಿಂದ ತುಂಬಿ ತುಳುಕುತ್ತಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next