Advertisement

ಸಿರಿಗೆರೆ ಮಠದ ಸೇವೆ ಸ್ತುತ್ಯರ್ಹ

08:42 PM Jun 21, 2021 | Team Udayavani |

ದಾವಣಗೆರೆ: ಸಿರಿಗೆರೆ ಮಠ ಜನರ ಸಂಕಷ್ಟಕ್ಕೆ ತತ್‌ಕ್ಷಣಕ್ಕೆ ಸ್ಪಂದಿಸುವಂತಹ ಮಠವಾಗಿದೆ ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದರು.

Advertisement

ಭಾನುವಾರ ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ತರಳಬಾಳು ಯುವಕರ ಸಂಘದಿಂದ ನಡೆಯುತ್ತಿರುವ ಅನ್ನ ದಾಸೋಹ ಕಾರ್ಯ ವೀಕ್ಷಿಸಿದ ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಸಿರಿಗೆರೆ ಮಠ ಸದಾ ಜನರ ಸಂಕಷ್ಟಕ್ಕೆ ನೆರವು ನೀಡುತ್ತಾ ಬರುತ್ತಿದೆ. ಕೊರೊನಾ ಸಂದರ್ಭದಲ್ಲಿ ತರಳಬಾಳು ಯುವಕರ ಸಂಘದಿಂದ ನಿರಂತರವಾಗಿ 52 ದಿನಗಳ ಕಾಲ ಅನ್ನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಸೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿರಿಗೆರೆ ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಜನರಿಗೆ ಕಷ್ಟ ಎಂದು ಬಂದಾಗ ನೆರವಿಗೆ ಬರುವುದನ್ನು ಕಾಣಬಹುದು. ಕಳೆದ ಕೆಲವಾರು ವರ್ಷಗಳ ಹಿಂದೆ ಚನ್ನಗಿರಿ ಇತರೆ ಭಾಗದಲ್ಲಿ ರೈತರು ತೆಂಗಿನ ಮರಗಳ ಕಳೆದುಕೊಂಡು ಕಷ್ಟದಲ್ಲಿರುವಾಗ ಸ್ವಾಮೀಜಿಯವರು ರೈತರಿಗೆ ನೆರವಾಗಿದ್ದರು. ಸ್ವಾಮೀಜಿಯವರು ತಮಗೆ ಸೂಚಿಸುವಂತಹ ಯಾವುದೇ ಕೆಲಸವನ್ನು ತಲೆಬಾಗಿ ನಡೆಸಿಕೊಡುವುದಾಗಿ ತಿಳಿಸಿದರು.

ಕೊರೊನಾದ ಸಂಕಷ್ಟದ ಸಮಯದಲ್ಲಿ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ ಒಳಗೊಂಡಂತೆ ಅನೇಕರು ಕೆಲಸ ಮಾಡುತ್ತಿದ್ದಾರೆ. ತರಳಬಾಳು ಯುವಕರ ಸಂಘದ ಪದಾಧಿಕಾರಿಗಳು ತಮ್ಮ ಮನೆಗಳ ಕೆಲಸ ಬದಿಗಿರಿಸಿ ಹಗಲಿರುಳು ಕೊರೊನಾ ಪೀಡಿತರಿಗಾಗಿ ಅನ್ನ ದಾಸೋಹ ನಡೆಸುತ್ತಿರುವ ಸೇವೆಯನ್ನು ಎಷ್ಟು ವರ್ಣಿಸಿದರೂ ಕಡಿಮೆ. ಈ ರೀತಿಯ ಸೇವಾ ಕಾರ್ಯ ನಿರಂತರವಾಗಿರಲಿ. ನಾನು ಸಹ ಜಗಳೂರು ಜನತೆಯ ಆಶೀರ್ವಾದದ ಫಲದಿಂದ ಕೊರೊನಾದಿಂದ ಗುಣಮುಖನಾಗಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ತರಳಬಾಳು ಯುವಕರ ಸಂಘದಿಂದ ನಡೆಸುತ್ತಿರುವ ಅನ್ನ ದಾಸೋಹಕ್ಕೆ ವೈಯಕ್ತಿಕವಾಗಿ 50 ಸಾವಿರ ನೀಡುವುದಾಗಿ ತಿಳಿಸಿದರು.

ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದದ ಬಲದಿಂದ ತರಳಬಾಳು ಯುವಕರ ಸಂಘದವರು 52 ದಿನಗಳಿಂದ ಕೊರೊನಾ ಸೋಂಕಿತರು, ವಾರಿಯಸ್‌ ಗಳಿಗೆ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ. ನಾನು ನನ್ನ ಕೈಲಾದಷ್ಟು ನೆರವು ಮಾಡುತ್ತಿದ್ದೇನೆ. ಬೇರೆಯವರ ಕಡೆಯಿಂದಲೂ ನೆರವು ಕೊಡಿಸುತ್ತಿದ್ದೇನೆ ಎಂದು ತಿಳಿಸಿದರು. ತರಳಬಾಳು ಯುವಕರ ಸಂಘದ ಎಲ್ಲರೂ ತಮ್ಮ ಮನೆ-ಕಚೇರಿ ಇತರೆ ಎಲ್ಲ ಕೆಲಸ ಬಿಟ್ಟು ಹಗಲಿರುಳು ಅನ್ನ ದಾಸೋಹ ಮಾಡುತ್ತಿದ್ದಾರೆ.

Advertisement

ಉತ್ತಮ ಗುಣಮುಟ್ಟ, ಶುಚಿ ಮತ್ತು ರುಚಿಯಾದ ಊಟೋಪಚಾರ ಒದಗಿಸುತ್ತಿದ್ದಾರೆ. ಒಂದೊಮ್ಮೆ ಏನಾದರೂ ತೊಂದರೆ ಎನ್ನುವುದು ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತಂದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ತರಳಬಾಳು ಯುವಕರ ಸಂಘಕ್ಕೆ ವೈಯಕ್ತಿಕವಾಗಿ 2.5 ಲಕ್ಷ ದೇಣಿಗೆ ನೀಡಿದರು. ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ತರಳಬಾಳು ಯುವಕರ ಸಂಘ ಅನ್ನ ದಾಸೋಹ ಶ್ಲಾಘನೀಯ. ಕೊರೊನಾ ಎರಡನೇ ಅಲೆ ಮುಗಿಯುವ ಹಂತದಲ್ಲಿದೆ.

ಹಾಗಾಗಿ ಪ್ರತಿಯೊಬ್ಬರಿಗೂ ಕೊರೊನಾ ಎದುರಿಸುವಂತಹ ಗುರುತರ ಜವಾಬ್ದಾರಿ ಇದೆ. ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ಕೊರೊನಾವನ್ನು ಸಮರ್ಥವಾಗಿ ಎದುರಿಸೋಣ ಎಂದು ತಿಳಿಸಿದರು. ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕ ಮಾತುಗಳಾಡಿದರು.

ಮಾಜಿ ಮೇಯರ್‌ ಎಂ.ಎಸ್‌. ವಿಠಲ್‌, ನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್‌, ಎಚ್‌.ಸಿ. ಮಹೇಶ್‌, ಶಿವಕುಮಾರ್‌, ಎಂ.ಸಿ. ಶ್ರೀನಿವಾಸ್‌ ಇತರರು ಇದ್ದರು. ತರಳಬಾಳು ಯುವಕರ ಸಂಘದ ಅಧ್ಯಕ್ಷ ಶಶಿಧರ್‌ ಹೆಮ್ಮನಬೇತೂರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next