ದಾವಣಗೆರೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಅನುಮಾನಸ್ಪದಸಾವನ್ನು ಕೊಲೆ ಪ್ರಕರಣ ಎಂದು ದಾಖಲಿಸಿಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕುಎಂದು ಕರ್ನಾಟಕ ನವನಿರ್ಮಾಣ ಸೇನೆಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಚಿತ್ರದುರ್ಗ ತಾಲೂಕಿನಬಹದ್ದೂರ್‌ಘಟ್ಟದ ಕುಮಾರ್ ಎಂಬಾತನವಿರುದ್ಧ ದಾವಣಗೆರೆ ಸಿಇಎನ್ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿತ್ತು.ವಿಚಾರಣೆಗೆ ಕರೆ ತಂದಿದ್ದಾಗ ಸಾವನ್ನಪ್ಪಿದ್ದಾರೆ.ಪೊಲೀಸರೇ ಕುಮಾರ್‌ನನ್ನು ಕೊಲೆ ಮಾಡಿದ್ದಾರೆಎಂದು ದೂರಿದರು.
ಪೊಲೀಸರು ಸ್ವಯಂ ದೂರುದಾಖಲಿಸಿಕೊಳ್ಳುವ ಮೂಲಕ ಅಮಾಯಕಕುಮಾರ್ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ.ಕುಮಾರ್ ಸಾವಿನ ಬಗ್ಗೆ ಅವರ ಪತ್ನಿ ಹಾಗೂನಾವು ಪ್ರಕರಣ ದಾಖಲಿಸಲು ಸಿದ್ಧರಿದ್ದೆವು.ಆದರೆ ಪೊಲೀಸರು ಅದಕ್ಕೆ ಅವಕಾಶವನ್ನೇನೀಡಲಿಲ್ಲ. ಕುಮಾರ್ ಪತ್ನಿ ಹಾಗೂ ಮಗುವನ್ನುಮಧ್ಯರಾತ್ರಿ 1 ಗಂಟೆಯವರೆಗೆ ಇರಿಸಿಕೊಂಡುಬಲವಂತವಾಗಿ ಸುಮೊಟೋ ಕೇಸ್‌ಗೆ ಸಹಿಮಾಡಿಸಿಕೊಂಡಿದ್ದಾರೆ.
ನಾವು ಸುಮೊಟೋಕೇಸ್ ಒಪ್ಪುವುದಿಲ್ಲ. ಕೂಡಲೇ ರದ್ದುಪಡಿಸಬೇಕುಎಂದು ಒತ್ತಾಯಿಸಿದರು.ಕುಮಾರ್ ಮೃತಪಟ್ಟಿದ್ದಾನೆ ಎಂದು ಸಿಇಎನ್‌ಠಾಣೆಯ ವೃತ್ತ ನಿರೀಕ್ಷಕ ಬಿ.ವಿ. ಗಿರೀಶ್,ಚಿತ್ರದುರ್ಗದ ವಕೀಲರೊಬ್ಬರಿಗೆ ಕರೆ ಮಾಡಿತಿಳಿಸಿದ್ದಾರೆ. ಬೆಳಗ್ಗೆ 11ಕ್ಕೆ ಜಿಲ್ಲಾ ಚಿಗಟೇರಿಆಸ್ಪತ್ರೆಗೆ ಕುಮಾರ್‌ನ ಶವ ತೆಗೆದುಕೊಂಡುಹೋಗಲಾಗಿದೆ. 12 ಗಂಟೆಗಳ ಕಾಲ ಶವವನ್ನುಲಾಡ್ಜ್ನಲ್ಲಿ ಇಟ್ಟುಕೊಂಡಿದ್ದಾರೆ. ಕುಮಾರ್‌ನಕುಟುಂಬಕ್ಕೆ ಸಾವಿನ ವಿಚಾರ ತಿಳಿಸಿಲ್ಲ. ಮಾತ್ರವಲ್ಲಕುಮಾರ್‌ನನ್ನು ಬಂಧಿಸಿರುವ ಬಗ್ಗೆಯೂಕುಟುಂಬದವರಿಗೆ ಮಾಹಿತಿಯನ್ನೇ ನೀಡಿಲ್ಲಎಂದು ಆಕ್ಷೇಪಿಸಿದರು.
ಕುಮಾರ್ ಸಾವಿನ ಪ್ರಕರಣದ ದಾರಿ ತಪ್ಪಿಸುವಉದ್ದೇಶದಿಂದ ಪೊಲೀಸರು ಸುಮೊಟೋಕೇಸ್ ದಾಖಲಿಸಿಕೊಂಡಿರುವುದನ್ನು ಕೂಡಲೇರದ್ದುಗೊಳಿಸಬೇಕು. ಕುಮಾರ್ ಸಾವಿನ ಪ್ರಕರಣಕ್ಕೆಸಂಬಂಧಿಸಿದಂತೆ ಎಲ್ಲ ಅಗತ್ಯ ದಾಖಲೆಗಳೊಂದಿಗೆಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರುಸಲ್ಲಿಸಲಾಗುವುದು. ಆದಷ್ಟು ಬೇಗ ಮೃತಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದಹೋರಾಟ ನಡೆಸಲಾಗುವುದು ಎಂದುಎಚ್ಚರಿಸಿದರು.ಭಾರತೀಯ ದಲಿತ ಸಂಘರ್ಷ ಸಮಿತಿಸಂಸ್ಥಾಪಕ ಅಧ್ಯಕ್ಷ ಡಾ| ಪ್ರಕಾಶ್ ಬೀರಾವರಮಾತನಾಡಿ, ಮೃತ ಕುಮಾರ್ ಕುಟುಂಬದನಿರ್ವಹಣೆಗೆ ಪತ್ನಿಗೆ ಸರ್ಕಾರಿ ಹುದ್ದೆ ನೀಡಿ ಮನೆಕಟ್ಟಿಸಿಕೊಡಬೇಕು ಹಾಗೂ ಇತರೆ ಅಗತ್ಯ ಸೌಲಭ್ಯಒದಗಿಸಬೇಕು. ಇಲ್ಲವಾದ್ದಲ್ಲಿ ಹೋರಾಟನಡೆಸಲಾಗುವುದು ಎಂದರು.