ದಾವಣಗೆರೆ: ನಗರದಲ್ಲಿರುವ ಎಲ್ಲ ಅಂಗಡಿಗಳ ನಾಮಫಲಕಗಳಲ್ಲಿಶೇ. 70ರಷ್ಟು ಕನ್ನಡ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆಆಂಗ್ಲ ನಾಮಫಲಕಗಳಿಗೆ ದಂಡ ಹಾಕಿ ತೆರವುಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಿಧಾನಸಭಾಕ್ಷೇತ್ರದ ವತಿಯಿಂದ ನಡೆದ 66ನೇ ಕರ್ನಾಟಕ ರಾಜ್ಯೋತ್ಸವಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡನಾಡಿನಲ್ಲಿರುವವರು ಕನ್ನಡ ಭಾಷೆ ಬಳಸಬೇಕು ಹಾಗೂಬೆಳೆಸಬೇಕು. ಅನ್ಯ ಭಾಷೆ ಕಲಿಯುವುದಕ್ಕೆ ಯಾರ ವಿರೋಧವೂಇಲ್ಲ. ಆದರೆ ಕನ್ನಡ ಭಾಷೆ ಕಡ್ಡಾಯವಾಗಿ ಬಳಸಬೇಕು ಎಂದರು.
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದುಬೀದಿನಾಯಿಗಳನ್ನು ಹಿಡಿಯಲು ಟೆಂಡರ್ ಕರೆಯಲಾಗಿದೆ.ಮೂರ್ನಾಲ್ಕು ದಿನಗಳ ಒಳಗಾಗಿ ನಾಯಿಗಳನ್ನು ಹಿಡಿಸುವಕೆಲಸ ಮಾಡಲಾಗುತ್ತದೆ ಎಂದು ಮೇಯರ್ ತಿಳಿಸಿದರು.ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷದೇವರಮನಿ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷಎಂ.ಎಸ್. ರಾಮೇಗೌಡ, ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದಹೊರರಾಜ್ಯದವರು ಕರ್ನಾಟಕದ ಮೇಲೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ನಾವೆಲ್ಲರೂ ಜಾತಿ, ಧರ್ಮ ಎಲ್ಲವನ್ನೂ ಮೀರಿಕನ್ನಡಿಗರಾಗಿ ಬದುಕು ಬದುಕಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭುಸ್ವಾಮೀಜಿ, ಕರ್ನಾಟಕ ಎಂದರೆ ಅದು ಹೆಸರಲ್ಲ. ಅದು ನಮ್ಮಉಸಿರು ಎಂದರು. ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಜೆ.ಅಮಾನುಲ್ಲಾ ಖಾನ್ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್‌ರಾಜ್ಯ ಕಾರ್ಯದರ್ಶಿ ಟಿ ಅಜYರ್, ಯು.ಎಂ. ಮನ್ಸೂರ್‌ಅಲಿ , ಮಹಾನಗರ ಪಾಲಿಕೆಯ ಸದಸ್ಯ ಸೈಯದ್ ಚಾರ್ಲಿ,ಕರವೇ ಹಿರಿಯೂರ್ ತಾಲೂಕು ಅಧ್ಯಕ್ಷ ಉದಯಕುಮಾರ್,ದಾದಾಪೀರ್, ಕರವೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷಜಬಿವುಲ್ಲಾ, ಅನ್ವರ್, ಎಂ.ಡಿ. ರμàಕ್, ಭಾಷಾ ಸಾಬ್ ಇನ್ನಿತರರುಇದ್ದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನುಸನ್ಮಾನಿಸಲಾಯಿತು. ಸಿಪಿಐ ಕೆ.ಎಂ. ಗಜೇಂದ್ರಪ್ಪ, ಪತ್ರಕರ್ತ ಬಿ.ಸಿಕಂದರ್, ವಕೀಲರಾದ ರುಜ್ಯೀ ಖಾನ್, ಸಮೀವುಲ್ಲಾ. ಸೈಫುಲ್ಲಾ.ಲೋಹಿತ್, ಓಮೇಶ್‌ಮೂರ್ತಿ, ಹಾಲೇಶ್, ಶಿವರಾಜ್.ಹುಸೇನ್, ಕೊರೋನಾ ಯೋಧರನ್ನು ಸನ್ಮಾನಿಸಲಾಯಿತು.