Advertisement
ಈ ಬಾರಿ ಅವಧಿ ಮುಗಿದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಇರುವುದರಿಂದ ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ನಡುವೆ ಜಿಲ್ಲೆಯ ತಾಲೂಕುಗಳುಎರಡು ಮತಕ್ಷೇತ್ರಗಳಿಗೆ ಹಂಚಿಕೆಯಾಗಿರುವುದರಿಂದ ಹಾಗೂ ಜಿಲ್ಲೆಯವರು ಯಾರೂ ಸ್ಪರ್ಧಾ ಕಣದಲ್ಲಿಇಲ್ಲದೇ ಇರುವುದರಿಂದ ಉಳಿದ ಜಿಲ್ಲೆಗಳಿಗೆಹೋಲಿಸಿದರೆ ವಿಪ ಚುನಾವಣೆ ಕಾವು ಜಿಲ್ಲೆಯಲ್ಲಿ ಕೊಂಚ ಕಡಿಮೆಯೇ ಇದೆ.
ಇವರಲ್ಲಿ 1368 ಗ್ರಾಪಂ ಸದಸ್ಯರು,76 ನಗರ ಸ್ಥಳೀಯ ಸಂಸ್ಥೆ ಸದಸ್ಯರಿದ್ದಾರೆ. ಈ ಕ್ಷೇತ್ರಕ್ಕೆಸಂಬಂಧಿಸಿ ಸಂಸದರ ಮೂರು, ಶಾಸಕರ ನಾಲ್ಕುಹಾಗೂ ವಿಧಾನ ಪರಿಷತ್ ಸದಸ್ಯರ 10 ಮತಗಳಿವೆ.ಅದೇ ರೀತಿ ಜಿಲ್ಲೆಯಲ್ಲಿರುವ ಶಿವಮೊಗ್ಗಮತಕ್ಷೇತ್ರ ವ್ಯಾಪ್ತಿಯ ಹೊನ್ನಾಳಿ ತಾಲೂಕಿನಲ್ಲಿ 344,ನ್ಯಾಮತಿ ತಾಲೂಕಿನಲ್ಲಿ 190, ಚನ್ನಗಿರಿ ತಾಲೂಕಿನಲ್ಲಿ761ಮತದಾರರಿದ್ದಾರೆ. ಶಿವಮೊಗ್ಗ ಮತಕ್ಷೇತ್ರದಲ್ಲಿ ಒಟ್ಟು 1295 ಮತದಾರರಿದ್ದಾರೆ.
Related Articles
Advertisement
ಶಿವಮೊಗ್ಗಮತಕ್ಷೇತ್ರ ವ್ಯಾಪ್ತಿಯ ಹೊನ್ನಾಳಿತಾಲೂಕಿನಲ್ಲಿ 608, ಚನ್ನಗಿರಿತಾಲೂಕಿನಲ್ಲಿ 792 ಮತದಾರರಿದ್ದರು.ಕಳೆದ ಚುನಾವಣೆಗೆ ಹೋಲಿಸಿದರೆ ಪ್ರಸ್ತುತಚಿತ್ರದುರ್ಗ ಮತಕ್ಷೇತ್ರದಲ್ಲಿ 130 ಮತದಾರರು,ಶಿವಮೊಗ್ಗ ಮತಕ್ಷೇತ್ರದಲ್ಲಿ 105 ಮತದಾರರುಕಡಿಮೆಯಾಗಿದ್ದಾರೆ.
ಮತಗಟ್ಟೆ ಮಾಹಿತಿ: ಸ್ಥಳೀಯ ಸಂಸ್ಥೆ ಕ್ಷೇತ್ರದಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರಸ್ತುತ197 ಮತಗಟ್ಟೆಗಳನ್ನು ನಿಗದಿಪಡಿಸಲಾಗಿದೆ. ಚಿತ್ರದುರ್ಗಮತಕ್ಷೇತ್ರ ವ್ಯಾಪ್ತಿಯ ಹರಿಹರ ತಾಲೂಕಿನಲ್ಲಿ24, ದಾವಣಗೆರೆ ತಾಲೂಕಿನಲ್ಲಿ 42, ಜಗಳೂರುತಾಲೂಕಿನಲ್ಲಿ 23 ಮತಗಟ್ಟೆಗಳನ್ನು ಮಾಡಲಾಗಿದ್ದುಮತಕ್ಷೇತ್ರಕ್ಕೆ ಸಂಬಂಧಿಸಿ ಒಟ್ಟು 89 ಮತಗಟ್ಟೆಗಳನ್ನುಮಾಡಲಾಗಿದೆ.
ಅದೇ ರೀತಿ ಜಿಲ್ಲೆಯಲ್ಲಿರುವಶಿವಮೊಗ್ಗ ಮತಕ್ಷೇತ್ರ ವ್ಯಾಪ್ತಿಯ ಹೊನ್ನಾಳಿ ತಾಲೂಕಿನಲ್ಲಿ29, ನ್ಯಾಮತಿ ತಾಲೂಕಿನಲ್ಲಿ 17, ಚನ್ನರಿಗಿ ತಾಲೂಕಿನಲ್ಲಿ62 ಮತದಾರರಿದ್ದು ಶಿವಮೊಗ್ಗ ಮತಕ್ಷೇತ್ರದಲ್ಲಿಒಟ್ಟು 108ಮತಗಟ್ಟೆಗಳನ್ನು ಮಾಡಲಾಗಿದೆ.ಕಳೆದ 2016ರ ವಿಧಾನ ಪರಿಷತ್ ಚುನಾವಣೆವೇಳೆ ಜಿಲ್ಲೆಯಲ್ಲಿ ಒಟ್ಟು 207 ಮತಗಟ್ಟೆಗಳಲ್ಲಿಚುನಾವಣೆ ನಡೆದಿತ್ತು. ಮತದಾರರ ಸಂಖ್ಯೆಕಡಿಮೆಯಾಗಿರುವುದರಿಂದ ಮತಗಟ್ಟೆಗಳ ಸಂಖ್ಯೆಯೂಕಡಿಮೆಯಾಗಿದೆ.
ಕಳೆದ ಚುನಾವಣೆಗೆ ಹೋಲಿಸಿದರೆ ಈಬಾರಿ ಬರೋಬ್ಬರಿ 10 ಮತಗಟ್ಟೆಗಳು ಕಡಿಮೆಯಾಗಿವೆ.ಒಟ್ಟಾರೆ ಸ್ಥಳೀಯ ಸಂಸ್ಥೆ ಕ್ಷೇತ್ರದವಿಧಾನ ಪರಿಷತ್ ಚುನಾವಣೆಗಾಗಿ ಜಿಲ್ಲಾಡಳಿತಸಕಲ ಸಿದ್ಧತೆ ಮಾಡಿಕೊಂಡಿದ್ದರೆ ಇತ್ತ ರಾಜಕೀಯಪಕ್ಷಗಳು ಸಹ ತಮ್ಮದೇ ಆದ ರೀತಿಯಲ್ಲಿ ಮತಸೆಳೆಯುವ ಕಾರ್ಯವನ್ನು ಮುಂದುವರಿಸಿವೆ.ಈ ನಡುವೆ ಜಿಲ್ಲೆಯ ಮತದಾರರು ಎರಡೂ ಕ್ಷೇತ್ರಗಳಿಗೆತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲುಉತ್ಸುಕರಾಗಿದ್ದಾರೆ.ಎಚ್.ಕೆ. ನಟರಾಜ