ದಾವಣಗೆರೆ: ಪಕ್ಕಾ ಕಾಮಿಡಿ, ಥ್ರಿಲ್ಲರ್,ಕೌಟುಂಬಿಕ ಮನರಂಜನೆ ಕಥಾಹಂದರಹೊಂದಿರುವ “ಗೋವಿಂದ ಗೋವಿಂದ’ಚಲನಚಿತ್ರ ನ. 26 ರಂದು 130ಕ್ಕೂ ಹೆಚ್ಚುಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ತಿಲಕ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಚಿತ್ರದ ನಾಯಕಸುಮಂತ್ ಶೈಲೇಂದ್ರ ಬಹಳ ದಿನಗಳ ನಂತರಕನ್ನಡದಲ್ಲಿ ಕಾಮಿಡಿ ಮತ್ತು ಥ್ರಿಲ್ಲರ್ ಚಿತ್ರದಲ್ಲಿನಟಿಸಿದ್ದಾರೆ. ಕುಟುಂಬದವರು, ಗೆಳೆಯರುಎಲ್ಲರೂ ಯಾವುದೇ ಮುಜುಗರ ಇಲ್ಲದೆನೋಡಬಹುದಾದಂತಹ ಪಕ್ಕಾ ಕಾಮಿಡಿ ಚಿತ್ರಎಂದರು.ಮಾಡರ್ನ್ ಸುಪ್ರಭಾತ ಒಳಗೊಂಡಂತೆಆರು ಹಾಡುಗಳಿವೆ.
ಟೈಟಲ್ ಸಾಂಗ್‌ಯು-ಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.ಚಿತ್ರದ ನಿರ್ದೇಶಕನಾಗಬೇಕು ಎಂದುಹೊರಟ ಯುಕನೊಬ್ಬನ ನಿಜ ಜೀವನದಲ್ಲಿಚಿತ್ರದಲ್ಲಿನ ಪಾತ್ರಗಳು ಎದುರಾದಾಗ ಆತನಸ್ಥಿತಿ ಏನಾಗಿರುತ್ತೆ ಎನ್ನುವುದು ಚಿತ್ರದ ಒನ್‌ಲೈನ್‌ಸ್ಟೋರಿ. ಚಿತ್ರದ ನಾಯಕ ಬೆಂಗಳೂರಿನಿಂದವಿಜಯಪುರಕ್ಕೆ ಹೋಗಿರುತ್ತಾನೆ.
ಅಲ್ಲಿನಡೆಯುವ ಕಥೆ ಪ್ರಥಮಾರ್ಧದಲ್ಲಿದೆ. ನಂತರಬೆಂಗಳೂರಿಗೆ ಶಿಫ್ಟ್ ಆಗುತ್ತದೆ. ವಿಜಯಪುರದಲ್ಲಿ25 ದಿನ, ಮಧುಗಿರಿಯಲ್ಲಿರುವ ಏಷ್ಯಾದಲ್ಲೇಅತಿ ದೊಡ್ಡದಾದ ಏಕಶಿಲಾ ಬೆಟ್ಟ, ಕೋಲಾರ,ಬೆಂಗಳೂರಿನಲ್ಲಿ ಚಿತೀÅಕರಣ ಮಾಡಲಾಗಿದೆ.ಕನ್ನಡಿಗರು ಚಿತ್ರ ನೋಡುವ ಮೂಲಕಆಶೀರ್ವದಿಸಬೇಕು ಎಂದು ಮನವಿಮಾಡಿದರು.
ಚಿತ್ರದ ನಾಯಕ ಸುಮಂತ್ ಶೈಲೇಂದ್ರಮಾತನಾಡಿ, ದಾವಣಗೆರೆ ನಾನು ಹುಟ್ಟಿ,ಬೆಳೆದು, ಆಡಿದ ಊರು. ಹಾಗಾಗಿ ಇಲ್ಲಿಬರುವುದಕ್ಕೆ ತುಂಬಾ ಖುಷಿ ಆಗುತ್ತದೆ.”ಗೋವಿಂದ ಗೋವಿಂದ’ ಕಾಮಿಡಿ ಪ್ರಧಾನ ಚಿತ್ರ.ನಾನು ಹಿಂದೆ ಕೆಲಸ ಮಾಡಿದ್ದ ನಿರ್ದೇಶಕರು,ನಾಯಕಿಯರ ಜೊತೆ ಮತ್ತೆ ಚಿತ್ರ ಮಾಡಿಲ್ಲ.ಹೊಸಬರ ತಂಡದೊಂದಿಗೆ ಚಿತ್ರಗಳನ್ನುಮಾಡಿದ್ದೇನೆ. ಅದೇ ರೀತಿ “ಗೋವಿಂದಗೋವಿಂದ’ ಚಿತ್ರವನ್ನ ಹೊಸಬ ತಿಲಕ್‌ನಿರ್ದೇಶಿದ್ದಾರೆ. ಕಿರಿತೆರೆಯಿಂದ ಬಂದಿರುವಕವಿತಾ ಗೌಡ ಅವರೊಂದಿಗೆ ಪ್ರಥಮ ಬಾರಿಅಭಿನಯಿಸಿದ್ದೇನೆ.ಯುವ ಸಮೂಹಕ್ಕೆ ಒಳ್ಳೆಯಸಂದೇಶ ನೀಡುವ ಪಕ್ಕಾ ಕಾಮಿಡಿ, ಥ್ರಿಲ್ಲರ್‌ಕಥೆಯ ಚಿತ್ರವನ್ನು ಕನ್ನಡಿಗರು ನೋಡಿ ಯಶಸ್ಸಿಗೆಸಹಕರಿಸಬೇಕು ಎಂದು ಕೋರಿದರು.
ನಾಯಕಿ ಕವಿತಾ ಗೌಡ ಮಾತನಾಡಿ,”ಗೋವಿಂದ ಗೋವಿಂದ’ ಕಂಪ್ಲೀಟ್ ಕಾಮಿಡಿ,ಥ್ರಿಲ್ಲರ್, ಉತ್ತಮ ಸಂದೇಶದ ಕಥೆ ಹೊಂದಿದೆ.ತರಲೆಯೊಂದು ದೊಡ್ಡ ದುರಂತವೊಂದಕ್ಕೆ ಹೇಗೆಕಾರಣವಾಗುತ್ತದೆ ಎಂಬುದನ್ನು ತೋರಿಸಲಾಗಿದೆ.ಅಚ್ಯುತ್ ರಾವ್ ಅವರೊಂದಿಗೆ ಪ್ರಥಮ ಬಾರಿ ಅಭಿನಯಿಸಿದ್ದೇನೆ.
ನಿರ್ದೇಶಕರು ಕಥೆ, ಡೈಲಾಗ್‌ಹೀಗೆ ಇದೆ, ಅದೇ ರೀತಿ ಅಭಿನಯಿಸಬೇಕು.ಡೈಲಾಗ್ ಹೇಳಬೇಕು ಎಂದು ಎಲ್ಲಿಯೂಹೇಳದೆ ಮುಕ್ತವಾಗಿ ಅಭಿನಯಿಸುವ ಅವಕಾಶನೀಡಿದ್ದಾರೆ. ಶೈಲೇಂದ್ರಬಾಬು ಪ್ರೊಡಕ್ಷನ್‌ಚಿತ್ರವನ್ನು ಪ್ರೇಕ್ಷಕರು ಯಶಸ್ವಿಯಾಗಿಸುತ್ತಾರೆಎಂಬ ನಂಬಿಕೆ ಇದೆ ಎಂದರು.