ದಾವಣಗೆರೆ: ಮೈಸೂರು ಸಂಸದ ಪ್ರತಾಪ್‌ಸಿಂಹ ಪ್ರಿಯಾಂಕ ಖರ್ಗೆ ಅವರು ಹೆಣ್ಣೋ,ಗಂಡೋ ಎಂದು ಪ್ರಶ್ನೆ ಮಾಡಿರುವುದುಅತ್ಯಂತ ಖಂಡನಿಯ ಎಂದು ಜಿಲ್ಲಾಛಲವಾದಿ ಮಹಾಸಭಾದ ಅಧ್ಯಕ್ಷ ಎಸ್.ಶೇಖರಪ್ಪ ದೂರಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಉನ್ನತಸ್ಥಾನದಲ್ಲಿರುವ ಪ್ರತಾಪ್ ಸಿಂಹ ಅವರುಛಲವಾದಿ ಸಮಾಜದ ಪ್ರಮುಖನಾಯಕರಲ್ಲಿ ಒಬ್ಬರಾಗಿರುವ ಪ್ರಿಯಾಂಕಖರ್ಗೆ ಅವರು ಹೆಣ್ಣೋ, ಗಂಡೋ ಎಂದುಪ್ರಶ್ನಿಸಿರುವುದು ಎಲ್ಲರಿಗೂ ನೋವುಂಟು ಮಾಡಿದೆ.
ಛಲವಾದಿ ಮಹಾಸಭಾಅತ್ಯುಗ್ರವಾಗಿ ಖಂಡಿಸುತ್ತದೆ ಎಂದರು.ಹಿರಿಯ ನಾಯಕ ಮಲ್ಲಿಕಾರ್ಜುನಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆಎರಡು ಬಾರಿ ಶಾಸಕರಾಗಿ, ಸಚಿವರಾಗಿಕೆಲಸ ಮಾಡಿದವರು. ಆಡಳಿತ ಪಕ್ಷದಲ್ಲಿ,ಸರ್ಕಾರದಲ್ಲಿ ಕಂಡು ಬರುವಂತಹಲೋಪದೋಷಗಳ ಬಗ್ಗೆ ಕಾನೂನುಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವುದಕ್ಕೆ ಅವರನ್ನ ಹೆಣ್ಣೋ,ಗಂಡೋ ಎಂದು ಟೀಕಿಸಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಖ್ಯಾತಸಂಗೀತ ನಿರ್ದೇಶಕ ಹಂಸಲೇಖರವರುನೀಡಿರುವಂತಹ ಹೇಳಿಕೆ ಸರಿ ಇದೆ.
ಕೆಲ ರಾಜಕಾರಣಿಗಳು, ಮಠಾಧೀಶರುಮಾತನಾಡುವ ಸಂದರ್ಭದಲ್ಲಿ ನಾವೆಲ್ಲರೂಒಂದೇ… ಎಂದು ಪದೆ ಪದೇ ಹೇಳುತ್ತಾರೆ.ಆದರೆ, ಆ ರೀತಿ ನಡೆದುಕೊಳ್ಳುವುದಿಲ್ಲಎಂದು ಹೇಳಿದ್ದಾರೆ. ಮಹಾಸಭಾಹಂಸಲೇಖ ಅವರ ಹೇಳಿಕೆಯನ್ನಸ್ವಾಗತಿಸುತ್ತದೆ ಎಂದು ತಿಳಿಸಿದರು.
ಬಹು ದಿನಗಳಿಂದ ಸರ್ಕಾರದಿಂದಲೇಒನಕೆ ಓಬವ್ವ ಜಯಂತಿ ಆಚರಿಸಬೇಕುಎಂಬ ಬೇಡಿಕೆ ಇತ್ತು. ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್, ಶಾಸಕ ನೆಹರು ಚ. ಓಲೇಕಾರ್‌ಇತರರು ಆ ಬೇಡಿಕೆ ಈಡೇರಿಸಿರುವುದಕ್ಕೆಛಲವಾದಿ ಮಹಾಸಭಾ ಸರ್ಕಾರಕ್ಕೆಧನ್ಯವಾದ ಅರ್ಪಿಸುತ್ತದೆ ಎಂದುತಿಳಿಸಿದರು.ಜಿಲ್ಲಾ ಕಾರ್ಯಾಧ್ಯಕ್ಷ ಸಿ. ಜಯಪ್ಪಮಾತನಾಡಿ, ಪ್ರತಾಪ್ ಸಿಂಹ ಅವರುಪ್ರಿಯಾಂಕ ಖರ್ಗೆ ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವಂತಹ ಅಗತ್ಯವೇಇರಲಿಲ್ಲ. ಸಾರ್ವಜನಿಕ ಹಿತವನ್ನ ಹಾಳುಮಾಡುವಂತಹ ಹೇಳಿಕೆ ನೀಡುವುದು ಮುಂದುವರೆದಿದೆ.
ಪ್ರಿಯಾಂಕ ಖರ್ಗೆಹೆಣ್ಣೋ, ಗಂಡೋ ಎಂದು ಪ್ರಶ್ನಿಸುವ,ಟೀಕಿಸುವ ಯಾವುದೇ ಅಧಿಕಾರ ಪ್ರತಾಪ್‌ಸಿಂಹ ಅವರಿಗೆ ಇಲ್ಲ. ಪ್ರಿಯಾಂಕ ಖರ್ಗೆಅವರ ಕುರಿತು ಮಾಡಿರುವ ಟೀಕೆ ಇಡೀಸಮಾಜಕ್ಕೆ ಮಾಡಿರುವಂತಹ ಅಪಮಾನ.ಜನಾಂಗ ಆಧಾರಿತ ಹೇಳಿಕೆ ನೀಡುವುದುಪ್ರತಾಪಸಿಂಹ ಅವರಿಗೆ ಶೋಭೆತರುವಂತದಲ್ಲ ಎಂದು ತಿಳಿಸಿದರು.
ಮಹಾಸಭಾದ ಸಲಹಾ ಸಮಿತಿಅಧ್ಯಕ್ಷ ಎನ್. ರುದ್ರಮುನಿ ಮಾತನಾಡಿ,ಸಂಗೀತ ನಿರ್ದೇಶಕ ಹಂಸಲೇಖಾ ಅವರುನೀಡಿದ್ದಂತಹ ಹೇಳಿಕೆಗೆ ಸಂಬಂಧಿಸಿದಂತೆಕ್ಷಮೆ ಯಾಚಿಸಿದ ನಂತರವೂಹೀಗೆಯೇ ಕ್ಷಮೆ ಕೋರಬೇಕು ಎಂದುಒತ್ತಾಯ ಮಾಡುವುದು ಸರಿ ಅಲ್ಲ.ಹಂಸಲೇಖಾರವರ ವಿರುದ್ಧ ಕೆಲವು ದೂರು ದಾಖಲಾಗಿವೆ. ಸರ್ಕಾರ ಕೂಡಲೇ ಎಲ್ಲದೂರುಗಳನ್ನ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಛಲವಾದಿ ಮಹಾಸಭಾದ ಮಧುಛಲವಾದಿ, ಎಸ್. ರಾಮಯ್ಯ,ಬಸವನಾಳ್ ಹಾಲೇಶ್, ನವೀನ್ ಇತರರುಸುದ್ದಿಗೋಷ್ಠಿಯಲ್ಲಿದ್ದರು.