Advertisement

ದಾವಣಗೆರೆ :  ಕೋವಿಡ್ ನಿಂದ ಚೇತರಿಸಿಕೊಂಡವರೇ ಹೆಚ್ಚು..!

08:13 PM Jun 25, 2021 | Team Udayavani |

ದಾವಣಗೆರೆ : ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾದಿಂದ 299 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಗಿಂತಲೂ ಗುಣಮುಖರಾದವರೇ ಹೆಚ್ಚು.

Advertisement

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 165 , ಹರಿಹರದಲ್ಲಿ  48, ಜಗಳೂರಿನಲ್ಲಿ 8, ಚನ್ನಗಿರಿಯಲ್ಲಿ 37, ಹೊನ್ನಾಳಿಯಲ್ಲಿ 33 ಹಾಗೂ ಹೊರ ಜಿಲ್ಲೆಯ 8 ಜನರು ಒಳಗೊಂಡಂತೆ  299 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ 89 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 35 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ  16, ಜಗಳೂರಿನಲ್ಲಿ 3 , ಚನ್ನಗಿರಿಯಲ್ಲಿ  18, ಹೊನ್ನಾಳಿಯಲ್ಲಿ  11 ಹಾಗೂ ಹೊರ ಜಿಲ್ಲೆಯ ಆರು ಜನರು ಒಳಗೊಂಡಂತೆ 89 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 25941 ಹರಿಹರದಲ್ಲಿ 6751,  ಜಗಳೂರಿನಲ್ಲಿ 2651, ಚನ್ನಗಿರಿಯಲ್ಲಿ 6136, ಹೊನ್ನಾಳಿಯಲ್ಲಿ  6179, ಹೊರ ಜಿಲ್ಲೆಯ 1466 ಜನರು ಸೇರಿದಂತೆ ಈವರೆಗೆ ಒಟ್ಟು 49,124  ೪ ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 24842, ಹರಿಹರದಲ್ಲಿ 6584 , ಜಗಳೂರಿನಲ್ಲಿ  2689, ಚನ್ನಗಿರಿಯಲ್ಲಿ 5832, ಹೊನ್ನಾಳಿಯಲ್ಲಿ  5697, ಹೊರ ಜಿಲ್ಲೆಯ 1366 ಜನರು ಸೇರಿದಂತೆ 47,110 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1488 ಸಕ್ರಿಯ ಪ್ರಕರಣಗಳಿವೆ.

Advertisement

ಜಿಲ್ಲೆಯಲ್ಲಿ ಕೊರೊನಾದಿಂದ ಐವರು ಮೃತಪಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಕೆರೆಗಟ್ಟೆ ತಾಂಡದ 70 ವರ್ಷದ ವೃದ್ಧೆ, ದಾವಣಗೆರೆಯ ಎಸ್.ಕೆ.ಎಸ್. ಲೇಔಟ್‌ನ 71 ವರ್ಷದ ವೃದ್ಧ, ಆವರಗೆರೆ ಗ್ರಾಮದ 58 ವರ್ಷದ ಮಹಿಳೆ, ನಾಗರಕಟ್ಟೆ ಗ್ರಾಮದ 51 ವರ್ಷದ ಮಹಿಳೆ, ಹರಿಹರ ತಾಲೂಕಿನ ಕುಣೆಬೆಳಕೆರೆ ಗ್ರಾಮದ 55 ವರ್ಷದ ಮಹಿಳೆ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ 526 ಜನರು ಬಲಿಯಾಗಿದ್ದಾರೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 88 ಸೋಂಕಿತರು ಸಾಮಾನ್ಯ,  354 ಸೋಂಕಿತರು ಆಕ್ಸಿಜನ್, 17 ಸೋಂಕಿತರು ಎನ್‌ಐವಿ, 46 ಸೋಂಕಿತರು ವೆಂಟಿಲೇಟರ್ 21  ಸೋಂಕಿತರು ವೆಂಟಿಲೇಟರ್ ರಹಿತ, 232 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 212 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.

7 ಜನರಲ್ಲಿ ಬ್ಯ್ಲಾಕ್ ಫಂಗಸ್

ಜಿಲ್ಲೆಯಲ್ಲಿ  ಶುಕ್ರವಾರ 7 ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದೆ. ಈವರೆಗೆ ಜಿಲ್ಲೆಯಲ್ಲಿ  106  ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ33, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 16 , ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ  54 ಜನರು ಗುಣಮುಖರಾಗಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ 34, ಎಸ್.ಎಸ್. ಹೈಟೆಕ್‌ನಲ್ಲಿ 15, ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ 50 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next