Advertisement

ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರ

06:10 PM Nov 17, 2021 | Team Udayavani |

ದಾವಣಗೆರೆ: ಎಸ್‌.ಎಸ್‌.ಕೇರ್‌ ಟ್ರಸ್ಟ್‌ ಹಾಗೂ ಜೆ.ಜೆ.ಎಂವೈದ್ಯಕೀಯ ಮಹಾವಿದ್ಯಾಲಯಮತ್ತು ಬಾಪೂಜಿ ಆಸ್ಪತ್ರೆ ಹಾಗೂಬಾಪೂಜಿ ಡೆಂಟಲ್‌ ಕಾಲೇಜು,ಕಾಲೇಜು ಆಫ್‌ ಡೆಂಟಲ್‌ ಸೈನ್ಸ್‌ವತಿಯಿಂದ ಮಹಾನಗರ ಪಾಲಿಕೆ35ನೇ ವಾರ್ಡ್‌ನ ನಿಟುವಳ್ಳಿಯಲ್ಲಿಮಹಿಳೆಯರಿಗಾಗಿ ಉಚಿತ ಆರೋಗ್ಯಮತ್ತು ದಂತ ತಪಾಸಣಾ ಶಿಬಿರಹಮ್ಮಿಕೊಳ್ಳಲಾಗಿತ್ತು.

Advertisement

ಕಾಂಗ್ರೆಸ್‌ ಮುಖಂಡ ಗಣೇಶ ಹುಲ್ಮನಿ ಮಾತನಾಡಿ, ಬಾಪೂಜಿವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ,ಶಾಸಕರಾದ ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿಎಸ್‌.ಎಸ್‌. ಮಲ್ಲಿಕಾರ್ಜುನ್‌,ಪ್ರಭಾ ಮಲ್ಲಿಕಾರ್ಜುನ್‌ ಅವರಸೂಚನೆ ಮೇರೆಗೆ 35ನೇ ವಾರ್ಡ್‌ನನಿಟುವಳ್ಳಿಯ ಸರ್ಕಾರಿ ಶಾಲೆಯಲ್ಲಿಮಹಿಳೆಯರಿಗಾಗಿ ಉಚಿತ ಆರೋಗ್ಯಮತ್ತು ದಂತ ತಪಾಸಣಾ ಶಿಬಿರಏರ್ಪಡಿಸಲಾಗಿದೆ. ಈ ಶಿಬಿರದಿಂದಬಡ-ಮಧ್ಯಮ ವರ್ಗದವರಿಗೆಸಾಕಷ್ಟು ಅನುಕೂಲವಾಗಿದೆ ಎಂದರು.

ಮಹಾನಗರ ಪಾಲಿಕೆ ಸದಸ್ಯೆಸವಿತಾ ಗಣೇಶ ಹುಲ್ಮನಿ,ಬಾಪೂಜಿ ಆಸ್ಪತ್ರೆಯ ವೈದ್ಯಕೀಯನಿರ್ದೇಶಕ ಡಾ| ಕುಮಾರ್‌, ಡಾ|ಬಾಲು, ಎಸ್‌.ಎಸ್‌. ವೈದ್ಯಕೀಯಮಹಾವಿದ್ಯಾಲಯದ ನಿರ್ದೇಶಕಡಾ| ಎನ್‌.ಕೆ. ಕಾಳಪ್ಪನವರ್‌,ಉಪ ಪ್ರಾಂಶುಪಾಲ ಡಾ|ಅರುಣಕುಮಾರ್‌, ಮುಖಂಡರಾದಎಂ.ಆರ್‌. ಮಾಲತೇಶ್‌, ಉಮೇಶ್‌ಇತರರು ಇದ್ದರು. ಶಿಬಿರದಲ್ಲಿಮಹಿಳೆಯರಿಗೆ ರಕ್ತ ತಪಾಸಣೆ,ಕಣ್ಣಿನ ತಪಾಸಣೆ, ಸ್ತನ ಆರೋಗ್ಯತಪಾಸಣೆ, ದಂತ ತಪಾಸಣೆ ಹಾಗೂಡಯಾಬಿಟಿಕ್‌ ನ್ಯೂರೋ ಥೆರಪಿಚಿಕಿತ್ಸೆ ಮಾಡಲಾಯಿತು. ಸುಮಾರು200ಕ್ಕೂ ಹೆಚ್ಚು ಮಹಿಳೆಯರುವಿವಿಧ ತಪಾಸಣೆಗೆ ಒಳಗಾದರು.

Advertisement

Udayavani is now on Telegram. Click here to join our channel and stay updated with the latest news.

Next