ದಾವಣಗೆರೆ: ಸಮುದಾಯ ಭವನ ಮಕ್ಕಳುಹಾಗೂ ಇತರರಿಗೆ ಸಂಸ್ಕಾರ ನೀಡುವಂತಹಭವನಗಳಾಗಿ ರೂಪುಗೊಳ್ಳಬೇಕು ಎಂದುಹೆಬ್ಟಾಳು ವಿರಕ್ತ ಮಠದ ಶ್ರೀ ರುದ್ರೇಶ್ವರಸ್ವಾಮೀಜಿ ಆಶಿಸಿದರು.ತಾಲೂಕಿನ ಬಾಡ ಗ್ರಾಮದಲ್ಲಿಮಂಗಳವಾರ ಶ್ರೀ ಕರಿಯಮ್ಮದೇವಿ ದೇವಸ್ಥಾನಕಳಸಾರೋಹಣ ಮತ್ತು ಸಮುದಾಯಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ನೂತನವಾಗಿ ಲೋಕಾರ್ಪಣೆಗೊಂಡಿರುವಸಮುದಾಯ ಭವನದಲ್ಲಿ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ಅಚ್ಚುಕಟ್ಟಾಗಿನಡೆಯಬೇಕು ಎಂದರು.
ಬಹಳ ಕಷ್ಟಪಟ್ಟು ಸಮುದಾಯ ಭವನಗಳನ್ನುನಿರ್ಮಾಣ ಮಾಡಲಾಗುತ್ತದೆ. ಅವು ಮಕ್ಕಳಿಗೆಸಂಸ್ಕಾರ ನೀಡುವಂತಹ ಭವನಗಳಾಗಬೇಕು. ಬಡವರು, ದೀನ ದಲಿತರು, ಹಿಂದುಳಿದವರಿಗೆಸುಲಭದ ರೀತಿಯಲ್ಲಿ ಸಮುದಾಯಭವನಗಳು ಲಭ್ಯವಾಗುವಂತಹ ವ್ಯವಸ್ಥೆಮಾಡಬೇಕು. ಪ್ರತಿಯೊಬ್ಬರೂ ಸಮುದಾಯಭವನವನ್ನು ಸದುಪಯೋಗ ಪಡಿಸಿಕೊಳ್ಳಬೇಕುಎಂದು ತಿಳಿಸಿದರು.ಮಾಯಕೊಂಡ ಶಾಸಕ ಪ್ರೊ| ಎನ್.ಲಿಂಗಣ್ಣ ಮಾತನಾಡಿ, ಬಾಡ ಗ್ರಾಮದಲ್ಲಿಕುರುಬ ಸಮಾಜ ಬಾಂಧವರು ಸಮುದಾಯಭವನ ನಿರ್ಮಾಣ ಮಾಡಿರುವಂತದ್ದು ನಿಜಕ್ಕೂಶ್ಲಾಘನೀಯ.
ಹೆಚ್ಚಿನ ಸಮಾಜಮುಖೀ, ಕಲ್ಯಾಣಕಾರ್ಯಗಳು ನೆರವೇರುವಂತಾಗಲಿ. ಮೊದಲನೇಮಹಡಿ ನಿರ್ಮಾಣ ಪೂರ್ಣಗೊಂಡಿದ್ದು,ಎರಡನೇ ಮಹಡಿ ನಿರ್ಮಾಣಕ್ಕೆ 5 ಲಕ್ಷರೂ. ಅನುದಾನ ನೀಡುವುದಾಗಿ ಭರವಸೆನೀಡಿದರು.ಗ್ರಾಪಂ ಮಾಜಿ ಅಧ್ಯಕ್ಷ ಅಣಬೇರುಶಿವಮೂರ್ತಿ ಮಾತನಾಡಿ, ಕಳೆದ 20ವರ್ಷಗಳ ಹಿಂದೆ ಪ್ರಾರಂಭವಾದ ಕರಿಯಮ್ಮಸಮುದಾಯ ಭವನ ಲೋಕಾರ್ಪಣೆ ಆಗುತ್ತಿದೆ.ಇದಕ್ಕೆ ಮಾಜಿ ಸಂಸದ ಜಿ. ಮಲ್ಲಿಕಾರ್ಜುನಪ್ಪ,ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಮಾಜಿಶಾಸಕ ಕೆ. ಮಲ್ಲಪ್ಪ, ಕೆ. ಶಿವಮೂರ್ತಿ, ಎಂ.ಬಸವರಾಜ ನಾಯ್ಕ, ರಘು ಆಚಾರ್, ತಾಪಂಮಾಜಿ ಸದಸ್ಯರಾದ ಬಿ.ಎಚ್. ರಾಮಚಂದ್ರಪ್ಪ,ಮಂಜುಳಾ ಅಣಬೇರು ಶಿವಮೂರ್ತಿ ಇತರರುಕಾರಣರಾಗಿದ್ದಾರೆ. ಎಲ್ಲರೂ 30 ಲಕ್ಷ ರೂ.ಅನುದಾನ ನೀಡಿದ್ದಾರೆ ಎಂದು ಸ್ಮರಿಸಿದರು.
ಎರಡನೇ ಮಹಡಿ ಕಟ್ಟಲು ಜನಪ್ರತಿನಿಧಿಗಳು,ಇತರರು ಉದಾರ ಮನಸ್ಸಿನಿಂದ ದಾನ,ದೇಣಿಗೆ, ನೆರವು ನೀಡಬೇಕು ಎಂದು ಮನವಿಮಾಡಿದರು.ಜಿಪಂ ಮಾಜಿ ಅಧ್ಯಕ್ಷೆ ಶೈಲಜಾ ಬಸವರಾಜ್,ತಾಪಂ ಮಾಜಿ ಸದಸ್ಯರಾದ ಬಿ.ಎಚ್.ರಾಮಚಂದ್ರಪ್ಪ, ಜಿ.ಎಸ್. ರೇವಣಸಿದ್ದಪ್ಪ,ಎಸ್.ಆರ್. ಗುರುಶಾಂತಪ್ಪ, ಡಿ. ರವಿ, ಡಿಸಿಸಿಬ್ಯಾಂಕ್ ಮಾಜಿ ಅಧ್ಯಕ್ಷ ಡಿ. ಪ್ರಕಾಶ್, ಗ್ರಾಪಂಮಾಜಿ ಅಧ್ಯಕ್ಷ ಎಂ.ಡಿ. ಸುರೇಶ್, ದೇವಸ್ಥಾನಕಮಿಟಿ ಅಧ್ಯಕ್ಷ ತಿಮ್ಮಪ್ಪ, ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಮುಖಂಡರುಇದ್ದರು. ಶ್ರೀನಿವಾಸ್ ಪ್ರಾಸ್ತಾವಿಕವಾಗಿಮಾತನಾಡಿದರು. ಗಿರಿದಾಸ್ ಸ್ವಾಗತಿಸಿದರು.ಎಲ್‌ಐಸಿ ಸುರೇಶ್ ನಿರೂಪಿಸಿದರು. ನಾಗರಾಜ್‌ವಂದಿಸಿದರು.