Advertisement

ವೀಳ್ಯದೆಲೆಗೆ ಸೊರಗು ರೋಗ ಬಾಧೆ

05:48 PM Nov 17, 2021 | Team Udayavani |

ದಾವಣಗೆರೆ: ಪ್ರಸ್ತುತ ವರ್ಷ ಅತಿಯಾದಮಳೆಯಿಂದಾಗಿ ಹರಿಹರ ತಾಲೂಕಿನ ಬಹಳಷ್ಟುವೀಳ್ಯದೆಲೆ ತಾಕುಗಳಲ್ಲಿ ಮಣ್ಣಿನಲ್ಲಿ ತೇವಾಂಶಹೆಚ್ಚಾಗಿರುವ ಕಾರಣ ಕೆಲವು ಗ್ರಾಮಗಳವೀಳ್ಯದೆಲೆ ತೋಟಗಳಲ್ಲಿ ಸೊರಗು ರೋಗದಬಾಧೆ ತೀವ್ರವಾಗಿದೆ ಎಂದು ದಾವಣಗೆರೆಯ ಐಸಿಎಆರ್‌-ತರಳಬಾಳು ಕೃಷಿ ವಿಜ್ಞಾನಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡಎಂ.ಜಿ. ಹೇಳಿದರು.

Advertisement

ಹರಿಹರ ತಾಲೂಕಿನ ರಾಮತೀರ್ಥಗ್ರಾಮದಲ್ಲಿ ಏರ್ಪಡಿಸಿದ್ದ “ವೀಳ್ಯದೆಲೆಯಲ್ಲಿಸಮಗ್ರ ಬೇಸಾಯ ಕ್ರಮಗಳು’ ಕುರಿತಮುಂಚೂಣಿ ಪ್ರಾತ್ಯಕ್ಷಿಕೆ ತರಬೇತಿಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವೀಳ್ಯದೆಲೆಯಲ್ಲಿ ಅತಿಯಾದರಾಸಾಯನಿಕಗಳನ್ನು ಬಳಸದೆ ಸಾವಯವಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಅರ್ಕಾಸೂಕ್ಷಾಣುಜೀವಿಗಳ ಸಮ್ಮಿಶ್ರಣವನ್ನು ಐದುಮಿಲೀ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿಸಿಂಪರಣೆ ಮತ್ತು ಗಿಡದ ಬುಡಗಳಿಗೆಉಪಚಾರ ಮಾಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಲಭ್ಯ ರೂಪದಲ್ಲಿ ಬೆಳೆಗೆಸಿಗುವುದರಿಂದ ಉತ್ತಮ ಇಳುವರಿಯನ್ನುನಿರೀಕ್ಷಿಸಬಹುದು. ಜೊತೆಗೆ ರೋಗ ನಿರೋಧಕಶಕ್ತಿಯೂ ಹೆಚ್ಚುತ್ತದೆ ಎಂದರು.

ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ|ಅವಿನಾಶ್‌ ಟಿ.ಜಿ.,ಬೆಳೆಗಳಲ್ಲಿ ಸಸ್ಯಜನ್ಯಕೀಟನಾಶಕ ಹಾಗೂ ಜೈವಿಕ ಗೊಬ್ಬರಗಳಬಳಕೆ ಬಗ್ಗೆ ತಿಳಿಸಿಕೊಟ್ಟರು. ನಂತರತಾಲೂಕಿನ ರಾಮತೀರ್ಥ, ಹೊಳೆಸಿರಿಗೆರೆ,ಕಡಾರನಾಯಕನಹಳ್ಳಿ ಗ್ರಾಮದ ವಿವಿಧ ಅಡಿಕೆ,ತೆಂಗು, ಹೂವಿನ ತಾಕುಗಳಿಗೆ ವಿಜ್ಞಾನಿಗಳ ತಂಡಭೇಟಿ ನೀಡಿ ವೈಜ್ಞಾನಿಕ ಮಾಹಿತಿ ನೀಡಿತು.ಕೇಂದ್ರದ ಗೃಹ ವಿಜ್ಞಾನಿ ಡಾ| ಸುಪ್ರಿಯಾಪಿ. ಪಾಟೀಲ್‌, ರೈತರಾದ ಕುಬೇರ ಗೌಡ,ರುದ್ರೇಶ್‌, ಮಂಜಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next